ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ ಸರ್ಗ ೩೭ ] ಕಿಂಥಾಕಾಂಡವು. ಲ್ಲಿಯೂ, ತಮಾಲವನವೆಂದು ಪ್ರಸಿದ್ಧವಾದ ಹೊಂಗೆಯ ಕಾಡಿನಲ್ಲಿಯೂ, ನಾರಿಕೇಳವನದಲ್ಲಿ ವಾಸಮಾಡುತ್ತಿದ್ದ ವಾನರರೆಲ್ಲರೂ ಬಂದು ಸೇರಿ ದರು ಆ ವಾನರರ ಸಂಖ್ಯೆಯನ್ನು ಇಷ್ಟೆಂದು ನಿರ್ಣಯಿಸುವುದಕ್ಕೇ ಸಾಧ್ಯ ವಿಲ್ಲದಂತಿತ್ತು, ಹಾಗೆಯೇ ಅಲ್ಲಲ್ಲಿನ ಕಾಡುಗಳಿಂದಲೂ, ಗುಹೆಗಳಿಂದಲೂ ನದಿಗಳಿಂದಲೂ, ಮಹಾವೇಗವುಳ್ಳ ಅನೇಕವಾನರಸೈನ್ಯವು ಸೂರನನ್ನೇ ನುಂಗಿಬಿಡುವಂತೆ ಗುಂಪುಗುಂಪಾಗಿ ಬಂದುಸೇರಿತು ಅಲ್ಲಲ್ಲಿ ವಾನರರನ್ನು ತ್ವರಪಡಿಸುವುದಕ್ಕಾಗಿ ಹೋಗಿದ್ದ ವಾನರರೂತು ಹಿಮವತ್ವತವನ್ನು ಸೇರಿ, ಅಲ್ಲಿ ಒಂದು ಸುಪ್ರಸಿದ್ಧವಾದ ಮಹಾವೃಕ್ಷವನ್ನು ಕಂಡರು ಮೊ ದಲು ರಮಣೀಯವಾದ ಆ ಹಿಮವತ್ಪರತದಲ್ಲಿ ಸಮಸ್ತದೇವತೆಗಳಿಗೂ ಸಂತೋಷಕರವಾದ ಒಂದು ಮಾಹೇಶ್ವರಯಾಗವು ನಡೆಸಲ್ಪಟ್ಟಿತು ಯ ಜ್ಞಕಾಲದಲ್ಲಿ ಹೋಮಮಾಡುವಾಗ ಆ ಯಜ್ಞವು ನಡೆದ ಸ್ಥಳದಲ್ಲಿ ಅಲ್ಲಲ್ಲಿ ಚೆಲ್ಲಿದ ಆಜ್ಞಾದಿಹವಿಸ್ಸುಗಳ ಸಂಬಂದದಿಂದ ಹುಟ್ಟಿದುವುಗಳಾಗಿಯೂ, ಆ ಮೃತದಂತೆ ರುಚಿಕರಗಳಾಗಿಯೂ ಇದ್ದ ಫಲಮೂಲಗಳನ್ನು ಈ ವಾನ ರರು ಮೊದಲು ನೋಡಿದರು ಆ ಫಲಮೂಲಗಳನ್ನು ಒಂದಾವರ್ತಿ ಭುಜಿ ಸಿದವರಿಗೆ ಇನ್ನೊಂದುತಿಂಗಳವರೆಗೂ ಹಸಿವು ಬಾಯಾರಿಕೆಗಳೇ ಉಂಟಾಗ ವು ಈ ವಾನರವೀರರೆಲ್ಲರೂ ಆ ಫಲಮೂಲಗಳನ್ನು ಭುಜಿಸಿದುದಲ್ಲದೆ, ಅಲ್ಲಿ ಈ ದಿವೌಷಧಿಗಳನ್ನೂ ಸಂಗ್ರಹಿಸಿಟ್ಟುಕೊಂಡರು ತನ್ನೊಡೆಯನಾದ ಸು ಗ್ರೀವನ ಪ್ರೀತ್ಯರ್ಥವಾಗಿ ಆ ಯಜ್ಞಸ್ಥಲದಲ್ಲಿದ್ದ ಫಲಮೂಲಗಳಲ್ಲಿ ಯೂ,ಸುವಾಸನೆಯುಳ್ಳ ಹೂಗಳಲ್ಲಿಯೂ ಕೆಲವನ್ನು ಸಂಗ್ರಹಿಸಿಕೊಂಡರು ಇವಾನರರೆಲ್ಲರೂ ಸಮಸ್ತದಿಕ್ಕುಗಳಲ್ಲಿರುವಬೇರೆವಾನರರಿಗೂ ಈಸುಗ್ರೀವಾ ಜ್ಞೆಯನ್ನು ತಿಳಿಸಿ, ಅವರಿಗೆ ಮೊದಲೇ ಕಿಮ್ಮಿಂಥೆಗೆ ಬಂದು ಸೇರಿದ್ದರು.ಇವ ರೆಲ್ಲರೂ ಮನೋವೇಗವುಳ್ಳವರಾದುದರಿಂದ ಸುಗ್ರೀವನೂ ಲಕ್ಷಣನೂ ಸೇ ಬಿದ್ದ ಮುಹೂರ್ತದೊಳಗಾಗಿಯೇ ಹಿಂತಿರುಗಿ ಬಂದು,ತಾವು ತಂದಿದ್ದ ಪಲ ಮೂಲೌಷಧಿಗಳೆಲ್ಲವನ್ನೂ ಸುಗ್ರೀವನಿಗೆ ಕಾಣಿಕೆಯಾಗಿ ಸಮರ್ಪಿಸಿ ಆತನ ಮುಂದೆ ಕೈಮುಗಿದು ನಿಂತು ((ಸ್ವಾಮಿ ' ನಾವು ಸಮಸ್ತ ಪಕ್ವತಗಳನ್ನೂ, ಸಮುದ್ರಗಳನ್ನೂ, ವನಗಳನ್ನೂ ಸುತ್ತಿ, ಅಲ್ಲಲ್ಲಿರುವ ವಾನರರೆಲ್ಲರಿಗೂ ನಿ