ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೭] ಕಿಷಿಂಧಾಕಾಂಡವು ೧೩೬೧ ವಾಗಲಿ ಅತಿಮಂದವಾಗಲಿ ಅಲ್ಲದೆ # ವಾಕ್ಯಗುಣಗಳಿಂದ ಕೂಡಿ, ಕೇಳು ವವರ ಮನಸ್ಸನ್ನಾ ಕಾರ್ಷಿಸುವಂತೆ ಅತಿಮಧುರವಾಗಿ ಮಾತುಗಳನ್ನು ರಿಸುತ್ತಿರುವನು + ವರ್ಣವ್ಯಂಜಕಗಳಾದ ಎದೆ, ಕಂರ, ಶಿರಸ್ಸುಗಳಂಬಿ ಈ ಸ್ಥಾನತ್ರಯಗಳಲ್ಲಿಯೂ ನೆಲೆಗೊಂಡಿರುವ ಉದಾತ್ತಾನುದಾತ್ತಸ್ವರಿ ತಗಳೆಂಬ ಮೂರುಸ್ವರಗಳಿಂದ ಕೂಡಿ, ಆಶ್ಚರವನ್ನುಂಟುಮಾಡುತ್ತಿರುವ ಈತನ ಮಾತುಗಳನ್ನು ಕೇಳಿದರೆ, ಕೊಲ್ಲಬೇಕೆಂದು ಕತ್ತಿಯನ್ನು ಹಿಡಿದು ಬರುತ್ತಿರುವ ಶತ್ರುವಿಗಾದರೂ ಮನಸ್ಸು ಕರಗದಿರುವುದೆ ? ಎಲೆ ವ ತೃನೆ ! ನಮ್ಮನ್ನು ಹೊಗಳುವ ನೆವದಿಂದಲೇ ನಮ್ಮ ಕುಲಗೋತ್ರಾದಿ ಗಳೆಲ್ಲವನ್ನೂ ಕೇಳಿದ ಇಂತಹ ಸಮರ್ಥನಾದ ಪುರುಷನು, ಯಾವ ರಾಜನ ದೂತನಾಗಿರುವನೋ, ಅಂತಹ ರಾಜನಿಗೆ ಕಾರಸಿದ್ದಿಯಾಗುವುದೇನಾಶ್ಚರ ವು?ಇಂತಹ ಗುಣಗಳಿಂದ ಕೂಡಿ ಕಾರಗಳನ್ನು ಸಾಧಿಸತಕ್ಕ ದೂತನು ಯಾ ವರಾಜರಿಗೆ ದೊರಕುವನೋ, ಆ ರಾಜರು ಸ್ವಲ್ಪವೂ ಶ್ರಮವಿಲ್ಲದೆ ಇಂ ತಹ ದೂತರ ವಾಕ್ಷಾತುರದಿಂದಲೇ ಸಿದ್ಧಿಯನ್ನು ಹೊಂದುವರು”ಎಂದನು ಇದನ್ನು ಕೇಳಿ ವಾಕ್ಯಕುಶಲನಾದ ಲಕ್ಷಣನು, ಹನುಮಂತನನ್ನು ನೋಡಿ (ಎಲೈ ವಿದ್ವಾಂಸನೆ' ಮಹಾತ್ಮನಾದ ಸುಗ್ರೀವನ ಗುಣಗಳನ್ನು ನಾವೂ ಕೇ ಳಿಬಲ್ಲೆವು ಈಗ ನಾವೂ ಆತನನ್ನೆ ಹುಡುಕುತ್ತಿರುವೆವು ಎಲ್ಲಿ ಹನುಮಂತ ನೆ'tಸುಗ್ರೀವನಮಾತಿನಂತೆ ಈಗ ನೀನು ನಮಗೆ ಏನನ್ನು ಹೇಳುವೆಯೋ, ಅದ

  • ಹಿಂದಿನ ವಾಕ್ಯದಲ್ಲಿ ಪಾರದೊಷಗಳು ಹೇಳಲ್ಪಟ್ಟುವು ಈ ವಾಕ್ಯದಿಂದ ಪಾರಗುಣಗಳು ತಿಳಿಸಲ್ಪಡುವವು 'ಮಾಧುರ್ಯಮಕ್ಷರವ್ಯಕ್ತಿ ಪದಚ್ಛೇದಸ್ತಥಾS ತೃರಾ ಧೈರ್ಯ೦ ಲಯಸಮತ್ವಂಚ ಷಡೇತೇ ಪಾರಕಾ ಗುಣಾ ”ಎಬುದಾಗಿ ಶಿಕ್ಷಾಶಾ ಸ್ಕೂಕ್ತಗಳಾದ ಪಾರಗುಣಗಳೆಲ್ಲವೂ ಅವನ ಮಾತಿನಲ್ಲಿ ಕಾಣುತಿದ್ದುವೆಂದುಭಾವವು,
  • ಇಲ್ಲಿ 'ಕ್ರಿಸ್ತಾನವ್ಯಂಜನಕ್ಖಯಾ” ಎಂದು ಮೂಲವು ತ್ರಿಸ್ಥಾನಗಳೆಂದರೆ , ಹೃದಯ, ಕ೦ರ, ಶಿರಸ್ಸುಗಳು, ತ್ರಿಸ್ಥಾನವ್ಯಂಜನಗಳೆಂದರೆ ಇವುಗಳಿಂದ ತೋರಿಬರು ವ ಉದಾತ್ತಾನುದಾತ್ತಸ್ವರಿತಗಳೆಂಬ ಮೂರು ಸ್ವರಗಳು ಈ ವಿಷಯವೂ ಶಿಕ್ಷಾಶಾ ಸದಲ್ಲಿ ಅನುದಾತ್ರೇ ಹೃದಿಜ್ಞೆಯೋ ಮರ್ಧು ದಾತ್ತ ಉದಾಹೃತ 1 ಸ್ವರಿತ ಕಂಠಮೂಲೀಯಃ ಪಾರ್ಶ್ಯಾಕ್ಕೇ ಪ್ರಚಯಸ್ಯ ತು” ಎಂದು ನಿರೂಪಿಸಲ್ಪಟ್ಟಿದೆ

£ ಇದರಿಂದ ಯಾರು ಆಚಾಲ್ಯಾಭಿಮಾನನಿಷ್ಠರೋ, ಅವರ ಉದ್ದೇಶಗಳ ನ್ನು ಅವರ ಮಾತಿನಿಂದಲೇ ನಡೆಸಿಕೊಡುವೆನೆಂಬ ಭಗವಂತನ ಸಂಕಲ್ಪವು ಸೂಚಿತವ. 86