ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫೬ ಶ್ರೀಮದ್ರಾಮಾಯಣವು [ಸರ್ಗ, ೩೮ ಮ್ಯಾಜ್ಞೆಯನ್ನು ತಿಳಿಸಿ ಬಂದಿರುವೆವು ಎಲ್ಲರೂ ನಿಮ್ಮಾಳ್ಮೆಯಿಂದ ಇಲ್ಲಿಗೆ ಬರುತ್ತಿರುವರು” ಎಂದರು ಇದನ್ನು ಕೇಳಿ ಸುಗ್ರೀವನು ಪರಮಸಂತುಷ್ಟ ನಾಗಿ, ಅವರು ತಂದಿಟ್ಟ ಕಾಣಿಕೆಯನ್ನು ಪ್ರೀತಿಯಿಂದ ಸ್ವೀಕರಿಸಿ ಅವರನ್ನು ಮನ್ನಿಸಿದನು ಇಲ್ಲಿಗೆ ಮೂವತ್ತೇಳನೆಯ ಸರ್ಗವು w+ ಸುಗ್ರೀವನೂ ಲಕ್ಷ್ಮಣನೂ ರಾಮನಬಳಿಗೆ ಹೋದುದು +m ಹೀಗೆ ಸುಗ್ರೀವನು ಆ ವಾನರರು ಕೊಟ್ಟ ಕಾಣಿಕೆಯನ್ನಂಗೀಕರಿಸಿ, ಅವರೆಲ್ಲರನ್ನೂ ಪ್ರಿಯವಾಕ್ಯಗಳಿಂದ ಮನ್ನಿಸಿ ಕಳುಹಿಸಿದನು ತಾನು ನಿಯ ಮಿಸಿದ ಕಾಠ್ಯವನ್ನು ತನ್ನ ಮನಸ್ತ್ರಪ್ತಿಯಾಗುವಂತೆ ನಿರ್ವಹಿಸಿಬಂದ ಆ ವಾನರದೂತರಲ್ಲರನ್ನೂ ಸನ್ಮಾನಿಸಿದಮೇಲೆ ಸುಗ್ರೀವನ ಮನಸ್ಸಿಗೆ ನೆಮ್ಮ ದಿಯುಂಟಾಯಿತುಇನ್ನು ಮಹಾಬಲಾಢನಾದ ರಾಮನೂ ತಾನೂ ಕೈ ತಾರ್ಥರಂದೆಣಿಸಿ ಸಂತೋಷಪರವಶನಾಗಿದ್ದನು ಇಷ್ಟರಲ್ಲಿ ಲಕ್ಷ್ಮಣನು ವಾನರಾಗ್ರೇಸರನಾದ ಆ ಸುಗ್ರೀವನನ್ನು ಕುರಿತು, ವಿನಯದಿಂದ ಪ್ರಿಯ ವಾಕ್ಯಗಳನ್ನಾಡಿ ಸಂತೋಷಪಡಿಸುತ್ತ, ಆತನೊಡನೆ, (ಎಲೆ ಸೌಮ್ಯನೆ' ನಿನಗೆ ಇಷ್ಟವಿದ್ದ ಪಕ್ಷದಲ್ಲಿ ನೀನು ಈಗಲೇ ಇಲ್ಲಿಂದ ಹೊರಡು ! ರಾಮನ ಬಳಿಗೆ ಹೋಗುವೆವು” ಎಂದನು ಇದನ್ನು ಕೇಳಿ ಸುಗ್ರೀವನು ಪರಮಸಂ ತುಷ್ಟನಾಗಿ ಲಕ್ಷ್ಮಣನನ್ನು ಕುರಿತು, ಎಲೈ ಮಹಾತ್ಮನೆ ಅದಕ್ಕೆ ತಡೆ ಯೇನು? ನಡೆ' ರಾಮನಬಳಿಗೆ ಹೋಗುವೆವು ನಾನು ನಿಮ್ಮಾಜ್ಞೆಯನ್ನನು ವರ್ತಿಸಿ ನಡೆಯುವವನೇ ಹೊರತು ಸ್ವತಂತ್ರನಲ್ಲ ” ಎಂದನು ಹೀಗೆ ಸು ಗ್ರೀವನು ಲಕ್ಷಣನೊಡನೆ ಹೇಳಿ, ಆಮೇಲೆ ತಾರೆಯನ್ನೂ, ಇತರಸ್ತಿಯ ರನ್ನೂ ಅಂತಃಪುರಕ್ಕೆ ಹೋಗುವಂತೆ ಅನುಜ್ಞೆಯನ್ನು ಕೊಟ್ಟು ಕಳುಹಿಸಿ ಬಿಟ್ಟನು. ಆಮೇಲೆ ಅಲ್ಲಿದ್ದ ಕೆಲವು ವಾನರಸೇವಕರನ್ನು ನೋಡಿ, ಎಲೈ ವಾನರರೆ' ಬನ್ನಿರಿ!” ಎಂದು ಗಟ್ಟಿಯಾಗಿ ಕೂಗಿದನು ಇದನ್ನು ಕೇಳಿದೆ ಡನೆ, ಅಂತಃಪುರಸ್ತ್ರೀಯರನ್ನು ನೋಡುವುದಕ್ಕರ್ಹರಾಗಿದ್ದ ಕೆಲವು ವಾನರ ರು ಬೇಗನೆ ಬಂದು ವಿನಯದಿಂದ ಕೈಮುಗಿದು ನಿಂತರು ಆಗ ಸುಗ್ರೀವ ನು ಆ ವಾನರರನ್ನು ನೋಡಿ, “ಎಲೈ ವಾನರರ' ಶೀಘ್ರದಲ್ಲಿ ನನ್ನ ಪಲ್ಲಕ್ಕಿ