ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨೬ ಸರ್ಗ, ೫೫.] ಕಿಂಧಾಕಾಂಡವು ನವೂ ಇಲ್ಲ ಆದುದರಿಂದ ನೀನು ಅವನಲ್ಲಿಗೆ ಹೋಗಿ ಸೇರಬೇಕಾದುದೇ ಉಚಿತವು” ಎಂದನು ಇಲ್ಲಿಗೆ ಐವತ್ತುನಾಲ್ಕನೆಯ ಸರ್ಗವು | ++ಅಂಗದಾದಿವಾನರರು ಪ್ರಾಯೋಪವೇಶವನ ಮಾಡಿದುದುw ಹೀಗೆ ಹನುಮಂತನು ವಿನಯದಿಂದಲೂ, ಭರದಿಂದಲೂ, ರಾಜಭ ಕಿಯಿಂದಲೂ ಕೂಡಿ ಹೇಳಿದ ಮಾತನ್ನು ಕೇಳಿ, ಅಂಗದನು ಆತನ ನ್ನು ಕುರಿತು, “ಎಲೈವಾಯುಪುತ್ರನೆ ! ನೀನು ಸುಗ್ರೀವನನ್ನು ಗುಣಾಢ ನೆಂದು ಹೇಳಿದೆಯಲ್ಲವೆ? ಎಂದಿಗೂ ಹಾಗೆಣಿಸಬೇಡ' ಸ್ಥಿರಬುದ್ಧಿಯಾಗಲಿ, ದೇಹಶುದ್ಧಿಯಾಗಲಿ, ಅಂತಃಕರಣಶುದ್ಧಿಯಾಗಲಿ, ದಯಾಳುತ್ವವಾಗಲಿ, ಋಜುಸ್ವಭಾವವಾಗಲಿ, ವಿಕ್ರಮಶ ಇತ್ಯಾದಿಗಳಾಗಲಿ ಸುಗ್ರೀವನಲ್ಲಿ ಎಷ್ಟು ಮಾತ್ರವೂ ಇಲ್ಲ ಅವನು ಧಮ್ಮಭಷ್ಟನೆಂಬುದಕ್ಕೆ ನಮಗೆ ಬೇರೆ ನಿದರ್ಶನವೇ ಕೆ? ಯಾವನು ತನ್ನ ಹಿರಿಯಣ್ಣನು ಬದುಕಿರುವಾಗಲೇ, ಅವನ ಪ್ರಿಯಪ ತಿಯಾಗಿ, ಧದಿಂದ ತನಗೆ ತಾಯಿಯಂತೆಯೇ ಇರುವ ತಾರೆಯನ್ನು ಪರಿ ಗ್ರಹಿಸಿ,ಲೋಕಜುಗುಪ್ಪಿತವಾದ ಕಾಠ್ಯವನ್ನು ಮಾಡಿರುವನೋ, ಅವನನ್ನು ಹೇ ಗೆ ಧರಜ್ಞನೆಂದು ಹೇಳಬಹುದು?ಇದಲ್ಲದೆ ಅವನು, ತನ್ನಣ್ಣನು ಬಾಗಿಲಲ್ಲಿಕಾ ವಲಿರುವಂತೆ ತನಗೆ ನಿಯಮಿಸಿ, ರಾಕ್ಷಸನೊಡನೆ ಯುದ್ಧಕ್ಕಾಗಿ ಬಿಲದೊಳಗೆ. ಪ್ರವೇಶಿಸಿದಮೇಲೆ,ಕಲ್ಲುಬಂಡೆಗಳಿಂದ ಆ ಬಿಲದ್ವಾರವನ್ನು ಮುಚ್ಚಿ ಬಂದವ ನಲ್ಲವೆ? ಹೀಗೆ ಕಪಟಕಾರವನ್ನು ಮಾಡಿದ ಆ ಸುಗ್ರೀವನನ್ನು ಹೇಗೆ ನಿಷ್ಠ ಪಟಿಯೆಂದು ಹೇಳಬಹುದು ಮತ್ತು ರಾಮನೊಡನೆ ತಾನು ಸಖ್ಯವನ್ನು ಬಳೆಸುವುದಾಗಿ ಕೈಹಿಡಿದು ಪ್ರತಿಜ್ಞೆ ಮಾಡಿ ಕೊಟ್ಟಿದ್ದರೂ, ತನಗುಪಕಾರಿ ಯಾದ ಆ ರಾಮನವಿಷಯದಲ್ಲಿಯೇ ಆಡಿದ ಮಾತಿಗೆ ತಪ್ಪಿ ಕಾಮಮೋಹಿತ ನಾಗಿ ಕಿಷಿಂಧೆಯಲ್ಲಿ ನಿಂತುಬಿಟ್ಟ, ಆ ಸುಗ್ರೀವನನ್ನು ಪ್ರತಿಜ್ಞೆಗೆತಪ್ಪದವ ನೆಂದು ಹೇಗೆ ಹೇಳಬಹುದು?ಇವನು ಲಕ್ಷಣವಭಯಕ್ಕಾಗಿಯೇ ನಮ್ಮನ್ನು ಸೀತಾನ್ವೇಷಣಾರ್ಥವಾಗಿ ನಿಯೋಗಿಸಿರುವನೇ ಹೊರತು, ಅದಕ್ಕೆ ಹೆದರಿ ಈಕಾರಕ್ಕೆ ಪ್ರಯತ್ನಿಸಿದವನಲ್ಲ ಅವನಲ್ಲಿ ಧರವೆಲ್ಲಿಯದು ? ತನ್ನಣ್ಣ ನನ್ನೇ ಕೊಲ್ಲಬೇಕೆಂದು ಯತ್ನಿಸಿದ ಪಾಪಾತ್ಮನಾಗಿಯೂ,ಉಪಕಾರಿಯಾದ