ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗರ್ಸ ೧ ] ಕಿಂಧಾಕಾಂಡವು. ೧೩೩೩ ಹೆಣ್ಣು ನವಿಲುಗಳಿಂದ ಪರಿವೃತಗಳಾಗಿ ಮದದಿಂದ ಮೈಮರೆತು, ಮೊದಲೇ ಮನ್ಮಧತಾಪಕ್ಕೆ ಸಿಕ್ಕಿಬಿದ್ದ ನನಗೆ ಮತ್ತಷ್ಟು ವ್ಯಾಮೋಹವನ್ನುಂಟುಮಾ ಡುವುವು ಇದೋ'*ಈ ಬೆಟ್ಟದ ತಪ್ಪಲುಗಳಲ್ಲಿ ಸ್ವಚ್ಛೆಯಿಂದ ನರ್ತಿಸುತ್ತಿ ರುವ ಒಂದು ಹೆಣ್ಣು ನವಿಲು, ತನ್ನ ಪ್ರಿಯಪತಿಯಾದ ಗಂಡುನವಿಲನನ್ನು ನೋಡಿಕಾಮಪೀಡಿತವಾಗಿ,ತಾನೂ ಅದನ್ನನುಸರಿಸಿ ಕುಣಿಯುವುದಕ್ಕಾರಂಭಿ ಸಿರುವುದು ನೋಡು ಈವ್ಯಾಜದಿಂದ ಇದು ಕ್ರೀಡಾರವಾಗಿ ಆ ಗಂಡುನವಿಲ ನ್ನು ಕರೆಯುವಂತೆ ತೋರುವುದು ಈ ಭಾವವನ್ನು ತಿಳಿದು ಗಂಡುನವಿಲು,ಸಂ ತೋಷದಿಂದ ಗರಿಯನ್ನು ಬಿಚ್ಚಿಕೊಂಡು ಪ್ರಸನ್ನ ಮುಖದಿಂದ ತನ್ನ ಪ್ರಿಯೆ ಯ ಸಮೀಪಕ್ಕೆ ಓಡಿಬರುತ್ತಿರುವುದನ್ನು ನೋಡಿದೆಯಾ? ಎಲೆ ವತ್ರನೆ'ಹೀಗೆ ಇದು ಸಂತೋಷದಿಂದ ಕೂಗುತ್ತ ಓಡಿಬರುವುದನ್ನು ನೋಡಿದರೆ, ಈನವಿಲು, ತಾನೇ ಸುಖಿಯಂಬ ಗತ್ವದಿಂದ ಪತ್ನಿ ಯನ್ನಗಲಿರುವ ನನ್ನನ್ನು ಹಾಸ್ಯಮಾ ಡುವಂತೆ ತೋರುವುದು ವತ್ಸ ಲಕ್ಷಣಾ' ಈ ಕಾಡಿನಲ್ಲಿ ಈ ನವಿಲಿನ ಹೆಂ ಡಿತಿಯನ್ನು ಯಾವ ರಾಕ್ಷಸನೂ ಅಪಹರಿಸಲಿಲ್ಲ ಅದಕ್ಕಾಗಿಯ ಮನಸ್ಸಿನಲ್ಲಿ ಚಿಂತೆಯೇನೂ ಇಲ್ಲದೆ,ಇದು ಈ ರಮಣೀಯವಾದ ವನದಲ್ಲಿ ಸಂತೋಷದಿಂ ದ ಕುಣಿದಾಡುತ್ತಿರುವುದು ನನಗಾದರೋ ಈ ವಸಂತಕಾಲದಲ್ಲಿ ಸೀತೆಯ ನ್ನು ಬಿಟ್ಟು ಈ ವನಪ್ರದೇಶವಲ್ಲಿ ವಾಸಮಾಡುವುದೇ ದುಸ್ಸಹವಾಗಿರುವುದ ಲ್ಲಾ ಲಕ್ಷಣಾ ' ಲೋಕದಲ್ಲಿ ಪುರುಷರು ಸ್ತ್ರೀಯರನ್ನನುಸರಿಸಿ ಹೋಗು ವುದುಂಟು ಇದೋ ಇಲ್ಲಿ ಈ ಹೆಣ್ಣುನುಲು ತನ್ನ ಕಾಮಾತುರ ದಿಂದ ತಾನಾಗಿಯೇ ಪತಿಯಬಳಿಗೆ ಹೋಗಿ, ಅದನ್ನು ಕ್ರೀಡಾರ್ಥವಾಗಿ ಕರೆ ದು ರಮಿಸುತ್ತಿರುವುದು ಆಹಾ'ತಿರmಾತಿಗಳಲ್ಲಿ ಕೂಡ ಗಂಡುಹೆಣ್ಣುಗಳಲ್ಲಿ ಎಷ್ಟು ಮಟ್ಟಿಗೆ ಪರಸ್ಪರಾನ ರಾಗವಿರುವುದು ನೋಡಿದೆಯಾ ? ಹೆಂಗಸರಿಗೂ ಎಣೆಯಿಲ್ಲದ ಕಾಮವನ್ನು ಹೆಚ್ಚಿಸುವ ಈ ವಸಂತಕಾಲದ ಮಹಿಮೆಯನ್ನು ನಾನೇನು ಹೇಳಲಿ'ರಾಕ್ಷಸರಿಂದ ಅಪಹರಿಸಲ್ಪಡದಿದ್ದ ಪಕ್ಷದಲ್ಲಿ ನನ್ನ ಪ್ರಿಯ ಯಾದ ಸೀತೆಯೂ ಈ ಕಾಲದಲ್ಲಿ ನನ್ನ ನ್ನು ನೋಡಿದೊಡನೆ, ಅರಳಿದ ಕಣ್ಣು

  • ಇಲ್ಲಿ ಮಯೂರದಂಪತಿಗಳ ಪರಸ್ಪರಮೋಹವನ್ನು ಹೇಳಿರುವುದರಿಂದ, ಆಚಾರ್ಯಶಿಷ್ಯರಲ್ಲಿರಬೇಕಾದ ಪರಸ್ಕರಾವಣ್ಯವು ಸೂಚಿತವು,