ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫೮ ಶ್ರೀಮದ್ರಾಮಾಯಣವು [ಸರ್ಗ. ೬೩ ರನ್ನು ಹೀಗೆಂದು ಸಮಾಧಾನಪಡಿಸಿ, ಪ್ರತ್ಯೇಕವಾದ ಒಂದು ಏಕಾಂತ ತಸ್ಥಳದಲ್ಲಿ ಸುಖವಾಗಿ ಕುಳಿತಿದ್ದ ಆಂಜನೇಯನ ಬಳಿಗೆ ಬಂದು,ಬಲಪರಾಕ್ರ ಮಗಳಿಂದ ಪ್ರಸಿದ್ಧವಾಗಿಯೂ, ಲಂಘನಶಕ್ತಿಯುಳ್ಳವರಲ್ಲಿ ಮೇಲಾಗಿ ಯೂ ಇರುವ ಆ ಮಾರುತಿಯನ್ನು ನೋಡಿ, ಸಮುದ್ರಲಂಘನಕಾರಕ್ಕಾ ಗಿ ಅವನನ್ನು ಪ್ರೋತ್ಸಾಹಿಸತೊಡಗಿದನು ಇಲ್ಲಿಗೆ ಆರುವತ್ತೈದನೆಯ ಸರ್ಗವು. S ಜಾಂಬವಂತನು ಸಮುದ್ರಲಂಘನಕಾರಕ್ಕಾಗಿ ) ಆಂಜನೇಯನನ್ನು ಪ್ರೇರಿಸಿದುದು * ಅಷ್ಟು ಲಕ್ಷವಾನರಸೈನ್ಯವೂ ದುಃಖಿತವಾಗಿರುವುದನ್ನು ನೋಡಿ, ಜಾಂ ಬವಂತನು ಏಕಾಂತದಲ್ಲಿ ಕುಳಿತಿದ್ದ ಆಂಜನೇಯನಬಳಿಗೆ ಬಂದು ಹೇಳುವ ನು (ಎಲೈ ಹನುಮಂತನೆ' ನೀನಾದರೋ, ಇಲ್ಲಿನ ಸಮಸ್ತವಾನರಸೈನ್ಯ ದಲ್ಲಿಯೂ, ಮೇಲಾದ ವೀರನೆನಿಸಿಕೊಂಡಿರುವ ಸಮಸ್ಯಶಾಸ್ತ್ರಗಳಲ್ಲಿಯೂ ನಿಪುಣನೆನಿಸಿಕೊಂಡಿರುವೆ ಹೀಗಿದ್ದರೂ ಈಗ ನೀನು ಈ ಏಕಾಂತಸ್ಥಳದಲ್ಲಿ ಕುಳಿತು ಮಾತಾಡದಿರಬಹುದೆ? ನೀನು ತೇಜಸ್ಸಿನಿಂದಲೂ, ಬಲದಿಂದಲೂ, ಸಮಸ್ತ ವಾನರರಾಜನಾದ ಸುಗ್ರೀವನಿಗೂ, ಆ ರಾಮಲಕ್ಷ್ಮಣರಿಗೂ ಎಣೆ ಯೆನಿಸಿಕೊಂಡವನಲ್ಲವೆ? ಅರಿಷ್ಟನೇಮಿಯ ಮಗನಾಗಿ, ವಿನತೆಗೆ ಪತ್ರನೆನಿ ಸಿಕೊಂಡು, ಮಹಾಬಲಾಡ್ಯನೆನಿಸಿ, ಗರುತ್ಮಂತನೆಂದು ಖ್ಯಾತಿಹೊಂದಿದ, ಪಕ್ಷಿರಾಜನೊಬ್ಬನುಂಟು ಮಹಾವೇಗಶಾಲಿಯಾಗಿಯೂ, ಯಶಸ್ವಿಯಾಗಿ ಯೂ ಇರುವ ಆತನು ಸಮುದ್ರದಲ್ಲಿರುವ ಸರ್ಪಗಳನ್ನು ಹಿಡಿದೆತ್ತುವಾಗ ನಾನು ಆನೇಕಾವರ್ತಿ ನೋಡಿರುವೆನು ಆ ಗುರುತ್ಯಂತನ ರೆಕ್ಕೆಗಳಿಗೆ ಎಷ್ಟು ಬಲವುಂಟೋ, ಅಷ್ಟು ಬಲವೂ ನಿನ್ನ ಬಾಹುಗಳಲ್ಲಿರುವುದು ನಿನ್ನ ಪರಾಕ್ರಮ ವಾಗಲಿ, ವೇಗವಾಗಲಿ, ಅವನ ಪರಾಕ್ರಮವಗಗಳಿಗೆ ಎಷ್ಟು ಮಾತ್ರವೂ ಕಡಿಮೆಯಾದುದಲ್ಲ' ಎಲೈ ವಾನರೋತ್ತಮನೆ' ನಿನಗಿರುವ ಬಲವೂ, ನಿನಗಿ ರುವ ಬುದ್ಧಿಯೂ, ನಿನ್ನ ತೇಜಸ್ಕೂ, ನಿನ್ನ ಧೈರವೂ ಈ ಪ್ರಪಂಚದಲ್ಲಿ ಬೇ ರೆ ಯಾವ ಭೂತರಾಶಿಗಳಲ್ಲಿಯೂ ಇಲ್ಲ ಹೀಗಿದ್ದರೂ ನಿನ್ನ ಮಹಿಮೆಯ