ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫a ] ಕಿಹಿಂಥಾಕಾಂಡವು ೧೬೧೯ ಪ್ರಶ್ರವಣಶೈಲವು ಇದೋ ಇತ್ತಲಾಗಿ ಮಹೋದಧಿಯೆಂಬ ಸಮುದ್ರ ವುಂಟು ನಿಮ್ಮೆಲ್ಲರಿಗೂ ಶುಭವಾಗಲಿ'ನಾನು ಹೋಗಿಬರುವೆನು ” ಎಂದುಹೇಳಿ ಆ ಸ್ವಯಂಪ್ರಭೆಯು ಸಂಪದ್ಯುಕ್ತವಾದ ತನ್ನ ಬಿಲವನ್ನು ಪ್ರವೇಶಿಸಿಬಿಟ್ಟ ಳು ಆಮೇಲೆ ಈ ವಾನರರೆಲ್ಲರೂ ಮುಂದೆ ಭಯಂಕರವಾಗಿದ್ದ ಮಹಾಸ ಮುದ್ರವನ್ನು ಕಂಡರು ಭಯಂಕರಗಳಾದ ಅಲೆಗಳಿಂದ ತುಂಬಿ, ಅಪಾರ ವಾಗಿ ಮೊರೆಯಿಡುತಿದ್ದ ಆ ಮಹಾಸಮುದ್ರವನ್ನು ಆಶ್ಚರದಿಂದ ನೋಡು ತಿದ್ದರು ಮಯನ ಮಾಯೆಯಿಂದ ನಿರ್ಮಿತವಾದ ಆ ಬೆಟ್ಟಗಳ ಗುಹೆಯಲ್ಲಿ ಸಂಚರಿಸುತಿದ್ದಾಗಲೇ ಈ ವಾನರರಿಗೆ ಸುಗ್ರೀವನು ಹೇಳಿದ್ದ ಒಂದುತಿಂಗ ಭಕಾಲವೂ ಮೀರಿಹೋಯಿತು ಈ ವಾನರರ ಮನಸ್ಸಿನಲ್ಲಿ ಭಯವೂ ಹೆಚ್ಚು ತ ಬಂದಿತು ಇವರಲ್ಲರೂ ಪಪ್ಪಿತಗಳಾದ ಗಿಡಗಳುಳ್ಳ ಆ ವಿಂಧ್ಯಪಕ್ವತದ * ನೈರುತ್ಯಭಾಗದ ತಪ್ಪಲಮೇಲೆ ಒಂದುಕಡೆಯಲ್ಲಿ ಒಟ್ಟಾಗಿ ಸೇರಿ ಕುಳಿತು ಚಿಂತಿಸುತ್ತಿದ್ದರು ಮುಂದೆ ವಸಂತಋತುವಿನಲ್ಲಿ ಫಲಿಸತಕ್ಕ ಮಾವು ಮೊದ ಲಾದ ಮರಗಳೆಲ್ಲವೂ ಫಲಪುಷ್ಪಗಳ ಭಾರದಿಂದ ಬಗ್ಗಿ, ನೂರಾರು ಕೊನೆಗಳಿಂ ದ ಉಲ್ಲಾಸಹೊಂದಿರುವುದನ್ನು ನೋಡಿದರು ಆಗಲೇ ವಸಂತಕಾಲವು ಪ್ರಾಪ್ತಲಾದುದನ್ನೂ ನೋಡಿ ಇವರ ಮನಸ್ಸಿನ ಭಯವು ಮಿತಿಮೀರಿಹೋ ಯಿತು ಇಷ್ಟು ಕಾಲವು ಕಳೆದು ಹೋದಮೇಲೆ ಸುಗ್ರೀವನಿಂದ ತಮಗೆ ಮರಣಶಿಕ್ಷೆಯೇ ನಿಜವೆಂದು ನಿಶ್ಚಯಿಸಿಕೊಂಡವರಾಗಿ ಒಬ್ಬರಿಗೊಬ್ಬರು ವಿ ಚಾರಮಾಡುತ್ತ “ಓಹೋ' ಆಗಲೇ + ಶಿಶಿರಋತುವು ಕಳೆದು ವಸಂತವು

  • ('ಹಿಮವದ್ಧಿಂಧ್ಯಶೈಲಾಭ್ಯಾಂ ಪ್ರಾಯೋವ್ಯಾ ಪ್ರಾವಸುಂಧರಾ"ಎಂಬುದಾಗಿ ವಿಂಧ್ಯಪರತವು ಪಶ್ಚಿಮದಕ್ಷಿಣಸಮುದ್ರತೀರದವರೆಗೆ ವ್ಯಾಪಿಸಿರುವುದರಿಂದ, ವಾನರರು ಆ ದಿಕ್ಕಿನ ಕೊನೆಯವರೆಗೂ ಹೋಗಿ ಅಲ್ಲಿರುತ್ತಿದ್ದರೆಂದೂಕ್ಕವ

↑ ವಸಂತದಲ್ಲಿ ಫಲಿಸುವ ಮಾವು ಮುಂತಾದ ಗಿಡಗಳಲ್ಲಿ ಮೊದಲಿನ ಶಿಶಿರಋತು ವಿನಲ್ಲಿಯೇ ಹೂಗಳು ಕಾಡುವುದರಿಂದ, ಆಕಷ್ಟಗಳನ್ನು ಕಂಡಾಗಲೇ ವಸಂತವು ಪಿಸಿದುದಾಗಿ ತಿಳಿದುಕೊಂಡರೆಂದು ಭಾವವು, ಸುಗ್ರೀವನು ಶರತ್ಕಾಲದ ಕೊನೆಯ ಭಾಗವಾದ ಮಾರ್ಗಶೀರ್ಷಮಾಸದಲ್ಲಿ ವಾನರಸೇನೆಯನ್ನು ಕರೆಸಿ, ಪುಷ್ಯಮಾಸವನ್ನು ಅವರ ಸೀತಾನ್ವೇಷಣಕ್ಕೆ ಗಡುವಾಗಿ ಮಾಡಿ ಕಳುಹಿಸಿದನು, ಆ ಪುಷ್ಯಮಾಸವು ಕಳೆದು ಹೋಗಿ, ಆಗ ಫಾಲ್ಕುನವು ನಡೆಯುತ್ತಿದ್ದುದರಿಂದಲೇ ಇಲ್ಲಿ ವಸಂತತುವು ಸಮೀಪಿ ನಿದುದಾಗಿ ಹೇಳಿದರೆಂದು ಗ್ರಾಹ್ಯವು