ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೬೬]. ಕಷಿಂಧಾಕಾಂಡವು, ೧೬೫೯ ನೇ ನೀನು ತಿಳಿಯದಿರುವೆಯಲ್ಲಾ ಎಲೈ ವತ್ವ ಆಂಜನೇಯನೆ' ಅಪ್ಪರಸ್ತಿ ಯರಲ್ಲಿ ಮೇಲೆನಿಸಿಕೊಂಡ ಪಂಜಿಕಸ್ಥಲಿಯೆಂಬ ದೇವಕನ್ಯಕೆಯೊಬ್ಬಳುಂಟು. ಅವಳ ಹೆಸರು ಮೂರುಲೋಕಗಳಲ್ಲಿಯೂ ಪ್ರಖ್ಯಾತವಾಗಿರುವುದು ರೂಪ ದಲ್ಲಿ ಆಕೆಗೆಣೆಯಾದ ಬೇರೆ ಹೆಂಗಸಿಲ್ಲ ಅವಳು ತಾಪದಿಂದ ಈ ಭೂಮಿ ಯಲ್ಲಿ ಮಹಾತ್ಮನಾದ ಕುಂಜರನೆಂಬ ವಾನರನಿಗೆ ಮಗಳಾಗಿ, ವಾನರಯೋ ನಿಯಲ್ಲಿ ಹುಟ್ಟಿ, ಕಾಮರೂಪಿಣಿಯಾಗಿ, ಅಂಜನೆಯೆಂಬ ಹೆಸರಿನಿಂದ ಖ್ಯಾತ ಳಾಗಿ, ಕೇಸರಿಯೆಂಬ ವಾನರನಿಗೆ ಪತ್ರಿ ಯಾದಳ, ಅವಳು ವಾನರಿಯಾಗಿದ್ದ ರೂ, ಸಾಂಗಸುಂದರಿಯಾಗಿ ಶೋಭಿಸುತಿದ್ದಳು ಇಷ್ಟಬಂದಂತೆ ರೂಪ ವನ್ನು ಮಾರಿಸಬಲ್ಲಳು ಒಮ್ಮೆ ಆಕೆಯ ಮನುಷ್ಯಸಿರೂಪವನ್ನು ಧರಿಸಿ, ರೂಪವನಗಳಿಂದ ಕೂಡಿ, ಬಗೆಬಗೆಯ ಪುಷ್ಪಾಭರಣಗಳನ್ನು ಧರಿಸಿ, ಮೇಲಾದ ಪಟ್ಟಿ ಮಡಿಯನ್ನು ಟ್ಟು, ಮಳೆಗಾಲದ ಮೇಫುರಾಶಿಯಂತಿದ್ದನೀ ಅಪಕ್ವತದ ಶಿಖರದಲ್ಲಿ ಸಂಚರಿಸಿತಿದ್ದಳು ಆಕೆಯು ಹೀಗೆ ವಿನೋದದಿಂದ ಸಂಚರಿಸುತ್ತಿರುವಾಗ, ವಾಯುವು ಮೆಲ್ಲಗೆ ಬೀಸಿ, ಅವಳು ಉಟ್ಟಿದ್ದ ಪೀತ ವಸ್ತ್ರವನ್ನು ಸ್ವಲ್ಪವಾಗಿ ಮೇಲಕ್ಕೆ ಹಾರಿಸಿದನು ಈ ಸಂದರ್ಭದಲ್ಲಿ ವಾಯು ದೇವನು ಅವಳ ದುಂಡಾದ ತೊಡೆಗಳನ್ನೂ, ಉಬ್ಬಿದ ಸ್ತನಗಳನ್ನೂ, ಆಂದ ವಾದ ಮುಖವನ್ನೂ ಚೆನ್ನಾಗಿ ನೋಡಿಬಿಟ್ಟನು ವಿಸ್ತಾರವಾದ ನಿತಂಬದಿಂ ದಲೂ, ಸಣ್ಣ ನಡುವಿನಿಂದಲೂ ಶೋಭಿಸುತ್ತ, ಸಾಂಗಸುಂದರಿಯಾಗಿ " ಆಕೆಯ ದೇಹದ ಸೊಬಗನ್ನು ನೋಡಿದೊಡನೆ ವಾಯುವಿಗೆ ಕಾಮಾತು ರವುಂಟಾಯಿತು ಆ ಕಾಮದಿಂದ ಮರುಳಾದ ವಾಯುದೇವನು ಪುರುಷರೂ ಪದಿಂದ ತನ್ನ ಉದ್ಯವಾದ ತೋಳುಗಳನ್ನು ನೀಡಿ, ಕಾಮವಶದಿಂದ ಮೈ ಮರೆತು, ಆಕೆಯನ್ನ ಪ್ಪಿಕೊಂಡನು ಇದನ್ನು ನೋಡಿ, ನಿರ್ದೋಷವಾದ ನಡ ತೆಯುಳ್ಳ ಆಕೆಯು ಬೆಜ್ಜರಬಿದ್ದವಳಾಗಿ,ಕೂಪದಿಂದ ಆಹಾ' ಏಕಪತ್ನಿ ವ್ರತದಿಂದಿರುವ ನನ್ನ ಪಾತಿವ್ರತ್ಯವನ್ನು ಹೀಗೆ ಕೆಡಿಸುವುದಕ್ಕೆ ಪ್ರಯತ್ನಿ ಸುವವನಾವನು ” ಎಂದು ಕೂಗಿದಳು ಹೀಗೆ ಅಂಜನೆಯ ಕೂಗಿಕೊಳ್ಳು ವುದನ್ನು ನೋಡಿ, ವಾಯುದೇವನು ಆಕೆಯನ್ನು ಸಮಾಧಾನಪಡಿಸುತ್ತಾ ಪ್ರ ತ್ಯುತ್ತರವನ್ನು ಹೇಳುವನು. ಎಲೈಸುಭಗೆ' ನಾನು ಪಾತಿವ್ರತ್ಯದಿಂದ ಪ್ರ