ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܨܘܦܗ ಸರ್ಗ ೫ ] ಕಿಂಧಾಕಾಂಡವು ಡಬೇಕಾದುದೇನು? ಚೆನ್ನಾಗಿ ವಿಮರ್ಶಿಸಿ ನೋಡಿರಿ ನೀವೆಲ್ಲರೂ ಸುಗ್ರೀ ವನ ನಂಬಿಕೆಗೆ ಪಾತ್ರರಾದವರು ನೀತಿಮಾರ್ಗವನ್ನು ಚೆನ್ನಾಗಿ ತಿಳಿದವ ರು ಸ್ವಾಮಿಯಾದ ಆ ಸುಗ್ರೀವನ ಹಿತದಲ್ಲಿಯೇ ಆಸಕ್ತಿಯುಳ್ಳವರು ಯಾವಕಾರಗಳಲ್ಲಿಯೂ ನೀವು ಸಮರ್ಥರು ಕಾಠ್ಯಸಾಧನೆಯಲ್ಲಿ ನಿಮಗೆ ಸಾಟಿಯಾದವರು ಬೇರೊಬ್ಬರೂ ಇಲ್ಲವು ನಿಮ್ಮ ಪೌರುಷವು ಸಮಸ್ತದಿಕ್ಕು ಗಳಲ್ಲಿಯೂ ಸುಪ್ರಸಿದ್ಧವಾದುದು ಸುಗ್ರೀವಾಜ್ಞೆಯಿಂದಲೇ ನೀವೆಲ್ಲರೂ ನನ್ನನ್ನು ಮುಂದಿಟ್ಟುಕೊಂಡು ಹೊರಟುಬಂದಿರುವಿರಿ ನಾವು ಬಂದ ಕಾ ರವೂ ಕೈಗೂಡಲಿಲ್ಲ ಕಾಲವೂ ಮೀರಿಹೋಯಿತು ಇನ್ನು ನಾವು ಇಲ್ಲಿ ಯೇ ಸಾಯಬೇಕಾದುದೇಕೊರತು ಬೇರೆದಾರಿಯಿಲ್ಲ ಇದರಲ್ಲಿ ಸಂದೇಹವೇ ಇಲ್ಲ ವಾನರರಾಜನಾದ ಸುಗ್ರೀವನ ಶಾಸನವನ್ನೇ ಮೀರಿದಮೇಲೆ ನಾವು ಸುಖದಿಂದಿರುವುದೆಂದರೇನು? ಸುಗ್ರೀವನು ತಾನಾಗಿಯೇ ನಿಯಮಿಸಿಕೊಟ್ಟ ಕಾಲವನ್ನು ಮೀರಿ, ಮಹಾಪರಾಧಿಗಳಾದ ಈ ನಮ್ಮೆಲ್ಲರಿಗೂ ಈಗಪ್ಪಾಯೋ। ಪವೇಶವೇ ಯುಕ್ತವು, ಸುಗ್ರೀವನು ಸಹಜವಾಗಿಯ ತೀಕ್ಷ ಸ್ವಭಾವವು ತೃವನು ಇದರಮೇಲೆ ರಾಮನ ಕಾಲ್ಯದಲ್ಲಿಯೂ, ಆತುರವುಳ್ಳವನಾಗಿರುವ ನು ಅವನು ಪ್ರಭುವಾಗಿಯೂ ಇರುವಮು ನಾವು ಈ ಮಹಾಪರಾಧವ ನ್ನು ಮಾಡಿ ಅವನಮುಂದೆ ಹೋಗಿ ನಿಂತರೆ, ನಮ್ಮೆಲ್ಲರನ್ನೂ ಅವನು ದಂಡಿಸು ವನೇ ಹೊರತು ಒಬ್ಬನನ್ನಾದರೂ ಮನ್ನಿಸಲಾರನು ನಾವು ಕಾಲವನ್ನು ಮೀರಿದವರಾದರೂ, ಸೀತಾವೃತ್ತಾಂತವನ್ನಾದರೂ ತಿಳಿದಿದ್ದರೆ ಅವನ ಮನ್ನಣೆಯನ್ನು ಪಡೆಯಬಹುದಾಗಿತ್ತು ಈ ಎರಡು ವಿಷಯಗಳಲ್ಲಿಯೂ, ನಾವು ತಪ್ಪಿ ನಡೆದವರಾದುದರಿಂದ, ಆ ಸುಗ್ರೀವನು ನಮ್ಮನ್ನು ಕೊಂದೇಬಿ ಡುವನು ಆದುದರಿಂದ ಈಗ ನಮ್ಮೆಲ್ಲರಿಗೂ, * ಪ್ರಾಯೋಪವೇಶವೇ ಯು ಕ್ಯವು, ನಾವು ನಮ್ಮ ಹೆಂಡಿರುಮಕ್ಕಳನ್ನೂ, ನಮ್ಮ ಮನೆಗಳನ್ನೂ, ನ ಮ್ಮ ಸಮಸ್ತಧನವನ್ನೂ, ಗಮನಕ್ಕೆ ತಾರದೆ ಇಲ್ಲಿಯ ಸಾಯುವುದು ಮೇಲು, ನಾವು ಇಲ್ಲಿಂದ ಹಿಂತಿರುಗಿ ಹೋದರೂ ಸುಗ್ರೀವನು, ಚಿತ್ರವಧೆ - * ಪ್ರಾಯೋಪವೇಶವೆಂದರೆ, ಅನ್ನ ಪಾನಗಳನ್ನು ತ್ಯಜಿಸಿ ಮಲಗಿ ಪ್ರಾಣವನ್ನು ಬಿಡುವದು.