ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧.] ಕಿಕ್ಕಿಂಧಾಕಾಂಡವು. ೧೧ ಕೂಗುತ್ತ ಇಲ್ಲಿ ಸುತ್ತಲೂ ಇರುವ ಗಿಡುಬಳ್ಳಿಗಳಲ್ಲಿ ಸೇರಿಕೊಂಡಿರುವುವು ನೋಡು' ಇದೊ' ಇಲ್ಲಿ ಹೆಣ್ಣುಹಕಿಗಳು ತಮಗೊಪ್ಪಿದ ಗಂಡುಹಕ್ಕಿ ಗಳೊಡಗೂಡಿ, ಎಷ್ಟೊ ಸಂತೊಷದಿಂದ ಕ್ರೀಡಿಸುತ್ತಿರುವುವು ಈ ಅನು ರೂಪದಾಂಪತ್ಯವನ್ನು ನೋಡಿ, ಆಗುಂಪಿನ ಇತರಪಕ್ಷಿಗಳೆಲ್ಲವೂ ಸಂತೋ ಷದಿಂದ ಅಭಿನಂದಿಸುತ್ತಿರುವುವು ಈ ಪಕ್ಷಿದಂಪತಿಗಳು ಸಂತೋಷದಿಂದ ಯಥೇಚ್ಛವಾಗಿ ಕ್ರೀಡಿಸುತ್ತಿರುವಾಗ, ನಾಲ್ಕು ಕಡೆಗಳಿಂದಲೂ ಹೊರಟು ಬರುತ್ತಿರುವ ಭ್ರಮರಧ್ವನಿಯನ್ನು ಕೇಳಿ ಆನಂದದಿಂದ ಮೃತಿಳಿಯದೆ, ಆ ಧ್ವನಿಯನ್ನನುಸರಿಸಿ ತಾವೂ ರತಿಕೂಜಿತವನ್ನು ಮಾಡುತ್ತಿರುವುವು ನೋ ಡು!*ಅಲ್ಲಲ್ಲಿ ಮರಗಳಮೇಲೆ ನೀರುಕೋಳಿಗಳೂ, ಕೋಗಿಲೆಗಳೂ ಕೂಗು ತಿರುವುದರಿಂದ, ಆಯಾ ಮರಗಳೇ ಧ್ವನಿಮಾಡುವಂತೆ ತೋರುತ್ತ,ನನ್ನನ್ನು ಆಹ್ಲಾದಪಡಿಸುತ್ತಿರುವುವು, ವತ್ಸನೇ' ಇನ್ನು ಹೆಚ್ಚಾಗಿ ಹೇಳಿದುದರಿಂದೇನು? ಅಶೋಕಪಷ್ಟಗಳ ಗೊಂಚಲುಗಳೆಂಬ ಕೆಂಡಗಳಿಂದಲೂ, ಭ್ರಮರಝಂ ಕಾರವೆಂಬ ಛಟಪಟಾತ್ಕಾರಗಳಿಂದಲೂ, ಚಿಗುರುಗಳೆಂಬ ಜ್ವಾಲೆಗಳಿಂದ ಲೂ ಕೂಡಿ, ಜಾಜ್ವಲ್ಯಮಾನವಾಗಿ ಉರಿಯುತ್ತಿರುವ ಈಗಿನ ವಸಂತಾಗ್ನಿ ಯು ನನ್ನನ್ನು ಸುಡುತ್ತಿರುವುದಲ್ಲಾ' ಲಕ್ಷಣಾ ' ಮುಖ್ಯವಾಗಿ ಸೂಕ್ಷ ವಾದ ಕಣ್ಣೆವೆಗಳಿಂದಲೂ, ನುಣುಪಾದ ಕೂದಲುಗಳಿಂದಲೂ, ಕಿವಿಗಿಂ ಪಾದ ಸಲ್ಲಾಪಗಳಿಂದಲೂ ಕೂಡಿದ fಆ ಸೀತೆಯನ್ನು ಕಾಣದಿದ್ದ ಮೇಲೆ, ನಾನು ಬದುಕಿಯೂ ಪ್ರಯೋಜನವಿಲ್ಲ ವತ್ರನೆ' ಫಲಪುಷ್ಪಗಳಿಂದ ತುಂ ಬಿದ ತೋಟಗಳಿಂದಲೂ, ಇಂಪಾದ ಕೋಕಿಲಧ್ವನಿಗಳಿಂದಲೂ, ಕಣ್ಣು ಕಿವಿಗಳೆರಡಕ್ಕೂ ಪರಮಾಹ್ಲಾದವನ್ನುಂಟುಮಾಡುವ ಈ ವಸಂತಕಾಲವು

  • ಇದರಿಂದ ನಾನಾವಿಧವಾಗಿ ಭಗವನ್ನಾಮಕೀರ್ತನ ಮಾಡತಕ್ಕೆ ಭಕ್ತರೆಂದು ಸಚಿತವು

↑ ವಸಂತವು ತನ್ನನ್ನು ದಹಿಸುವುದೆಂಬುದರಿಂದ, ಭಕ್ತಿಯುಕ್ತರಲ್ಲದವರು ತನಗೆ ಪ್ರೇಮವನ್ನು ಹುಟ್ಟಿಸಲಾರರೆಂದು ಭಾವವು

  1. ಸೀತೆಯಿಲ್ಲದ ಮೇಲೆ ತನಗೆ ಬದುಕೇಕೆಂದು ಹೇಳಿದುದರಿಂದ, ಸಮಸ್ತಪ್ರಾ ಣಿಗಳೂ ನನ್ನ ಪ್ರೇಮಕ್ಕೆ ಪಾತ್ರರಾಗಿರುವಾಗ, ಸಂಸಾರಿಯಾದ ಚೇತನನು ದುಃಖ ವನ್ನನುಭವಿಸುವುದು ತನಗೆ ಸಹಿಸಲಸಾಧ್ಯವಾಗಿರುವುದೆಂದು ಭಾವವು.