ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ , 4] ಕಿಂಧಾಕಾಂಡವು. ೧೩೫೩ ನ್ನಾಗಿ ಮಾಡಿಕೊಂಡು, ಅವರು ಇಲ್ಲಿಗೆ ಬಂದ ಕಾರಣವೇನೆಂಬುದನ್ನೂ ಜೆ ಸ್ನಾಗಿ ಕೇಳಿತಿಳಿ' ಅವರ ಮಾತಿನಿಂದಲೇ, ಅವರು ದುಷ್ಟರೋ ಸಾಧುಗ ಲೋ ಎಂಬುದನ್ನು ತಿಳಿದುಕೊಳ್ಳಬಹುದು” ಎಂದನು ವಾಯುಪುತ್ರನಾದ ಹನುಮಂತನು ಸುಗ್ರೀವನು ಹೇಳಿದ ಈ ಮಾತನ್ನು ಕೇಳಿ, ಅದನ್ನು ಸಾಧು ವೆಂದುಗ್ರಹಿಸಿ,ಆ ರಾಮಲಕ್ಷ್ಮಣರಕಡೆಗೆ ಹೊರಡುವುದಾಗಿ ನಿಶ್ಚಯಿಸಿಕೊಂ ಡನು ಹೀಗೆ ಶುಭಯಂಕರನಾದ ಆಸುಗ್ರಿವನ ಮಾತನ್ನು ಮಹಾತ್ಮ ನಾದ ಆಂಜನೇಯನು ಮನಃಪೂರಕವಾಗಿ ಅನುಮೋದಿಸಿ ('ಸ್ವಾಮಿ' ನಿ ಮ್ಮ ಪ್ಪಣೆಯಂತೆಯೂ ಹೋಗಿಬರುವೆನು” ಎಂದುಹೇಳಿ, ಆಗಲೇ ರಾಮ ಲಕ್ಷ್ಮಣರಿರುವ ಸ್ಥಳಕ್ಕೆ ಹೊರಟನು ಇಲ್ಲಿಗೆ ಎರಡನೆಯಸರ್ಗವು

  • ಹನುಮಂತನು ರಾಮಲಕ್ಷ ರಬಳಿಗೆ ಬಂದು, ಅವ). * ರನ್ನು ಮಾತಾಡಿಸಿ ಪ್ರಶಂಸಮಾಡಿದುದು | ಹೀಗೆ ಹನುಮಂತನು ಮಹಾತ್ಮನಾದ ಸುಗ್ರೀವನ ಮನೋಭಿಪ್ರಾ ಯವನ್ನು ತಿಳಿದು, ಆ ಕ್ಷಣವೇ ನಶ್ಯಮಕದಿಂದ ಹಾರಿ, ನಿಮಿಷಮಾತ್ರ ದೊಳಗಾಗಿ ಈ ರಾಮಲಕ್ಷ್ಮಣರಿದ್ದ ಕಡೆಗೆ ಬಂದಿಳಿದನು ವಾಯುಪುತ್ರ ನಾದ ಆ ಹನುಮಂತನಿಗೆ, ಮೊದಲು ರಾಮಲಕ್ಷ್ಮಣರನ್ನು ವಂಚಿಸಿ ಅವರ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕೆಂಬ ಬುದ್ದಿಯು ಹುಟ್ಟಿದ್ದುದರಿಂದ,ಆವ ರಿಗೆ ಕಾಣಿಸಿಕೊಳ್ಳುವಷ್ಟರೊಳಗಾಗಿ, ಚಾ ತುರದಿಂದ ತನ್ನ ನಿಜರೂಪ ವನ್ನು ಮರೆಸಿಕೊಂಡು, ಸನ್ಯಾಸಿರೂಪವನ್ನು ಹೊಂದಿಬಿಟ್ಟನು ಹೀಗೆ ಭಿಕ್ಷು
  • ಪ್ರಥಮಸರ್ಗದಲ್ಲಿ ವೈಕುಂರತಾ ಸಿಯಾದ ಭಗವಂತನು, ತನ್ನ ಪ್ರಜೆಗಳಲ್ಲಿ ಕೆಲವರು ತಮ್ಮ ಪರತ್ವದಲ್ಲಿ ವರ್ತಿಸುತ್ತಿರುವಾಗ, ಮತ್ತೆ ಕೆಲವರು ವಿಷಯಾಂತರ ವಣರಾಗಿರುವದನ್ನು ನೋಡಿ, ಮನಸ್ಸಿನಲ್ಲಿ ಮರುಕ ಹೊಂದಿ, ದಯಾವೃತ್ತಿಯನ್ನು ತೋರಿಸುವನೆಂದು ಸೂಚಿತವು ದ್ವಿತೀಯಸರ್ಗದಲ್ಲಿ ಚೇತನವು, ಭಗವದಪರಾಧದಿಂ

ದುಂಟಾಗುವ ದಂಡಕ್ಕೆ ಹೆದರಿ ಅಭಿಮುಖನಾಗುವನೆಂದು ಪ್ರತಿಪಾದಿತವು, ಈ ಮರ ನೆಯ ಸರ್ಗದಿಂದ ಆ ಚೇತವನಿಗೆ ಭಗವತ್ಪಾಪಿಯನ್ನುಂಟುಮಾಡುವುದಕ್ಕಾಗಿ ಆಚಾ ರ್ಯನು ಮಾಡುವ ಕಾರ್ಯವು ಪ್ರತಿಪಾದಿಸಲ್ಪಡುವುದು ಗ್ರಾಹ್ಯವು.