ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೫೬ ಶ್ರೀಮದ್ರಾಮಾಯಣವು [ಸರ್ಗ ೬೫' ರೆನು” ಎಂದನು ಆಗ ವಾಕ್ಷಾತುರವುಳ್ಳ “ವಾನರೋತ್ತಮನಾದ ಜಾಂಬ ವಂತನು ಅಂಗದನನ್ನು ನೋಡಿ, “ಎಲೈ ಯುವರಾಜನೆ' ಈ ಸಮಸ್ತವಾನರ ರಿಗೂ, `ಭಲ್ಲಕಗಳಿಗೂ ನೀನು ಮೇಲಾದವನೆಂಬುದರಲ್ಲಿ ಸಂದೇಹವೇನಿ ದೆ? ಲಂಪುರದಲ್ಲಿ ನಿನಗಿರುವ ಶಕ್ತಿಯು ಇಂತದೆಂಬುದನ್ನು ನಾವೆಲ್ಲರೂ ತಿಳಿದೇ ಇರುವೆವು ಈ ನೂರುಯೋಜನಗಳುಮಾತ್ರವೇ ಅಲ್ಲ' ಸಹಸ್ರಯೋ ಜನಗಳನ್ನಾದರೂ ಹಾರಿ, ಹಿಂತಿರುಗಿಬರುವ ಶಕ್ತಿಯೂ ನಿನಗಿರುವುದರಲ್ಲಿ ಸಂದೇಹವಿಲ್ಲ ಆದರೂ ನೃತ್ಯರಾದ ನಾವೆಲ್ಲರೂ ಇದ್ದುಕೊಂಡು, ಪ್ರ ಭುವಾದ ನಿನ್ನಿಂದ ಕೆಲಸಮಾಡಿಸುವುದೆಂದರೇನು ? ಇದು ಬಹಳ ದೋ ಪಾಸ್ಪದವು, ಯಾವ ಸಾಸ್ತ್ರವೂ ಇದನ್ನೊಪ್ಪುವುದಿಲ್ಲ ಪ್ರಭುವಾದ ನಿನ್ನ ನ್ನು ಕಳುಹಿಸುವುದು ನೃತ್ಯರಾದ ನಮಗೆ ಯುಕ್ತವಲ್ಲ ಪ್ರಭುವಾದವನು ನೃತ್ಯರನ್ನು ಕೆಲಸಕ್ಕೆ ನಿಯಮಿಸುವನೇ ಹೊರತು ತಾನು ನಿಮಾನ್ಯನಲ್ಲ ಈಗ ನಮಗೆ ನೀನು ಪ್ರಭುವಾಗಿರುವುದರಿಂದ, ನೀನು ನಮ್ಮಲ್ಲರಿಗೂ ಯಾ ವ ಕಾಠ್ಯವನ್ನಾದರೂ ನಿಯಮಿಸಬಹುದು ಯಾವ ವಿಷಯದಲ್ಲಿಯೂ ನಾವು ನಿನಗೆ ನಿಯಾಮಕರಲ್ಲ ಎಲೈ ಪರಂತಪನೆ' ನೀನು ನಮ್ಮನ್ನು ಕಾಪಾ ಡತಕ್ಕ ಸ್ವಾಮಿಯಾದುದರಿಂದ, ನಾವೆಲ್ಲರೂ ನಿನ್ನನ್ನು ಸುಖವಾಗಿ ರಕ್ಷಿಸಿ ಕೊಳ್ಳಬೇಕಲ್ಲವೆ ? ಸೈನಿಕರಲ್ಲರಿಗೂ ಸ್ವಾಮಿಯಾದವನೇ ಎಚ್ಚರಿಕೆಯಿಂದ ರಕ್ಷಿಸಿಡಬೇಕಾದ ಮುಖ್ಯವಸ್ತುವು ಇದನ್ನು ನಾನಾಗಿ ಹೇಳುವವನಲ್ಲ. ಲೋಕಸ್ವಭಾವವೇ ಹೀಗಿರುವುದು ನಿನ್ನನ್ನು ನಿಥಿಯಂತೆ ಎಚ್ಚರಿಕೆಯಿಂದ ರಕ್ಷಿಸಿಡಬೇಕಾದುದೇ ನಮ್ಮ ಮುಖ್ಯಕರವ್ಯವು ಇಷ್ಟೇಅಲ್ಲದೆ ವೃಕ್ಷಗಳಿಗೆ ಬೇರು ಹೇಗೋ ಹಾಗೆ ಪ್ರಕೃತಕಾರಕ್ಕೆ ನೀನೇ ಮೂಲಭೂತನು, ಸಮ ಸಕಾಠ್ಯಕ್ಕೂ ಮೂಲಪ್ರಾಯವಾದ ವಸ್ತುವನ್ನು ಅಪಾಯವಿಲ್ಲದೆ ರಕ್ಷಿಸಿ ಟ್ಟುಕೊಳ್ಳಬೇಕು ಕಾರಜ್ಞರು ಅನುಸರಿಸಬೇಕಾದ ನೀತಿಯ ಇದು. ಮ

  • ಕಪಿಗಳಿಗೂ ಕರಡಿಗಳಗೂ ಬಹಳ ಭೇಧವಿಲ್ಲದುದರಿಂದಲೇ, ಇಲ್ಲಿ ಜಾಂಬ ವಂತನನ್ನು ವಾನರೋತ್ತಮನೆಂದು ಸಂಬೋಧಿಸಿದುದ್ದಾಗಿ ಗ್ರಾಹ್ಯವು ಹಾಗೆಯೇ ಮುಂದ ಅಂಗದನನ್ನು ಭಕಶ್ರೇಷ್ಠನೆಂದುಜಾಂಬವಂತನುಸ್ತುತಿಸುವುದಕ್ಕೂ ಇದೇ ಕಾರರನ