ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪ ]. ಕಿಷಿಂಧಾಕಾಂಡವು, ೧೩೬೫ ಪೋಷಿಸುತ್ತ, ಎಣೆಯಿಲ್ಲದ ಕೀರ್ತಿಯನ್ನು ಪಡೆದು, ತಾನೇ ಲೋ ಕನಾಥನೆನಿಸಿಕೊಂಡಿದ್ದನೋ, ಆ ರಾಮನು, ಈಗ ಸುಗ್ರೀವನನ್ನು ತನಗೆ ನಾಥನನ್ನಾಗಿ ಬಯಸಿ ಬಂದಿರುವನು ಸರ್ವಲೋಕಶರಣ್ಯನಾಗಿ, ಧ ರ್ಮವತ್ಸಲನೆನಿಸಿಕೊಂಡಿದ್ದ ದಶರಥನ ಹೊಟ್ಟೆಯಲ್ಲಿ ಹುಟ್ಟಿ, ತಾನೂ ಇತರರಿಗೆ ರಕ್ಷಕನೆನಿಸಿಕೊಂಡ ಈ ರಾಮನು ಈಗ ಸುಗ್ರಿವನಲ್ಲಿ ಶರಣಾ ಗತಿಯನ್ನು ಮಾಡಿರುವನು ಮೊದಲು ಸಮಸ್ತಲೋಕಗಳಿಗೂ ಪ್ರಾಪ್ಯನಾ ಗಿಯೂ, ಸರ್ವಶರಣ್ಯನಾಗಿಯೂಇದ್ದ ಧರ್ಮಾತ್ಮನಾದ ಈ ನನ್ನನು, ಈಗ ಸುಗ್ರೀವನಲ್ಲಿ ಮರೆಹುಗುತ್ತಿರುವನು ಯಾವನ ಅನುಗ್ರಹವನ್ನು ಸಂ ಪಾರಿಸಿದಮಾತ್ರಕ್ಕೆ ಈ ಲೋಕದ ಸಮಸ್ತ ಪ್ರಜೆಗಳೂ ಸಮಸ್ತ ಪುರಷಾ ರ್ಥಗಳನ್ನೂ ಪಡೆದಂತೆ ಸಂತೋಷಿಸುತ್ತಿರುವುವೋ, ಆ ಮಹಾತ್ಮನು ಈಗ ಸುಗ್ರೀವನ ಅನುಗ್ರಹಕ್ಕಾಗಿ ನಿರೀಕ್ಷಿಸುತ್ತಿರುವನು ' ಯಾವನಿಂದಲೇ ಈ ಭೂಮಿಯಲ್ಲಿ ಗುಣಾಢರಾದ ಬೇರೆ ಸಮಸ್ತರಾಜರೂ ಯಾವಾಗಲೂ ನಾನಾವಿಧವಾಗಿ ಪೋಷಿಸಲ್ಪಡುತ್ತಿದ್ದರೋ, ಆ ದಶರಥರಾಜನಿಗೆ ಜೈಷ್ಣ ಪುತ್ರನಾಗಿ,ಮೂರುಲೋಗಕಳಲ್ಲಿಯೂ ಖ್ಯಾತಿಯನ್ನು ಪಡೆದ ಈರಾಮನು, ಈಗ ಕಾಡುಕಪಿಗಳಿಗೊಡೆಯನಾದ ಸುಗ್ರೀವನಲ್ಲಿ ಮರಹುಗುತ್ತಿರುವನು * * ಇಲ್ಲಿ “ಲೋಕನಾಥ ಪೂರಾ ಭೂತ್ವಾ ಸುಗ್ರೀವಂ ನಾಥಮಿಚ್ಛತಿ” ಎಂದು ಮೂಲವು ಇದರಿಂದ ರಾಮನ ಪರತ್ವಸೌಲಭ್ಯಗಳೆರಡೂ ಸೂಚಿತವಾಗುವುವ ಪರತ ವಿಲ್ಲದ ಸೌಲಭ್ಯವು ಗುಣವೆನಿಸುವುದಿಲ್ಲವಾದುದರಿಂದ ಅವೆರಡಕ್ಕೂ ಇಲ್ಲಿ ಸಾಹಚರವು ಹೇಳಲ್ಪಟ್ಟಿರುವುದಾಗಿ ಗ್ರಾಹ್ಯವು ಇಲ್ಲಿ ಲೋಕನಾಥ” ಎಂಬುದರಿಂದ ಮೂರು ಲೋಕಗಳಿಗೂ ನಾಥನಾದುದರಿಂದಲೇ, ಈತನು ಸುಗ್ರೀವನೇ ಮೊದಲಾದ ನಿಮ್ಮೆಲ್ಲರಿ ಗೂ ತಾನೇ ನಾಥನೆಂಬುದು ಸ್ವತಸ್ಸಿದ್ದವಾದರೂ, ತನ್ನ ಪರತ್ವಕ್ಕೆ ತಕ್ಕಂತೆ ಸೌಲಭ್ಯ ವನ್ನು ತೋರಿಸುವುದಕ್ಕಾಗಿಯೇ 'ಸುಗ್ರೀದಂ ನಾಥಮಿಚ್ಛತಿ” ಸುಗ್ರೀವನನ್ನು ತನಗೆ ನಾಥನನ್ನಾಗಿ ಅಪೇಕ್ಷಿಸುವನು ಎಂದು ಭಾವವು, ಹಾಗೆ ಪರತ್ವದಲ್ಲಿರುವವನು ಹೀನ ಜನವನ್ನು ಪ್ರಾಸಬೇಕಾದುದೇಕೆ? ಎಂದರೆ ಇಚ್ಛತಿ' ಇವನ ಇಚ್ಛೆಯು ಸ್ವತಂ ತ್ರವಾದುದರಿಂದ, ಅಷ್ಟಾಗಿ ಅವಶ್ಯಕತೆಯಿಲ್ಲದಿದ್ದರೂ, ತನ್ನ ದ್ವೇಚ್ಛೆಯಿಂದ ತಾನಾ ಗಿಯೇ ಪ್ರಾದ್ಧಿಸುವನೆಂದು ಭಾವವು ಸ್ವತಂತ್ರೋಚ್ಛೆಯಿಂದ ಇತರರಲ್ಲಿ ಸೌಲಭ್ಯವ ನ್ನು ತೋರಿಸಿ ಪ್ರಾದ್ಧಿಸುವುದೂ ಒಂದು ಗುಣವೆಂದೇ ಮುಖ್ಯಾಶಯವ |