ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬೬ ಶ್ರೀಮದ್ರಾಮಾಯಣವು (ಸರ್ಗ ೬೭ ಶ್ರೇಷ್ಠನಾದ ಆ ಆಂಜನೇಯನನ್ನು , ಅಲ್ಲಿದ್ದ ವಾನರರೆಲ್ಲರೂ ಪರಮಸಂ ತೋಷದಿಂದ ನೋಡುತ್ತ ಸ್ತಬ್ಧರಾಗಿ ನಿಂತಿದ್ದರು ಸಮಸ್ತವಾನರಬಂ ಧುಗಳಿಗೂ ದುಃಖನಿವೃತ್ತಿಯಾಗುವಂತೆ ಆಂಜನೇಯನು ಹೇಳಿದ ಇಮಾತ ನ್ನು ಕೇಳಿ, ಜಾಂಬವಂತನೂ ಪರಮಾನಂದಭರತನಾಗಿ, ಆ ವಾನರೋತ್ತಮ ನನ್ನು ನೋಡಿ, “ಎಲೈ ಮಹಾವೀರನೆ' ನೀನು ಕೇಸರಿಪುತ್ರನಲ್ಲವೆ ? ವಾಯು ದೇವನ ಕುಮಾರನಲ್ಲವೆ? ಬಾಲ್ಯದಲ್ಲಿಯೇ ಅಸಾಧ್ಯ ಸಾಹಸವನ್ನು ತೋರಿಸಿ ಹನುಮಂತನೆಂಬ ಖ್ಯಾತಿಯನ್ನು ಹೊಂದಿದವನಲ್ಲವೆ ? ನಿನ್ನ ಬಂಧುಗಳಾದ ಈ ಸಮಸ್ತವಾನರರ ಅಪಾರದುಃಖವೂ ಇಂದಿಗೆ ನೀಗಿತು ಎಲ್ಲರನ್ನೂ ನೀನೇ ಬದುಕಿಸಿದಂತಾಯಿತು ಈ ವಾನರರೆಲ್ಲರೂ ಸೇರಿ, ನಿನಗೆ ಮಂಗಳ ವನ್ನು ಕೋರುತ್ತ, ನಿನ್ನ ಕಾರೈಸಿದ್ದಿಗಾಗಿ ಬಹಳ ಅಕ್ಕರೆಯಿಂದ ಮಂಗಳಾ ಶಾಸನವನ್ನು ಮಾಡುವರು ಮಹರ್ಷಿಗಳ ಅನುಗ್ರಹಬಲದಿಂದಲೂ, ವೃ ರಾದ ಈ ವಾನರರ ಶ್ರೇಯಃಪ್ರಾರ್ಥನೆಯಿಂದಲೂ, ಗುರುಗಳ ಆಶೀ ರ್ವಾ ದಮಹಿಮೆಯಿಂದಲೂ ನೀನು ಈ ಮಹಾಸಮುದ್ರವನ್ನು ಸುಖವಾ ಗಿ ದಾಟಿ ಬಾ 1 ಎಲೈ ಆಂಜನೇಯನೆ ! ನೀನು ಇಲ್ಲಿಗೆ ಸುಖವಾಗಿ ಬಂದು ಸೇರುವವರೆಗೂ ನಾವೆಲ್ಲರೂ ಒಂದೇ ಕಾಲಿನಿಂದ ನಿಂತು ನಿರೀಕ್ಷಿಸುತ್ತಿರು ವೆವು ಈಗ ಈ ಸಮಸ್ತವಾನರರ ಜೀವವೂ ನಿನ್ನ ಕೈಯಲ್ಲಿ ಅಡಗಿರುವು ದು” ಎಂದನು, ಆಮೇಲೆ ವಾನರಸಿಹ್ಮನಾದ ಹನುಮಂತನು ಅಲ್ಲಿದ್ದ ಕಪಿಗ ಬೆಲ್ಲರನ್ನೂ ನೋಡಿ, ಎಲೈ ವಾನರರೆ ' ನಾನು ಇಲ್ಲಿಂದ ಹಾರುವಾಗ ನನ್ನ ವೇಗವನ್ನು ಈ ಭೂಮಿಯೇ ತಡೆಯಲಾರದೆಕುಗ್ಗುವುದು ಈ ಮಹೇಂದ್ರಪ ರೈತವಾದರೆ ಎತ್ತರವಾದ ಬಂಡೆಗಳಿಂದ ನಿಬಿಡವಾಗಿರುವುದು ಇತರ ಶಿಖರ ಗಳೂ ದೊಡ್ಡದಾಗಿ ಸ್ಥಿರವಾಗಿರುವುವು ಆದುದರಿಂದ ಈ ಮಹೇಂದ್ರ ಪಕ್ವತದ ಶಿಖರಗಳು ನನ್ನ ವೇಗವನ್ನು ತಡೆಯಬಲ್ಲುವೆಂದು ತೋರುವುದು ಅನೇಕವೃಕ್ಷಗಳಿಂದ ತುಂಬಿ, ಗೈರಿಕಾದಿಧಾತುಗಳ ರಸದಿಂದ ಶೋಭಿತಗಳಾ ದ ಈ ಶಿಖರಗಳಲ್ಲಿಯೇ ನನ್ನ ವೇಗವನ್ನು ಬಿಡುವೆನು ಇಲ್ಲಿಂದ ನೂರು ಯೋಜನಗಳನ್ನು ಹಾರುವಾಗ, ನನ್ನ ಕಾಲಿನ ತುಳಿತಕ್ಕೆ ಈ ಪರತಶಿಖರಗ ಳುಮಾತ್ರವೇ ತಡೆಯಬಲ್ಲವು ” ಎಂದನು ವಾಯುವಿನಂತೆ ಮಹಾವೇಗ