ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ೧೩೦೩ ಶ್ರೀಮದ್ರಾಮಾಯಣವು (ಸರ್ಗ ೪೯ ವೇ ಒಂದು ದೊಡ್ಡಬೆಟ್ಟದಂತೆ ಮಹಾಭಯಂಕರವಾಗಿರುವುದು ಆ ರಾಕ ಸನನ್ನು ಕಂಡೊಡನೆ ಸಮಸ್ತವಾನರರೂ ಅವನೊಡನೆ ಯುದ್ಧ ಮಾಡುವು ದಕ್ಕಾಗಿ ದಟ್ಟಿಯನ್ನು ಬಿಗಿದು ಸಿದ್ಧರಾಗಿ ನಿಂತರು ಮಹಾಬಲಾಢನಾದ ಆ ರಾಕ್ಷಸನೂಕೂಡ ಪರೂತಾಕಾರವುಳ್ಳ ಈ ವಾನರರ ದೊಡ್ಡಗುಂಪನ್ನು ನೋಡೊಡನೆ ಕೋಪವಶನಾಗಿ ಎಲೈ ಕಾಡುಕಪಿಗಳೆ ! ಇನ್ನು ನೀವು ಸರಿ?” ಎಂದು ಉಚ್ಚ ಸ್ವರದಿಂದ ಆರ್ಭಟಿಸುತ್ತ, ದೃಢವಾದ ಮುಷ್ಟಿ ಯನ್ನೆತ್ತಿಕೊಂಡು ಇವರಿಗಿದಿರಾಗಿಯ ಬಂದನು ಆಗ ವಾಲಿಪುತ್ರನಾದ ಆಂಗದನು, ಇದಿರಾಗಿ ಬರುವ ಆ ರಾಕ್ಷಸನನ್ನೇ ರಾವಣನೆಂದು ತಿಳಿದು, ಆ ಕ್ಷಣದಲ್ಲಿಯೇ ಅವನನ್ನು ಅಂಗೈಯಿಂದ ಅಪ್ಪಳಿಸಿದನು ರಾಕ್ಷಸನು ಈ ಒಂ ಡೇಪ್ರಹಾರಕ್ಕೆ ತಡೆಯಲಾರದೆ, ಬಾಯಿಂದ ರಕ್ತವನ್ನು ಕೆಕ್ಕು, ದೊಡ್ಡಬೆ ಟ್ಯವು ಉರುಳಿ ಬಿಳುವಂತೆ ನೆಲಕ್ಕೆ ಬಿದ್ದನು ಆ ರಾಕ್ಷಸನು ಮೃತನಾದ ಮೇ ಲೆ, ಜಯಶೀಲರಾದ ವಾನರವೀರರೆಲ್ಲರೂ, ಅವನೇ ರಾವಣನೆಂಬ ಭಾಂತಿ ಗೊಂಡು, ಮಹೊತ್ಸಾಹದಿಂದುಬ್ಬು, ಅಲ್ಲಿನ ಗುಹೆಯಲ್ಲಿಯ ಸೀತೆಯೂ ಇರಬಹುದೆಂದೆಣಿಸಿ, ಆ ಪರತಗುಹೆಗಳೆಲ್ಲವನ್ನೂ ಬಾರಿಬಾರಿಗೂ ಚೆನ್ನಾಗಿ ಹುಡುಕಿ ನೋಡಿದರು ಅಲ್ಲಿನ ಕಾಡುಗಳೆಲ್ಲವನ್ನೂ ಸುತ್ತಿ ನೋಡಿದರು ಎ ಕ್ಲಿಯೂ ಸೀತೆಯನ್ನು ಕಾಣಲಿಲ್ಲ ಭಯಂಕರವಾದ ಮತ್ತೂಂದು ಪರತ ಗುಹೆಯನ್ನೂ ಪ್ರವೇಶಿಸಿ ನೋಡಿದರು ಅಲ್ಲಿಯೂ ಸೀತೆಯು ಸಿಕ್ಕಲಿಲ್ಲ ಎ ಲ್ಲರ ಮನಸ್ಸಿಗೂ ಬಹಳ ದುಃಖವುಂಟಾಯಿತು ಹೀಗೆ ಅವರೆಲ್ಲರೂ ಆಶಾ ಭಂಗವನ್ನು ಹೊಂದಿ ಎದೆಗೆಟ್ಟವರಾಗಿ, ಒಂದು ಮರದಕೆಳಗೆ ಏಕಾಂತವಾದ ಸ್ಥಳದಲ್ಲಿ ಒಟ್ಟಾಗಿ ಕುಳಿತುಬಿಟ್ಟರು ಇಲ್ಲಿಗೆ ನಾಲ್ವತ್ತೆಂಟನೆಯ ಸರ್ಗವು ( ಹನುಮಂತನು ಇನ್ನೂ ಇತರಪ್ರದೇಶಗಳನ್ನು ಹುಡು | - ಕುವುದಕ್ಕೆ ಹೋದುದು. ಹೀಗೆ ವಾನರರೆಲ್ಲರೂ ಕುಂದಿದ ಮನಸ್ಸುಳ್ಳವರಾಗಿ, ಏನೂ ತೋರ ದ ಮರದ ಕೆಳಗೆ ಕುಳಿತಿರಲು, ಪ್ರಾಜ್ಞನಾದ ಅಂಗದನೂ ಅಲ್ಲ ತಾನು ಸು ಬಂದ ಬಳಲಿಕೆಯನ್ನಾರಿಸಿಕೊಂಡು, ಆಮೇಲೆ ಅಲ್ಲಿದ್ದ ವಾನರರನ್ನು ಕುರಿ