ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩.] ಕಿಷಿಂಧಾಕಾಂಡವು ೧೩೫ ನು ಮೊದಲು ಆ ವೀರರಿಬ್ಬರನ್ನೂ ಯಥಾವತ್ತಾಗಿ ಪ್ರಶಂಸೆಮಾಡಿದನು. ವಿಧ್ಯುಕ್ತವಾಗಿ ಅವರಿಬ್ಬರನ್ನೂ ಮನ್ನಿಸಿದನು. ಸತ್ಯಪರಾಕ್ರಮಿಗಳಾದ ಅವ ರಿಬ್ಬರಲ್ಲಿಯೂ ಭಕ್ತಿಯನ್ನು ತೋರಿಸುತ್ತ ಮೃದುವಾಕ್ಯಗಳಿಂದ ಅವರನ್ನು ಕುರಿತು, (ಎಲೈ ಮಹಾತ್ಮರೆ' ನಿಮ್ಮನ್ನು ನೋಡಿದರೆ ರಾಜರ್ಷಿಗಳಂತೆ ಕಾ ಣುವಿರಿ' ಆದರೆ ದೇಹಸೌಂದ್ರದಿಂದ ದೇವಕುಮಾರರನ್ನು ಹೋಲುತ್ತಿರು ವಿರಿ' ಹೀಗಿದ್ದರೂ ಕರಿನವ್ರತವನ್ನು ಹಿಡಿದು ಹೀಗೆ ತಪಸ್ವಿಗಳಾಗಿ ಇಲ್ಲಿಗೇಕೆ ಬಂದಿರುವಿರಿ' ಸುರ್ವವಾಯೆಯುಳ ಸಿಮಗೆ ಈ ವನಸಂಚಾರವೇಕೆ? ಈ ಕಾಡಿನಲ್ಲಿರುವ "ಕೆಗಳನ್ನೂ ಇತರಪ್ರಾಣಿಗಳನ್ನೂ ನಿಮ್ಮ ರೂಪದಿಂದಲೇ ಅಂಜಿಸುತ್ತಿರುವಿರಿ' ನಿಮಗೆ ಈ ಪಂಪಾತೀರದಲ್ಲಿರುವ ವೃಕ್ಷಗಳನ್ನು ನೋ ಡುವ ಆಸೆಯಕ ಹುಟ್ಟಿತು? ಸೀವು ತಪಸ್ವಿಗಳಂತಿದ್ದರೂ ನಿಮ್ಮ ದಿವ್ಯ ಕಾಂತಿಯಿಂದ ಈ ಪಂಪಾಸರಸ್ಸಿಗೆ ಒಂದುವಿಧವಾದ ಅಪೂಶೋಭಯುಂ ಟಾಗಿರುವುದಲ್ಲಾ' ಆಹಾ' ನಿಮ್ಮ ಧೈರವು ಅನನ್ಯಾದೃಶವಾದುದು' ಸುವ ರ್ಣದಂತೆ ಥಳಥಳಸುತ್ತಿರುವ ಈ ನಿಮ್ಮ ದೇಹದ ಮೇಲೆ ತಾಪಸಯೋಗ್ಯವಾ ದ ಈ ನಾರುಮಡಿಗಳನು? ನೀವುಯಾರು? ಸೀವು ಮಾರ್ಗಾಯಾಸದಿಂದ ನಿಟ್ಟುಸಿರುಬಿಡುವಂತಿದೆ' ಮಾಂಸಪಸಗಳಾದ ಈ ನಿಮ್ಮ ತೋಳುಗಳ ನ್ನು ನೋಡಿ ಇಲ್ಲಿನ ಪ್ರಾಣಿಗಳಲ್ಲವೂ ಭಯದಿಂದ ತತ್ತಳಿಸುತ್ತಿರುವುವು ಗಂ ಭೀರವಾದ ನೋಟದಿಂದಲೂ, ಅಸಾಧಾರಣವಾದ ಬಲಪರಾಕ್ರಮಗಳಿಂದ ಲೂ ನೀವು ಸಿಂಹಗಳನ್ನೆ ಹೊತ್ತಿರುತ' ಶತ್ರುಸಿಗಾಹಕರಾದ ನೀವಿ ಬ್ಬರೂ ಇಂಬ್ರಾಯುಧಗಳಿಗೆ ಸಮಾನವಾದ ಬಿಲ್ಲುಗಳನ್ನು ಧರಿಸಿರುವಿರಿ' ನಿ ಮ್ಮ ದೇಹಕಾಂತಿಯೂ, ನಿಮ್ಮ ರೂಪಾತಿಶಯವೂ ಮಹಾವೃಷಭವನ್ನು ಹೋಲುತ್ತಿರುವ ನಿಮ್ಮ ಪರಾಕ್ರಮವೂ ಲೋಕಾತಿಶಾಯಿಗಳಾಗಿರುವುವು ಆ ನೆಯ ಸುಂಡಿಲಿನಂತಿರುವ ನಿಮ್ಮ ಆಜಾನುಬಾಹುಗಳೂ ನಿಮ್ಮ ದೇಹಕಾಂತಿ ಯೂ, ನೀವು ಪುರುಷಶ್ರೇಷ್ಠ ರಂಬುದನ್ನು ಚೆನ್ನಾಗಿ ವ್ಯಕ್ತಗೊಳಿಸುತ್ತಿರು ವುವು ನಿಮ್ಮ ದಿವ್ಯಕಾಂತಿಯಿಂದ ನಮ್ಮ ಪರತಕ್ಕೆ ಒಂದು ಅಪೂರ ಶೋಭೆಯುಂಟಾಗಿರುವುದು ರಾಜ್ಯಾರ್ಹರಾಗಿ ದೇವಸಮಾನರಾಗಿರುವನೀವಿ ಬ್ಬರೂ ಈ ವನಪ್ರದೇಶದಲ್ಲಿ ಸುತ್ತುತ್ತಿರುವುದಕ್ಕೆ ಕಾರಣವೇನು ? ಕಮಲ ದಳದಂತೆ ಕಣ್ಣುಳ್ಳವರಾಗಿ ಮಹಾವೀರರಂತೆ ತೋರುತ್ತಿರುವ ನಿಮಗೆ ತಲೆ