ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೧೮ ಶ್ರೀಮದ್ರಾಮಾಯಣದ [ಸರ್ಗ 18, ದಕ್ಕೂ ದಾರಿತೋರದೆ ತತ್ತಳಿಸುತ್ತಿರುವೆವು ಹೇಗಾದರೂ ನೀನು ನಮ್ಮ ನ್ನು ಈ ಭಯಂಕರವಾದ ಬಿಲದಿಂದ ಹೊರಕ್ಕೆ ಬಿಟ್ಟು ಕಾಪಾಡಬೇಕು ನಾವು ಈಗ ನಮ್ಮ ರಾಜನಾದ ಸುಗ್ರೀವನ ಆಜ್ಞೆಯನ್ನೂ ಮೀರಿದಂತಾ ಯಿತು ಅವನು ಈ ಆಜ್ಞೆಯನ್ನು ಮೀರಿದವರಿಗೆ ನಿಜವಾಗಿ ಮರಣದಂಡನೆ ಯನ್ನೇ ವಿಧಿಸುವಂತೆ ಕೂರಶಾಸನವನ್ನು ವಿಧಿಸಿರುವುದರಿಂದ, ಈ ನಮ್ಮೆಲ್ಲ ರ ಆಯುಸೂ ಇಂದಿಗೆ ತೀರಿತೆಂದೇ ಎಣಿಸಬೇಕಾಗಿದೆ ಸುಗ್ರೀವನ ಭಯ ದಿಂದ ಕಂದಿಕುಂದಿ ಕೊರಗಿದ ನಮ್ಮೆಲ್ಲರನ್ನೂ ಈಗ ನೀನೇ ರಕ್ಷಿಸಬೇಕು ನಾವು ಇನ್ನೂ ಮುಂದೆ ನಡೆಸಬೇಕಾದ ದೊಡ್ಡ ಕಾರವಿರುವುದು ನಾವು ಇಲ್ಲಿ ಸಿಕ್ಕಿಬಿದ್ದಿರುವುದರಿಂದ ಆ ಕೆಲಸವನ್ನೂ ನಡೆಸುವುದಕ್ಕಿಲ್ಲ” ಎಂದನು, ಇದನ್ನು ಕೇಳಿ ಆ ತಾಪಸಿಯು ಹನುಮಂತನನ್ನು ನೋಡಿ ಎಲೈ ವಾನ ರೋತ್ತಮನೆ' ಈ ಬಿಲವನ್ನು ಪ್ರವೇತಿಸಿದಮೇಲೆ ಪ್ರಾಣದೊಡನೆ ಹಿಂತಿ ರುಗಿ ಹೋಗುವುದು ಯಾವನಿಗೂ ಸಾಧ್ಯವಲ್ಲವೆಂದೇ ನನಗೆ ತೋರುವುದು ಆದರೂ ನಾನು ಇದುವರೆಗೆ ಎಷ್ಟೇ ನಿಯಮಗಳನ್ನು ಮಾಡಿ ಸಂಪಾದಿಸಿದ ಪ್ರಣ್ಯಫಲದಿಂದ, ನಿಮ್ಮೆಲ್ಲರನ್ನು ಮಾತ್ರ ಈ ಬಿಲದಿಂದ ಹೊರಕ್ಕೆ ತಂದು ಸೇರಿಸುವೆನು ಆದರೆ, ನೀವು ಹೊರಗೆ ಹೋಗಿ ಸೇರುವವರೆಗೂ ನಿಮ್ಮ ಕ ಣ್ಣುಗಳನ್ನು ಮುಚ್ಚಿಕೊಂಡಿರಬೇಕು ಹಾಗೆ ನೀವು ಕಣ್ಣುಗಳನ್ನು ಮುಚ್ಚಿ ಕೊಳ್ಳದಿದ್ದರೆ, ಹೊರಗೆ ಹೋಗುವುದು ನಿಮಗೆ ಎಷ್ಟು ಮಾತ್ರವೂ ಸಾಧ್ಯ ವಲ್ಲ ” ಎಂದಳು ಇದನ್ನು ಕೇಳಿದೊಡನೆ ವಾನರರಿಗೆ ಮಿತಿಮೀರಿದ ಸಂ ತೋಷವುಂಟಾಯಿತು ಆಗಲೇ ಅವರೆಲ್ಲರೂ ತಮ್ಮ ಕಣ್ಣೆವೆಗಳನ್ನು ಮುಚ್ಚಿ ಕೊಂಡುದಲ್ಲದೆ, ತಮ್ಮ ಎರಡುಕೈಗಳಿಂದಲೂ ಬಲವಾಗಿ ಕಣ್ಣುಗಳನ್ನು ಅಪ್ಪಿ ನಿಂತಿದ್ದರು. ಆಗ ಸ್ವಯಂಪ್ರಭೆಯು ಕಣ್ಣು ಮುಚ್ಚಿ ನಿಂತಿರುವ ಆ ಸಮಸ್ತವಾನರರನ್ನೂ ತನ್ನ ತಪೋಮಹಿಮೆಯಿಂದ ಎವೆಹಾರುವಷ್ಟರಲ್ಲಿ ಯೇ ಹೊರಕ್ಕೆ ತಂದುಬಿಟ್ಟಳು ವಾನರರೆಲ್ಲರೂ ಆ ಸಂಕಟಪ್ರದೇಶ ದಿಂದ ತಪ್ಪಿಸಿಕೊಂಡು ಬಂದು ನಿಂತಮೇಲೆ, ಧಮ್ಮಚಾರಣಿಯಾದ ತಾಪಸಿ ಯು ಅವರನ್ನು ಸಮಾಧಾನಪಡಿಸುತ್ತ (ಎಲೈ ವಾನರರೆ ! ಬಗೆಬಗೆಯ ಗಿಡುಬಳ್ಳಿಗಳಿಂದ ಶೋಭಿಸುವ ಈ ಪರತವೇ ವಿಂಧ್ಯವು ಇಡೋ' ಇದೇ