ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೈ ಹೊತ್ತು ಕಳೆದೆ ನಿರೀಕ್ಷಿಸುತ್ತ ಮನಸ್ಸಿನಾಡುತಿದ್ದೆ ಸರ್ಗ ೬೩] ಕಿಷಿಂಧಾಕಾಂಡವು. ೧೩೪? ( ಸಂಪಾತಿಗೆ ರೆಕ್ಕೆಗಳು ಬಂದುದು ಅವನು ವಾರರರಿಗೆ, ಮುಂದಿನ ಕರ್ತವ್ಯವನ್ನು ಹೇಳಿ, ಅವರ ಅನುಮತಿ ( ಯನ್ನು ಪಡೆದು ಹೊರಟುಹೋದುದು | “ಎಲೈವಾನರರೆ' ಆ ನಿಶಾಕರಮುನಿಯು ಇವೇ ಮೊದಲಾದ ಇನ್ನೂ ಬೇರೆಬೇರೆ ಮಾತುಗಳಿಂದ ನನ್ನನ್ನು ಪ್ರೋತ್ಸಾಹಿಸಿ ಸಮಾಧಾನವನ್ನು ಮಾ ಡಿ, ಅನುಜ್ಞೆಯನ್ನು ಕೊಟ್ಟು, ತಾನು ತನ್ನಾ ಶ್ರಮಕ್ಕೆ ಪ್ರವೇಶಿಸಿದನು ಆ ಮೇಲೆ ನಾನು ಮೆಲ್ಲಮಲ್ಲಗೆ ಪರೂತಳುಹೆಯಿಂದ ಸರಿದು ಬಂದು, ವಿಂಧ್ಯಪ ಊತದ ಒಂದುಶಿಖರವನ್ನೇ ಇರಿ, ನಿಮ್ಮ ಆಗಮನವನ್ನೇ ಇದಿರುನೋಡುತಿದ್ದೆ ನು ಆ ಮಹರ್ಷಿಯು ಹೇಳಿದ ಮಾತುಗಳನ್ನು ಮನಸ್ಸಿನಲ್ಲಿಯೇ 3 ಟ್ಟುಕೊಂಡು, ದೇಶಕಾಲಗಳನ್ನು ನಿರೀಕ್ಷಿಸುತ್ತ ಇದುವರೆಗೆ ನೂರಾರು ಸಂವತ್ಸರಗಳನ್ನು ಕಳೆದೆನು ಆ ಮಹರ್ಷಿಯು * ಮಹಾಪ್ರಸ್ಥಾನ ಕ್ಯ ಹೋಗಿ ಸ್ವರ್ಗವನ್ನು ಸೇರಿದಂದಿನಿಂದ ಇಲ್ಲಿ ನಾನು ಸಂಕಟ ದಿಂದ ಬೇಯುತ್‌, ಮನಸ್ಸಿನಲ್ಲಿ ನಾನಾವಿಧದಿಂದ ಚಿಂತಿಸಿ ಕೊರಗು ತಿರುವೆನು ನನಗೆ ಸಾಯಬೇಕೆಂಬ ಬುದ್ಧಿಯು ಹುಟ್ಟಿದಾಗಲೆಲ್ಲಾ ಆನಿಶಾ ಕರಮಹರ್ಷಿಯ ಮಾತನ್ನು ಮನಸ್ಸಿಗೆ ತಂದುಕೊಂಡು, ಆ ಪ್ರಯತ್ನವನ್ನು ಬಿಟ್ಟು ನನಗೆ ನಾನೇ ಸಮಾಧಾನಮಾಡಿಕೊಳ್ಳುತ್ತಿರುವೆನು ಆ ಋಷಿಯು ನನಗೆ ತಿರುಗಿ ರೆಕ್ಕೆಗಳೂ, ಬಲವೂ, ಬರುವುದಾಗಿ ಹೇಳಿರುವ ಮಾತುಗಳೇ ಈಗ ನನ್ನ ಪ್ರಾಣಗಳನ್ನು ರಕ್ಷಿಸುತ್ತಿರುವುವೇಹೊರತು ಬೇರೆಯಲ್ಲ ಅವನು ನನಗೆ ಆಗ ತೋರಿಸಿರುವ ಆಶೋತ್ತರವೇ, ಅಗ್ನಿ ಜ್ವಾಲೆಯು ಅಂಧಕಾರವ ನ್ನು ನೀಗಿಸುವಂತೆ ನನ್ನ ಮನೋದುಃಖವನ್ನು ನೀಗಿಸುತ್ತಿರುವುದು ಎಲೈವಾ ನರರೆ'ಆ ದುರಾತ್ಮನಾದ ರಾವಣನ ಪರಾಕ್ರಮವನ್ನು ಬಲ್ಲವನಾಗಿದ್ದ ನಾನು ನನ್ನ ಮಗನನ್ನು ನೋಡಿ ಆಗಲೇ ನೀನುರಾವಣನನ್ನು ಕೊಂದು ಸೀತಯನ್ನು ರ ಕಿಸದೆ ಬರಬಹುದೆ?” ಎಂದು ಕೋಪದಿಂದ ಹೆದರಿಸಿದೆನು ಏನಾದರೇನು? ಆ ಸೀತೆಯ ವಿಲಾಪವನ್ನು ಕೇಳಿಯೂ, ರಾಮಲಕ್ಷ್ಮಣರಿಬ್ಬರೂ ಸೀತಾವಿರಹಿತ

  • ಮಹಾಪ್ರಸ್ಥಾನವೆಂದರೆ ಮರಣಪ್ರಾಪ್ತಿಗಾಗಿ ಹಿಮವಂತಕ್ಕೆ ಹೋಗತಕ್ಕ ಯಾತ್ರೆಯು.

104