ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨೮ ಶ್ರೀಮದ್ರಾಮಾಯಣವು (ಸರ್ಗ ೧. ಸುತ್ತಲೂ ಈ ಕಲ್ಲುಬಂಡೆಗಳಮೇಲೆ ಹೂಗಳನ್ನು ಚೆಲ್ಲುತ್ತಿರುವುವು ನೋ ಡು ವಾಯುವೇಗದಿಂದ ಎಷ್ಟೊಹೂಗಳು ನೆಲದಮೇಲೆ ಬಿದ್ದಿರುವುವು | ಈಗಲೇ ಕೆಲವು ಬೀಳುತ್ತಿರುವುವು ಮತ್ತೆ ಕೆಲವು ಆ ವೃಕ್ಷದಲ್ಲಿಯೇ ಆಂಟಿ ಕೊಂಡು ಬೀಳುವ ಸ್ಥಿತಿಯಲ್ಲಿರುವುವು ಇದನ್ನು ನೋಡಿದರೆ ವಸಂತದ ಗಾಳಿಯು ಈ ಹೂಗಳಿಂದ ಆಟವಾಡುತ್ತಿರುವಂತೆ ಕಾಣುವುದು ನೋಡು, # ಮತ್ತು ಈ ಮಂದಮಾರುತವು ಪಷಿತಗಳಾದ ವೃಕ್ಷಶಾಖೆಗಳನ್ನಲುಗಿ ಸುವುದರಿಂದ, ಆ ಹೂಗಳು ಕೆಳಗೆ ಬೀಳುವಾಗ, ಅವುಗಳಲ್ಲಿ ಮಕರಂದವಾನ ಮಾಡುತ್ತಿದ್ದ ದುಂಬಿಗಳು ಸಂಭ್ರಮದಿಂದ ಮೇಲೆಹಾರಿ ಝಂಕಾರವನ್ನು ಮಾಡುತ್ಯ, ಅತ್ತಿತ್ತ ಓಡಾಡುತ್ತಿರುವುದನ್ನು ನೋಡು' ನಟರಿಂದ ನರ್ತನ ವನ್ನು ಮಾಡಿಸುತ್ತ ಹಿಂದೆಸಿಂತು ಹಾಡುವವನಂತೆ,+ ಇವಸಂತಮಾರುತವು ವೃಕ್ಷಗಳಿಂದ ನರ್ತನವನ್ನು ಮಾಡಿಸುವುದಕ್ಕಾಗಿ ಮತ್ತಕೋಕಿಲಗಳ ಧ್ವನಿ ಯೆಂಬ ಗಾನವನ್ನು ತೋರಿಸುತ್ತ, ಪಪ್ಪತಗುಹೆಯಿಂದ ಹೊರಟು ಬೀಸು ತಿರುವುದನ್ನು ನೋಡು' ಈ ಗಾಳಿಯು ವೇಗದಿಂದ ಬೀಸುವಾಗ, ಅದರ ರಿಂದ, ಕರಿನ ಹೃದಯರಲ್ಲಿಯೂ ದಯೆಯಿಂದ ಜ್ಞಾನೋಪದೇಶವನ್ನು ಮಾಡತಕ್ಕೆ ಆಚಾರ್ಯರೆಂಬ ಭಾವವು ಸೂಚಿತವು

  • ಇಲ್ಲಿ ಪುಷ್ಪಭರಿತಗಳಾದ ಕೊಂಬೆಗಳು ವಾಯುಪ್ರೇರಿತಗಳಾಗಿ ಭ್ರಮರ ಝಂಕಾರಗಳಿಂದ ಕೂಡಿರುವುವೆಂಬುದರಿಂದ, ಭಗವಂತನು 'ಜ್ಞಾನೇತೃತ್ವಮೇ ಮತಂ” ಎಂಬುದಾಗಿ, ತನಗೆ ಆತ್ಮಭೂತರಾದ ಜ್ಞಾನಿಗಳಿಗೆ ಭಕ್ತಿಯನ್ನು ಹಚ್ಚಿಸು ವುದಕ್ಕಾಗಿ, ತಾನು ಭೂಮಿಯಲ್ಲಿ ಅವತರಿಸಲು ಇರ್ಮಾಲೋರ್ಕಾ ಕಾಮರೂನು ಸಂಚರ್ರ 1 ಏತತ್ವಾ ಮಗಾಯನ್ನಾ ಸ್ನೇ” ಎಂಬಂತೆ, ಅವನನ್ನು ಕುರಿತು ಸಾಮಗಾನ ವನ್ನು ಮಾಡುತ್ತ ಅನುಸರಿಸುತ್ತಿರುವ ಭಕ್ತ ಜನರು ಸಚಿತರಾಗುವರು
  • ಇಲ್ಲಿ ವೃಕ್ಷಗಳನ್ನಾಡಿಸುವುದಕ್ಕಾಗಿ ಗಾಳಿಯು ಧ್ವನಿಮಾಡುತ್ತ ಗುಹೆ ಯಿಂದ ಹೊರಟು ಬರುವುದೆಂಬುದರಿಂದ, ವೇದಪ್ರಸಾರಣದ ಮೂಲಕವಾಗಿ ಜನರಿಗೆ ಭಕ್ತಿಯನ್ನು ಹುಟ್ಟಿಸುವುದಕ್ಕಾಗಿ ಭಗವಂತನು ವೈಕುಂರದಿಂದ ಬಂದು ಅವತರಿಸುವ ನೆಂಬ ಭಾವವು ಸೂಚಿತವು

- £ ಇಲ್ಲಿ ವಾಯುವೇಗದಿಂದ ವೃಕ್ಷಶಾಖೆಗಳು ಒಂದಕ್ಕೊಂದಕ್ಕೆ ಕಟ್ಟಿಟ್ಟಂತೆ ಸೇರುವುದಾಗಿ ಹೇಳಿರುವುದರಿಂದ, ಭಗವತ್ಕೃಪೆಗೆ ಪಾತ್ರರಾದ ಭಾಗವತದಲ್ಲಿರುವ ಪರಸ್ಪರಾನುರಾಗವು ಸೂಚಿತವು.