ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೬೪ ) | ಕಿಂಧಾಕಾಂಡವು. ೧೬೫೧ ಮುಹೂರ್ತವು ಪ್ರಾಪ್ತವಾದೊಡನೆ ದಕ್ಷಿಣಾಭಿಮುಖವಾಗಿ ಹೊರಟರು. ಇಲ್ಲಿಗೆ ಅರುವತ್ತುಮೂರನೆಯಸರ್ಗವು ++ವಾನರರು ಸಮುದ್ರದ ಕಡೆಗೆ ಹೋದುದು++ ಸಿಗ್ನ ಪರಾಕ್ರಮವುಳ್ಳ ಆ ವಾನರವೀರರು ಸಂಪಾತಿಯ ಮಾತಿನ ಮೇಲೆ ಸೀತೆಯಿರುವ ಸ್ಥಳವನ್ನು ತಿಳಿದು, ಸಂತೋಷದಿಂದ ಹಾರಾಡುತ್ತ, ಪುನಃ ಎಲ್ಲರೂ ಒಂದಾಗಿ ಸೇರಿ ಉತ್ಸಾಹದಿಂದ ಸಿಕ್ಕ ನಾದಮಾಡಿದರು ಸಂಪಾತಿಯು ಹೇಳಿದಂತೆಯೇ ರಾವಣನ ನಿವಾಸದ ದಾರಿಯನ್ನು ಗೊತ್ತು ಮಾಡಿ, ಸೀತೆಯನ್ನು ನೋಡಬೇಕೆಂಬ ಆತುರದಿಂದ ಮಹೋತ್ಸಾಹವುಳ್ಳವ ರಾಗಿ ಸಮುದ್ರತೀರಕ್ಕೆ ಬಂದರು ಭಯಂಕರಪರಾಕ್ರಮಿಗಳಾದ ಆ ವಾನ ರರೆಲ್ಲರೂ ಅಲ್ಲಿ ಸೇಗಿ “ಸಮಸ್ತ ಪ್ರಪಂಚವನ್ನೂ ತನ್ನಲ್ಲಿ ಪ್ರತಿಬಿಂಬಿಸುವಂ ತೆ ಮಾಡತಕ್ಕ ದೊಡ್ಡ ಕನ್ನಡಿಯಂತಿರುವ ಮಹಾಸಮುದ್ರವನ್ನು ನೋಡಿ ದರು ಹೀಗೆ ಬಲಾಡ್ಯರಾದ ವಾನರರೆಲ್ಲರೂ ಆ ದಕ್ಷಿಣಸಮುದ್ರದ ಉತ್ತರ ತೀರವನ್ನು ಸೇರಿ ಅಲ್ಲಿ ನಿಂತು, ವಿಕಾರರೂಪವುಳ್ಳವುಗಳಾಗಿಯೂ, ಬ ಹಳ ದೊಡ್ಡ ದೇಹವುಳ್ಳವುಗಳಾಗಿಯೂ ಇದ್ದ ಬಗೆಬಗೆಯ ಜಂತುಗಳು ಬಾ ಯನ್ನು ತೆರೆದುಕೊಂಡು ಸಮುದ್ರಜಲದಲ್ಲಿ ಕ್ರೀಡಿಸುವುದನ್ನೂ ಕಂಡರು ಅಲೆಗಳು ತುಂಬಿ ತುಳುಕುತ್ತಿದ್ದುವು ಆ ಮಹಾಸಮುದ್ರವು ಒಂದುಕಡೆ ಯಲ್ಲಿ ಮಲಗಿದಂತೆ ಶಾಂತವಾಗಿಯೂ, ಮತ್ತೊಂದು ಕಡೆಯಲ್ಲಿ ಆಡುವಂ ತೆ ಉಲ್ಲೋಲಕಲ್ಲೋಲವಾಗಿಯೂ, ಕಾಣುತಿತ್ತು ಆ ಸಮುದ್ರದ ನಡು ನಡುವೆ ಮಹೋನ್ನತಗಳಾಗಿ ಪಕ್ವತಗಳಂತೆ ಉಬ್ಬಿದ ಜಲರಾಶಿಯು ತುಳು ಕಾಡುತಿತ್ತು ಕೆಲವು ಕಡೆಯಲ್ಲಿ ದಾನವೇಂದ್ರರೂ, ಮತ್ತೆ ಕೆಲವೆಡೆಗಳಲ್ಲಿ ಪಾತಾಳವಾಸಿಗಳಾದ ನಾಗರೂ ವಿಹರಿಸುತಿದ್ದರು ನೋಡುವಾಗಲೇ ಮೈ ಯಲ್ಲಿ ರೋಮಾಂಚವನ್ನೆಬ್ಬಿಸುವಂತೆ ಮಹಾಭಯಂಕರವಾದ ಆ ಸಮು ದ್ರವನ್ನು ಕಂಡೊಡನೆ, ವಾನರರಿಗೆ ಮನಸ್ಸಿನಲ್ಲಿ ಚಿಂತೆಯುಂಟಾಯಿತು.

  • ಇಲ್ಲಿ “ಸಮಸ್ತ ಪ್ರಪಂಚದೊಳಗಿನ ಸಕಲವಸ್ತುಗಳಿಂದಲೂ ಪರಿಪೂರ್ಣ ವಾದ ಮಹಾಸಮುದ್ರ”ವೆಂದು ಗೋವಿಂದರಾಜರು ಅಕ್ಖಾಂತರವನ್ನು ಮಾಡಿರುವರು.