ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦೪ ಶ್ರೀಮದ್ರಾಮಾಯಣವ (ಸರ್ಗ, ೪೮. { ಹನುಮದಾದಿಗಳು ದಲ್ಲಿಣದಿಕ್ಕಿನಲ್ಲಿ ಸೀತೆಯನ್ನು ಹು | * ಡುಕುತ್ತಿರುವಾಗ ಒಬ್ಬ ರಾಕ್ಷಸನನ್ನು ಕೊಂದುದು j** ಅತ್ತಲಾಗಿ ಹನುಮಂತನು ತಾರಾಂಗದಾದಿಗಳೊಡನೆ ಸೇರಿ, ಸು ಗ್ರೀವನು ಹೇಳಿದಂತೆ ದಕ್ಷಿಣದಿಕ್ಕಿನಲ್ಲಿ ಆಯಾಪ್ರದೇಶಗಳನ್ನು ಹುಡುಕು ತಿದ್ದನು ಹಾಗೆಯೇ ತನ್ನ ಪರಿವಾರಗಳೊಡನೆ ಬಹುದೂರಕ್ಕೆ ಹೊರಟುಹೋ ದನು ಅಲ್ಲಿ ವಿಂಧ್ಯಪರೂತದ ಗುಹೆಗಳಲ್ಲಿಯೂ, ಕಾಡುಗಳಲ್ಲಿಯೂ, ಶಿಖರಗ ಇಲ್ಲಿಯೂ, ನದಿಗಳಿಂದ ದುರ್ಗಮಗಳಾದ ಇತರಪ್ರದೇಶಗಳಲ್ಲಿಯೂ, ಕೋ ಳಗಳಲ್ಲಿಯೂ, ದೊಡ್ಡ ದೊಡ್ಡ ಮರಗಳ ತೋಪುಗಳಲ್ಲಿಯೂ, ಬಗೆಬಗೆಯ ಸಾಲುಗಳುಳ್ಳ ಮರದ ಗುಂಪುಗಳಲ್ಲಿಯೂ, ವಿಂಧ್ಯದ ಸಮೀಪಪರೂತಗಳ ಲ್ಲಿರುವ ವೃಕಸಮೂಹಗಳಲ್ಲಿಯೂ ಪ್ರವೇಶಿಸಿ ಸೀತೆಯನ್ನು ಹುಡುಕು ತಿದ್ದನು ವೀರರಾದ ಆ ವಾನರರೆಲ್ಲರೂ ಆ ದಕ್ಷಿಣದಿಗ್ಯಾಗದಲ್ಲಿ ಸಮಸ್ತಪ್ರ ದೇಶಗಳನ್ನೂ ಸುತ್ತಿ ಸುತ್ತಿ ನೋಡಿದರೂ ಸೀತೆಯು ಸಿಕ್ಕಲಿಲ್ಲ ಆವಾನರ ರಾದರೋ ಯಾರಿಗೂ ಇದಿರಿಸಲಸಾಧ್ಯವಾದ ಪರಾಕ್ರಮವುಳ್ಳವರಾದುದ ರಿಂದ ತಮ್ಮ ಸಾಹಸಗಳನ್ನೆಲ್ಲಾ ತೋರಿಸಿ ಹುಡುಕಿದರೂ ಸೀತೆಯು ಗೋ ಚರಿಸಲಿಲ್ಲ ಆ ವಾನರರು ಅಲ್ಲಲ್ಲಿ ಸುವಾಗ ಕಣ್ಣಿಗೆ ಬಿದ್ದ ಬಗೆಬಗೆಯ ಹ ಇುಗಳನ್ನೂ , ಕಂದಮೂಲಗಳನ್ನೂ ಭಕ್ಷಿಸುತ್ತ, ಅಲ್ಲಲ್ಲಿ ವಿಶ್ರಾಂತಿಗಾಗಿ ನಿಂತುನಿಂತು ಹೋಗುತಿದ್ದರು ಅವರು ಹೋಗುತಿದ್ದ ವಿಂಧ್ಯಪ್ರದೇಶವಾ ದರೋ ಲೆಕ್ಕವಿಲ್ಲದಷ್ಟು ಮಹಾರಣ್ಯಗಳಿಂದಲೂ, ಗುಹೆಗಳಿಂದಲೂ ಕೂಡಿ, ಯಾರಿಗೂ ಪ್ರವೇಶಿಸಲಸಾಧ್ಯವಾಗಿರುವುದು ಅಲ್ಲಿ ಹುಡುಕುವುದೂ ಬಹಳ ಕಷವು ಮತ್ತು ಆ ದೇಶವು ಕೇವಲಜನಶೂನ್ಯವಾಗಿ, ನೋಡುವಾಗಲೇ ನಡುಕವನ್ನು ಹುಟ್ಟಿಸುವಂತಿರುವುದು ನಿರ್ಜಲವಾಗಿ ಮರುಪ್ರದೇಶದಂ ತಿರುವುದು ಹೀಗಿದ್ದರೂ ಆ ವಾನರರು ತೃಣಜಲಾದಿಗಳೊಂದೂ ಇಲ್ಲದ ಆ ಪ್ರದೇಶಗಳನ್ನೆಲ್ಲಾ ಎಷ್ಟೋ ಕಷ್ಟದಿಂದ ಹುಡುಕಿ ನೋಡಿದರು ಎಂತವ ರಿಗೂ ಪ್ರವೇಶಿಸಲಾಗದ ಮತ್ತೊಂದು ಪ್ರದೇಶವನ್ನು ಕಂಡು ಅಲ್ಲಿಗೂ ನಿರ್ಭಯವಾಗಿ ಪ್ರವೇಶಿಸಿದರು ಅಲ್ಲಿನ ಮರೆಗಳಲ್ಲಿ ಹೂಗಳಾಗಲಿ, ಹಣ್ಣು ಗಳಾಗಲಿ, ಎಲೆಗಳಾಗಲಿ ಹುಟ್ಟುವುದಿಲ್ಲ ಅಲ್ಲಿನ ನದಿಗಳಲ್ಲಿ ನೀರಿನ ಪ್ರಸಕ್ತಿ, O