ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೬.] ಕಿಹಿಂಥಾಕಾಂಡವು. ೧೬೨೯ ಎಂದನು ಇಷ್ಟು ಮಾತುಗಳನ್ನು ಹೇಳಿದೊಡನೆಯೇ,ಅಂಗದನು ವೃದ್ದರಾ ದ ಆ ವಾನರರೆಲ್ಲರಿಗೂ ನಮಸ್ಕರಿಸಿ, ದುಃಖದಿಂದ ಗೋಳಿಡುತ್ತ ನೆಲದಮೇ ಲೆ ದರ್ಭೆಯನ್ನು ಹಾಸಿಕೊಂಡು ಮಲಗಿಬಿಟ್ಟನು ಇದನ್ನು ನೋಡುತಿದ್ದ ವಾನರರೆಲ್ಲರೂ ಸಂಕಟದಿಂದ ರೂದಿಸಲಾರಂಭಿಸಿದರು ಒಬ್ಬೊಬ್ಬರ ಕ ಇುಗಳಿಂದಲೂ ಬಿಸಿಬಿಸಿಯಾದ ಕಣ್ಣೀರು ಬಿಳುತಿತ್ತು ಒಬ್ಬೊಬ್ಬರೂ ಸುಗ್ರೀವನನ್ನು ನಿಂದಿಸಿ,ವಾಲಿಯನ್ನು ಸ್ತುತಿಸುತ್ತ ಅಂಗದನಸುತ್ತಲೂ ಸೇರಿ ತಾವೂ ಪ್ರಾಯೋಪವೇಶವನ್ನು ಮಾಡುವುದಕ್ಕೆ ಉಪಕ್ರಮಿಸಿದರು ಆ ವಾನರರೆಲ್ಲರೂ ಅಂಗದನ ಮನೋಭಿಪ್ರಾಯವನ್ನು ತಿಳಿದು, ತಮಗೂ ಮರ ಣವೇ ಯುಕ್ತವೆಂದು ನಿಶ್ಚಯಿಸಿ, ಆಚಮನವನ್ನು ಮಾಡಿ, ಶುದ್ಧರಾಗಿ ಬಂದು ದಕ್ಷಿಣಾಗ್ರವಾಗಿ ದರ್ಭೆಗಳನ್ನು ಹರಡಿ ಆಸಮುದ್ರದ ಉತ್ತರತೀರದಲ್ಲಿ ಪೂಹ್ವಾಭಿಮುಖವಾಗಿ ಮಲಗಿದರು ಹೀಗೆ ಮಲಗಿದ ವಾನರರೆಲ್ಲರೂ ಒಬ್ಬ ರಿಗೊಬ್ಬರು, ರಾಮನು ದೇಶಭ್ರಷ್ಟನಾಗಿ ಬಂದುದನ್ನೂ, ದಶರಥನ ಮರ ಇವನ್ನೂ ಖರದೂಷಣಾದಿಗಳ ವಧವನ್ನೂ, ಸೀತಾಪಹರಣವನ್ನೂ , ಜ ಟಾಯುವಧವನ್ನೂ, ವಾಲಿವಧವನ್ನೂ, ಸುಗ್ರೀವನು ಸಂಕೇತಕಾಲವನ್ನು ಮೀರಿದುದಕ್ಕಾಗಿ ರಾಮನಿಗುಂಟಾದ ಕೋಪವನ್ನೂ, ಸೀತಾನ್ವೇಷಣಾರ್ಥ ವಾಗಿ ಸುಗ್ರೀವನು ದಿಕ್ಕುದಿಕ್ಕಿಗೆ ವಾನರರನ್ನು ಕಳುಹಿಸಿದ ಕ್ರಮವನ್ನೂ, ಕೊನೆಗೆ ತಮಗುಂಟಾದ ಈ ಪ್ರಾಯೋಪವೇಶವೆಂಬ ಮಹಾಭಯವನ್ನೂ, ಕ್ರಮವಾಗಿ ಹೇಳಿಕೊಳ್ಳುತ್ತ ಮಲಗಿದ್ದರು ಹೀಗೆ ಪತಾಕಾರವುಳ್ಳ ಆ ಮಹಾಕಪಿಗಳೆಲ್ಲರೂ ಒಬ್ಬರಿಗೊಬ್ಬರು ಮಾತಾಡುತ್ತಿರುವಾಗ, ಅದರಿಂದ ಹೊರಟ ದೊಡ್ಡಕಲಕಲಧ್ವನಿಯು ಆ ಪತದಲ್ಲಿ ವ್ಯಾಪಿಸಲು, ಮೇಫುಗ ರ್ಜನೆಗಳಿಂದುಂಟಾಗುವ ಪ್ರತಿಧ್ವನಿಯಂತೆ ಅಲ್ಲಿನ ಗುಹೆಗಳಿಂದ ದೊಡ್ಡ ಪ್ರತಿ ಧ್ವನಿಯು ಹೊರಟಿತು. ಇಲ್ಲಿಗೆ ಐವತ್ತೈದನೆಯ ಸರ್ಗವು. ಸಂಪಾತಿಯು ಬಂದುದು ಆತನನ್ನು ನೋಡಿ ವಾನರರು)... ದುಃಖದಿಂದ ಸಂಭಾಷಿಸಿದುದು ಈ ವಾನರರೆಲ್ಲರೂ ಯಾವ ಪಕ್ವತಪ್ರದೇಶದಲ್ಲಿ ಪ್ರಾಯೋಪವಿಷ್ಯ ಠಾಗಿ ಮಲಗಿದ್ದರೋ,ಆಸ್ಥಳದಲ್ಲಿಯೇ ಸಂಪಾತಿಯೆಂಬ ಗೃಧ್ರರಾಜನೊಬ್ಬ