ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೦] ಕಿಷಿಂಧಾಕಾಂಡವು ೧೬೧೧ ಪೂರ್ಣವಾದ, ಬಾವಿಯಾಗಲಿ, ಮಡುವಾಗಲಿ, ಇರುವದೆಂಬುದರಲ್ಲಿ ಸಂದೇ ಹಪಿಲ್ಲ "ಎಂದನು ಈಮಾತನ್ನು ಕೇಳಿದೊಡನೆ ಬಾಯಾರಿಬಳಲಿದ್ದ ಆ ವಾನ ರರಿಗೂ ಅದನ್ನು ಪ್ರವೇಶಿಸಿನೋಡಬೇಕೆಂಬ ಉತ್ಸಾಹವು ಹುಟ್ಟಿತು ಆಗಲೇ ಅವರೆಲ್ಲರೂ ಬಿಲದೊಳಗೆ ನುಗ್ಗಿ ದರು ಅದರ ಅಂತಭಾರ್ಗವು ಗಾಢಾಂದ ಕಾರದಿಂದಮುಚ್ಚಿ, ನೋಡಿದಾಗಲೇ ನಡುಕವನ್ನು ಹುಟ್ಟಿಸುವಷ್ಟು ಮಹಾ ಭಯಂಕರವಾಗಿದ್ದುದನ್ನು ನೋಡಿದರು ಇವರು ಮುಂದ ಮುಂದೆ ಹೋದ ಹಾಗೆಲ್ಲಾ,ಆ ಬಿಲದಿಂದ ತಮಗಿದಿರಾಗಿ ಹೊರಟು ಬರುತಿದ್ದ ಸಿಹ್ನಗಳನ್ನೂ , ಇನ್ನೂ ಅನೇಕ ಮೃಗಗಳನ್ನೂ, ಪಕ್ಷಿಗಳನ್ನೂ ಕಂಡರು ಆದರೂ ಎದೆ ಗುಂದದೆ ಕತ್ತಲೆ ಕವಿದ ಆ ಮಹಾಬಿಲಕ್ಕೆ ಪ್ರವೇಶಿಸಿಬಿಟ್ಟರು ಅಲ್ಲಿ ಆವಾ ವರಿಗೆ ಕಣ್ಣುಗಳಾಗಲಿ, ಅವರ ವೀರವಾಗಲಿ ಅವರ ಪರಾಕ್ರಮ ವಾಗಲಿ ಯಾವುದೆಂದೂ ಕಲಸಕ್ಕಬಾರದೆ ಹೋದುವು ಹಾಗಿದ್ದರೂ ಅವರುವಾಯುಸಂಚಾರದಂತೆ ತಡೆಯಿಲ್ಲದೆ ಆ ಕತ್ತಲೆಯಲ್ಲಿಯೇ ವೇಗದಿಂದ ನಡೆದು ಹೋಗುತಿದ್ದರು ಕೊನೆಗೆ ಬಹುದೂರಕ್ಕೆ ಹೋದಮೇಲೆ ಅಲ್ಲಿ ಆ ತ್ಯಂತಪ್ರಕಾಶಮಾನವಾಗಿ ರಮಣೀಯವಾದ ಒಂದಾನೊಂದು ಪ್ರದೇಶವು ಇವರ ಕಣ್ಣಿಗೆ ಗೋಚರಿಸುವಂತಾಯಿತು ದೊಡ್ಡ ಮರಗಳ ಸಮೂಹದಿಂದ ದುರ್ಗಮವಾಗಿ, ಗಾಢಾಂಧಕಾರದಿಂದ ತುಂಬಿದ ಆ ಬಿಲದಲ್ಲಿ ಈವಾನರರು ಒಬ್ಬರನ್ನೊಬ್ಬರು ಬಿಗಿಯಾಗಿ ತಬ್ಬಿಕೊಂಡು ಮುಂದೆಮುಂದೆನಡೆದು, ಹಾಗೆ ಯ ಒಂದುಗಾವುದದೂರದವರೆಗೂ ಹೋದರು, ಇವರೆಲ್ಲರಿಗೂ ಆಗ ಬಾಯಾರಿಕೆಯಿಂದ ಪ್ರಜ್ಞೆ ತಪ್ಪಿದಂತಾದರೂ, ಸ್ವಲ್ಪಕಾಲದವರಿಗೆ ಆದ ನ್ಯೂ ಲಕ್ಷ್ಯಮಾಡದೆ ಪ್ರಯತ್ನದಿಂದ ಬಿಲದೊಳಗೆ ಪ್ರವೇಶಿಸಿಬಿಟ್ಟರು ಇ ವರಿಗೆ ಕೊನೆಕೊನೆಗೆ ಪ್ರಾಣದಮೇಲೆಯೇ ಆಸಯ ಬಿಟ್ಟು ಹೋಯಿತು! ಎಲ್ಲರೂ ಆಹಾರವಿಲ್ಲದೆ ಕೃಶರಾಗಿದ್ದರು ಎಲ್ಲರ ಮುಖಗಳೂ ಬಾಡಿ ಹೋದುವು ಹೀಗೆ ಬಹಳವಾಗಿ ಬಳಲಿಬಂದ ಆ ವಾನರರ ದೃಷ್ಟಿಗೆ ಮುಂದೆ ಸಮೀಪದಲ್ಲಿ ಆ ಬೆಳಕು ಕಾಣಿಸಿದಮೇಲೆಯ ಇವರ ಮನ ಸ್ಸಿಗೆ ಸ್ವಲ್ಪವಾಗಿ ಉಲ್ಲಾಸವು ಹುಟ್ಟಿತು, ಕತ್ತಲೆಯಿಲ್ಲದೆ ಅತಿಮನೋ ಹರವಾದ ಆ ಪ್ರದೇಶದಲ್ಲಿ ಅಗ್ನಿ ಯಂತೆ ಜಾಜ್ವಲ್ಯಮಾನಗಳಾಗಿ, ಸುವ