ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೨ ] ಕಿಂಧಾಕಾಂಡವು ೧೫೮೩ ದಲ್ಲಿ, ಸ್ವರ್ಣಮಯವಾದ ಪ್ರಾದ್ಯೋತಿಷವೆಂಬ ಪಟ್ಟಣವೊಂದಿರುವುದು ದುಷ್ಟಾತ್ಮನಾದ ನರಕನೆಂಬ ವಾನವನೊಬ್ಬನು ಅಲ್ಲಿ ವಾಸಮಾಡುತ್ತಿರು ವನು ಅದರ ತಪ್ಪಲುಗಳಲ್ಲಿರುವ ಗುಹೆಗಳಲ್ಲಿಯೂ ನೀವು ಪ್ರವೇಶಿಸಿ, ರಾ ವಣನನ್ನೂ, ಸೀತೆಯನ್ನೂ ಹುಡುಕಬೇಕು ಆ ಬೆಟ್ಟವನ್ನು ದಾಟಿ ಹೋ ದರೆ ಮತ್ತೊಂದು ಪಕ್ವತವು ಕಾಣುವುದು ಅದರ ಗುಹೆಗಳ ಒಳಭಾಗವೆ ಲವೂ ಸುವರ್ಣಮಯವಾಗಿಯೇ ಇರುವುದು ಹೊರಗಿನ ತಪ್ಪಲುಗಳೂ ಸು ವರ್ಣಮಯವಾಗಿರುವುವು ಹೀಗೆ ಸಮಸ್ತಭಾಗಗಳಲ್ಲಿಯೂ ಕಾಂಚನಮ ಯವಾಗಿ, ಅನೇಕ ಗಿರಿನದಿಗಳಿಂದ ಕೂಡಿದ ಆ ಪಕ್ವತದ ಸುತ್ತಲೂ ಕಾಡಾನೆಗಳೂ, ಕಾಡುಹಂದಿಗಳೂ, ಸಿಹ್ನಗಳೂ, ಹುಲಿಗಳೂ ಯಾವಾಗ ಲೂ ಗರ್ಜಿಸುತ್ತ, ತಮ್ಮ ಪ್ರತಿಧ್ವನಿಯನ್ನು ಕೇಳಿ ಮತ್ತಷ್ಟು ಕೊಬ್ಬಿದವು ಗಳಾಗಿ, ತಮ್ಮ ಗರ್ಜನೆಯನ್ನು ಇನ್ನೂ ಮೇಲೆಮೇಲೆ ಹೆಚ್ಚಿಸುತ್ತಿರುವುವು | ಆ ಪರತದಲ್ಲಿಯೇ ದೇವತೆಗಳು ಪಾಕಶಾಸನನಾದ ಮಹೇಂದ್ರನಿಗೆ ದೇವ ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ಮಾಡಿದರು ಆ ಪಕ್ವತಕ್ಕೆ ಮೇಘುವಂತ ವೆಂದು ಹೆಸರು ನೀವು ದೇವೇಂದ್ರಪರಿಪಾಲಿತವಾದ ಆ ಪಕ್ವತವನ್ನೂ ದಾ ಟೆಹೊದರೆ, ಅದರಮುಂದೆ ಬಾಲಸೂರ್ವರ್ಣವುಳ್ಳುದಾಗಿಯೂ, ತೇಜ ಸ್ಪಿನಿಂದ ಜಾಜ್ವಲ್ಯಮಾನವಾಗಿಯೂ, ಪಷಿತಗಳಾದ ಸುವರ್ಣವೃಕ್ಷಗ ಳಿಂದ ಶೋಭಿತವಾಗಿಯೂ ಇರುವ ಮತ್ತೊಂದು ಪಕ್ವತಸಮೂಹವು ಕಾಣುವುದು ಸುವರ್ಣಮಯಗಳಾದ ಅರುವತ್ತು ಸಾವಿರಬೆಟ್ಟಗಳು ಆ ಸಮೂಹದಲ್ಲಿ ಅಡಗಿರುವುವು ಆ ಪಕ್ವತಗಳ ನಡುವೆ ಸಮಸ್ಯಪರ ತಗಳಿಗೂ ರಾಜನಾಗಿ, ಸತ್ಯಮವೆನಿಸಿಕೊಂಡ ಸಾವರ್ಣಿಮೇರು ವೆಂಬ ದೊಡ್ಡ ಪತವೊಂದಿರುವುದು ಪೂತ್ವದಲ್ಲಿ ಸೂರನು ಆ ಪರತಕ್ಕೆ ಪ್ರಸನ್ನ ನಾಗಿ ಅದನ್ನು ನೋಡಿ 14 ಎಲೆ ಪಠ್ಯತರಾಜನೇ ! ನಿನ್ನಲ್ಲಿರುವ ತರುಗುಲ್ಮಲತಾದಿಗಳೂ, ಇತರ ಸಮಸ್ಯವಸ್ತುಗಳೂ ಆ ಹೋರಾತ್ರವೂ ಸ್ನರ್ಣಮಯವಾಗಿಯೇ ಬೆಳಗುವಂತೆ, ನಾನು ಆನು ಗ್ರಹಿಸಿರುವೆನು ಮತ್ತು ನಿನ್ನಲ್ಲಿ ವಾಸಮಾಡುವ ದೇವಗಂಥರೂದಾನ ವಾದಿಗಳೂಕೂಡ, ರಕ್ತವರ್ಣವುಳ್ಳವರಾಗಿ ಸುವರ್ಣಪ್ರಭೆಯಿಂದ ಕೂಡಿ