ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೧೬ ಶ್ರೀಮದ್ರಾಮಾಯಣವು [ಸರ್ಗ ೫೨ ದರಿಂದ ನಿಮ್ಮ ಬಳಲಿಕೆಯು ತೀರಿದ್ದರೆ, ನಿಮ್ಮ ವೃತ್ತಾಂತವನ್ನೂ ನಾನು ತಿಳಿಯಬಹುದಾಗಿದ್ದರೆ ಅದನ್ನು ವಿವರಿಸಿ ತಿಳಿಸಬೇಕು ನನಗೆ ಅದನ್ನು ಕೇ ಳಬೇಕೆಂದು ಕುತೂಹಲವಿರುವುದು” ಎಂದಳು ಇದನ್ನು ಕೇಳಿ ಹನುಮಂತ ನು ತಮ್ಮ ವೃತ್ತಾಂತವೆಲ್ಲವನ್ನೂ ನಿಷ್ಕಪಟವಾಗಿ ಯಥಾಸ್ಥಿತವಾಗಿ ತಿಳಿಸ ಲಾರಂಭಿಸಿ “ಎಲೆ ತಪಸ್ವಿನಿ' ಸಮಸ್ತಲೋಕಕ್ಕೂ ರಾಜನಾಗಿಯೂ ಮ ಹೇಂದ್ರವರುಣರಿಗೆ ಸಾಟಿ ಯಾಗಿಯೂ ಇರುವ ರಾಮನೆಂಬ ರಾಜಕುಮಾರ ನೊಬ್ಬನಿರುವನು ಅವನು ದಶರಥಪುತ್ರನು ಶ್ರೀಮಂತನು ಅವನು ತಮ್ಮ ನಾದ ಲಕ್ಷಣನೊಡನೆಯೂ ಪತ್ನಿ ಯಾದ ಸೀತೆಯೊಡನೆಯೂ ದಂಡಕಾ ರಣ್ಯಕ್ಕೆ ಬಂದನು ಆ ಮೂವರೂ ಜನಸ್ಪ್ಯಾನದಲ್ಲಿರುವಾಗ, ರಾವಣನುರಾಮ ಪತ್ನಿ ಯಾದ ಸೀತೆಯನ್ನು ಬಲಾತ್ಕಾರದಿಂದ ಕುಯ್ಯನು ಆಮೇಲೆ ವಾ ನರರಾಜನಾದ ಸುಗ್ರೀವನಿಗೂ, ರಾಮನಿಗೂ ಸ್ನೇಹವುಂಟಾಯಿತು ಆ ಸು ಗ್ರೀವನು ನಮ್ಮೆಲ್ಲರನ್ನೂ ಕರೆದು, ಸೀತೆಯನ್ನು ಹುಡುಕಿ ಬರುವುದಕ್ಕಾಗಿ ಯಮರಕ್ಷಿತವಾಗಿ, ಅಗಸಂಚಾರಯೋಗ್ಯವಾದ ಈ ದಕ್ಷಿಣದಿಕ್ಕಿಗೆ ಕಳುಹಿಸಿರುವನು ಆ ಸುಗ್ರೀವನು ಭಯಂಕರಾಕಾರವುಳ್ಳ ಅಂಗದನೇ ಮೊ ದಲಾದ ಈ ವಾನರಪ್ರಮುಖರಲ್ಲರನ್ನೂ ನೋಡಿ (ನೀವೆಲ್ಲರೂ ಸೇರಿ ಸೀತೆಯನ್ನೂ, ಕಾಮರೂಪಿಯಾದ ರಾವಣನನ್ನೂ ಹುಡುಕಿ ತರಬೇಕು” ಎಂದು ಕೂರಶಾಸನವನ್ನು ಮಾಡಿರುವನು ನಾವೆಲ್ಲರೂ ಈ ದಕ್ಷಿಣದಿ ಕೆಲ್ಲವನ್ನೂ ಸುತ್ತಿಬಳಲಿ, ಬಾಯಾರಿ, ಕೊನೆಗೆ ಒಂದು ಮರದ ಕೆಳಗೆ ಸೇರಿದೆವು ಎಲ್ಲರ ಮುಖವೂ ಬಣ್ಣಗೆಟ್ಟಿತು ನಾವೆಲ್ಲರೂ ಹಿಂದುಮುಂ ದು ತೋರದೆ ಚಿಂತೆಯಿಂಬ ಮಹಾಸಮುದ್ರದಲ್ಲಿ ಮುಳುಗಿ ಬಾರಿ ತೋರದೆ ದೀನರಾಗಿದ್ದೆವು ನಾವು ನಾಲ್ಕು ಕಡೆಗಳನ್ನೂ ದೃಷ್ಟಿಯಿಟ್ಟು ನೋಡಿದಾಗ ನಮಗೆ ಒಂದು ಬಿಲವು ಕಾಣಿಸಿತು ಅದು ಗಿಡುಬಳ್ಳಿಗಳಿಂದ ಆಚ್ಛಾದಿತವಾಗಿ ಕತ್ತಲೆಕವಿದಿತ್ತು ಆದರೆ ಆ ಬಿಲದ್ವಾರದಿಂದ ನೀರಿನಲ್ಲಿ ನೆನೆದ ಗರಿಗಳುಳ್ಳ ಹಂಸಕಾರಂಡವಗಳೇ ಮೊದಲಾದ ಜಲಪಕ್ಷಗಳು ಗರಿ ಗಳನ್ನೊದರುತ್ತ ಹಾರಿಬರುವುದನ್ನು ಕಂಡವು ಆಗ ನಾನು ಈ ಬಿಲದಲ್ಲಿ ನೀರಿರಬಹುದೆಂದೆಣಿಸಿ, ವಾನರರನ್ನು ಕುರಿತು, ಈ ಬಿಲಕ್ಕೆ ಹೋಗಿ ನೋ