ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮೪ ಶ್ರೀಮದ್ರಾಮಾಯಣವು [ಸರ್ಗ ೪೨ ರಲಿ' ” ಎಂದು ವರವನ್ನು ಕೊಟ್ಟಿರುವನು ವಿಶ್ವೇದೇವತೆಗಳೂ ಸಪ್ತ ಮರತ್ತುಗಳೂ, ಅಷ್ಟವಸುಗಳೂ, ಇತರ ದೇವತೆಗಳೂ ಸಾಯಂಕಾಲದಲ್ಲಿ ಈಪಕ್ವತಕ್ಕೆ ಬಂದು, ಇಲ್ಲಿ ಸೂರೋಪಖ್ಯಾನವನ್ನು ಮಾಡಿಹೋಗುವರು ಸೂರನೂ ಅವರ ಪೂಜೆಯನ್ನ ಂಗೀಕರಿಸಿದಮೇಲೆಯೇ ಅಸ್ತಗಿರಿಯನ್ನು ಹೊಂದಿ ಸಮಸ್ತಭೂತಗಳಿಗೂ ಅದೃಶ್ಯನಾಗುವನು ಆ ಸಾವರ್ಣಿಮೇರು ವಿಗೂ, ಆಸ್ತಗಿರಿಗೂ ಹತ್ತು ಸಾವಿರ ಯೋಜನಗಳ ದೂರವಿರುವುದು ಈ ಹತ್ತು ಸಹಸ್ರಯೋಜನಗಳನ್ನೂ ಸೂರನು ಒಂದುಗಳಿಗೆಯ ಕಾಲದೊಳ ಗಾಗಿ ದಾಟಿ ಅಸ್ತಗಿರಿಯನ್ನು ಸೇರುವನು ಸಾವರ್ಣಿಮೇರುವಿನ ಶಿಖರದಲ್ಲಿ ವಿಶ್ವಕಮ್ಮನಿರ್ಮಿತವಾದ ಒಂದುದೊಡ್ಡ ವ್ಯಭವನವಿರುವುದು ಅದು ಸೂ ರನಂತೆಯ ಜಾಜ್ವಲ್ಯಮಾನವಾಗಿರುವುದು ಉಪ್ಪರಿಗೆಗಳ ಸಮೂಹದಿಂದ ಅತಿಮನೋಹರವಾಗಿರುವುದು ಚಿತ್ರವಿಚಿತ್ರಗಳಾಗಿ ಅನೇಕಪಕ್ಷಿಸಮೂ ಹಗಳಿಂದ ತುಂಬಿದ ವೃಕಸಮೂಹದಿಂದ ಶೋಭಿತವಾಗಿರುವುದು. ಪಾಶಹಸ್ಸನಾದ ಮಹಾತ್ಮ ನಾದ ವರುಣನಿಗೆ ಅದೆ ವಾಸದ ಮನೆಯು ಸಾವರ್ಣಿಮರುಪ್ಪತಕ್ಕೂ, ಅಸ್ತಗಿರಿಗೂ ನಡುವೆ ಹತ್ತು ಶಿಖರಗಳುಳ್ಳು ದಾಗಿಯೂ, ಚಿತ್ರವರ್ಣವಾದ ವೇದಿಕೆಯುಳ್ಳುದಾಗಿಯೂ ಇರುವ ಸುವ ರ್ಣಮಯವಾದ ದೊಡ್ಡ ತಾಳೆಯಮರವೊಂದಿರುವುದು ದೃಶ್ಯ ಜ್ಞನಾಗಿ ಯೂ, ತಪಸ್ಸಿನಿಂದ ಲೋಕಪೂಜ್ಯನಾಗಿಯೂ, ಬ್ರಹ್ಮಸಮಾನನಾಗಿಯೂ ಇರುವ ಮೇರುಸಾವರ್ಣಿಯೆಂಬ ಮಹಾತಪಸ್ವಿ ಯು ಅದರಲ್ಲಿ ವಾಸಮಾ ಡುತ್ತಿರುವನು ಇಂತಹ ಮಹಾವೈಭವವುಳ್ಳ ಆ ಸಾವರ್ಣಿಮೇರುಪರ್ವತ ದಲ್ಲಿ, ನೀವು ಅಲ್ಲಿನ ಸಮಸ್ತದುರ್ಗಪ್ರದೇಶಗಳನ್ನೂ, ಕೊಳಗಳನ್ನೂ, ನದಿ ಗಳನ್ನೂ ಚೆನ್ನಾಗಿ ಸುತ್ತಿ ರಾವಣನನ್ನೂ, ಸೀತೆಯನ್ನೂ ಹುಡುಕಬೇಕು | ನೀವು ಆ ಪ್ರತವನ್ನು ಪ್ರವೇಶಿಸಿದೊಡನೆ ಅಲ್ಲಿ ಸೂರಿನಂತೆ ಪ್ರಕಾಶಿಸು ತಿರುವ ಮೇರುಸಾವರ್ಣಿಮಹರ್ಷಿಗೆ ತಲೆಬಗ್ಗಿ ನಮಸ್ಕರಿಸಿ, ಆತನನ್ನೂ ಸೀತಾದೇವಿಯ ವೃತ್ತಾಂತವನ್ನು ಕುರಿತು ವಿಚಾರಿಸಬೇಕು, ಸೂಕ್ಯನು ರಾ ತ್ರಿಯಲ್ಲಿ ಅಸ್ತಂಗತನಾಗಿ ಪ್ರಾತಃಕಾಲದಲ್ಲಿ ಉಹಿಸಿದಮೇಲೆ, ಉದ ಯಪ್ಪಸ್ವತದಿಂದ ಇದುವರೆಗೆ ಹೇಳಿದ ಆಸ್ತಗಿರಿಯವರೆಗಿನ ಪ್ರದೇಶಗಳಲ್ಲಿ