ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧ ] ಕಿಷಿಂಧಾಕಾಂಡವು ೧೩೩೭ ಜಲಪಕ್ಷಿಗಳ ಸಮೃದ್ಧಿಯನ್ನೂ ನೋಡಿದೆಯಾ? ಭ್ರಮರಸಮೂಹಗಳಿಂದ ತುಂಬಿ ಬಾಲಸೂರಬಿಂಬಗಳಂತೆ ತೋರುತ್ತಿರುವ ಈ ಕಮಲಗಳು ಪಂಪಾ ಸರೋವರದ ನೀರೇ ಕಣ್ಣಿಗೆ ಕಾಣದಂತೆ ಸುತ್ತಲೂ ಮುಚ್ಚಿಕೊಂಡಿರುವುದ ನ್ನು ನೋಡಿದೆಯಾ? ಮತ್ತು ಅನೇತಚಕ್ರವಾಕಪಕ್ಷಿಗಳಿಂದ ಕೂಡಿ,ವಿಚಿತ್ರ ವಾದ ತೀರವನಗಳಿಂದ ವರಿವೃತವಾಗಿ, ನೀರು ಕುಡಿಯುವುದಕ್ಕೆ ಬಂದ ಆನೆ ಗಳೇ ಮೊದಲಾದ ಮೃಗಗಳ ಹಿಂಡಿನಿಂದ ಶೋಭಿಸುವ ಈ ಪಂಪಾಸರೋ ವರವು ಎಷ್ಟು ಮನೋಹರವಾಗಿರುವುದು ನೋಡು ಎಲೆವನೆ'ಗಾಳಿಯಿಂ ಬಾಡುತ್ತಿರುವ ಅಲಗಳ ಪೆಟ್ಟಿಗೆ ಸಿಕ್ಕಿ, ಕಶೆಯಿಂದ ಹೊಡೆಯಲ್ಪಟ್ಟವರಂತೆ ನಡುಗುತ್ತಿರುವ ಈಕಮಲಗಳನ್ನು ನೋಡಿದೆಯಾ? ಲಕ್ಷಣಾ'# ಕಮಲದಳ ದಂತೆ ಕಣ್ಣುಳ್ಳವಳಾಗಿಯೂ,ಯಾವಾಗಲೂ ಇಂತಹ ಕಮಲಗಳಲ್ಲಿ ಅತ್ಯಾದ ರವುಳ್ಳವಳಾಗಿಯೂ ಇರುವ ಆಸೀತೆಯನ್ನು ನೋಡದೆ ಹೀಗೆಬದುಕಿರುವುದೇ ನನಗೆ ಇಷ್ಟವಾಗಿಲ್ಲ' ಅಹಾ' ಆ ಮನ್ಮಥನ ಕೌಲ್ಯವನ್ನು ನಾನೇನೆಂದು ಹೇ ಭಲಿ! ಆತನ ಕುಟಿಲಬುದ್ಧಿಯನ್ನು ನೋಡಿದೆಯಾ? ಮಂಗಳಾಂಗಿಯಾದ ಆ ಸೀತೆಯು ಈಗ ಎಲ್ಲಿಯೋ ಕಣ್ಮರೆಯಾಗಿದ್ದುಕೊಂಡು ಪುನಃಸಿಕ್ಕುವಹಾಗಿಲ್ಲ ಡಿದ್ದರೂ, ಆಗಾಗ ಮನ್ಮಥನು ನನ್ನನ್ನು ಸಂಕಟಪಡಿಸುವುದಕ್ಕಾಗಿಯೇ ಅ ಗೋಚರಳಾಗಿರುವ ಸೀತಯನ್ನೂ ನನ್ನ ಸ್ಮರಣೆಗೆ ತರುತ್ತಿರುವನು ಪುಷ್ಟಿತ ಗಳಾದ ವೃಕ್ಷಗಳುಳ್ಳ ಈ ವಸಂತವು ಮಾತ್ರ ಬಾರಿಬಾರಿಗೂ ನನ್ನ ಮುಂದೆ ನಲಿದು ನನ್ನ ಪ್ರಾಣಗಳನ್ನು ಪೀಡಿಸದಿದ್ದ ಪಕ್ಷದಲ್ಲಿ, ನಾನು ಹೇಗಾದರೂ ಈಗ ಪ್ರಾಪ್ತವಾಗಿರುವ ಮನ್ಮಥಪೀಡೆ ಯನ್ನು ಸಹಿಸಿಕೊಳ್ಳಬಲ್ಲನು ಆ ಸೀತೆಯು ನನ್ನೊಡನೆ ಕಲೆತಿರುವಾಗ ನನ್ನ ಮನಸ್ಸಿಗೆ ಯಾವ ಯಾವ ವಸ್ತು ಗಳು ಇಂಪನ್ನು ಕೊಡುತಿದ್ದುವೋ, ಆವುಗಳೇ ಈಗ ನನಗೆ ಬಹಳ ದುಃಖಕ ರಗಳಾಗಿ ಸುಣಮುಖರುವುವು ವತ್ಸಲಕ್ಷಣಾ ! ಈ ಕಮಲದ ಮೊಗ್ಗಿ

  • ಪಂಪೆಯನ್ನು ನೋಡಿದಕ್ಷಣವೇ ಅದರಿಂದ ತನಗುಂಟಾದ ಅರತಿಯನ್ನು ಕಾಮೋದ್ರೇಕಮ್ಮಾಜದಿಂದ ತಿಳಿಸುವುದಾಗಿ ಗ್ರಾಹ್ಯವ ಇದರಿಂದ ಇಲ್ಲಿ “ಸ ಏಕಾ ಕೀನ ರಮತೇ” ಎಂಬಂತೆ ವಿರಜಾತೀರದಲ್ಲಿಯೂ ತನಗೆ ವಾಸವು ಹಿತಕರವಾಗಿಲ್ಲವೆಂ

ದು ತಿಳಿಸುವುದಾಗಿ ಅಂತರಾರ್ಥವನ್ನು ಗ್ರಹಿಸಬೇಕು