ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೭೦ ಶ್ರೀಮದ್ರಾಮಾಯಣವು [ಸರ್ಗ ೫. ಆಗ ಸುಗ್ರೀವನು ಸಂತೋಷದಿಂದ ರಾಮನನು ನೋಡಿ, 'ಎಲೈ ರಾಮನೆ'ನಿ ನಗಿಂತಲೂ ನನಗೆ ಬೇರೆ ಪ್ರಿಯಮಿತ್ರನಿಲ್ಲವು ಈಗ ನಿನ್ನ ದುಃಖವೂ ನನ್ನ ದುಃ ಖವೂ ಒಂದಾಯಿತು ಹಾಗೆಯೇ ನಿನ್ನ ಸುಖವೂ ನನ್ನ ಸುಖವೂ ಒಂದೇ ಆ ಗಿರುವುದು” ಎಂದನು ಆಮೇಲೆ ಸುಗ್ರೀವನು ವಿಶೇಷಪತ್ರಗಳುಳ್ಳುದಾ ಗಿಯೂ, ಚೆನ್ನಾಗಿ ಪುಟ್ಟಸಿಯೂ ಇರುವ ಒಂದು ಸಾಲವೃಕ್ಷದ ಶಾಖೆಯ ನ್ನು ಮುರಿದು ತಂದು, ಅದನ್ನು ನೆಲದಮೇಲೆ ಹಾಸಿ ರಾಮನೊಡನೆ ತಾನೂ ಕುಳಿತುಕೊಂಡನು. ಆಮೇಲೆ ಹನುಮಂತನು ಲಕ್ಷಣನಿಗಾಗಿ ಪುಷ್ಟಿತ ವಾದ ಒಂದು ಚಂದನವೃಕ್ಷದ ಶಾಖೆಯನ್ನು ಮುರಿದುತಂದು ಹಾಸಿದನು ಆಗ ಸುಗ್ರೀವನು ಉಕ್ಕಿಬರುವ ಸಂತೋಷದಿಂದ ಕಣ್ಣುಗಳಲ್ಲಿ ಆನಂ ಬಾಷ್ಪವನ್ನು ಸುರಿಸುತ್ತ, ರಾಮನನ್ನು ನೋಡಿ ಮೃದುಮಧುರವಾಕ್ಯದಿಂ ದ (ರಾಮಾ'ನನ್ನಣ್ಣನು ನನ್ನನ್ನು ವಂಚಿಸಿ, ನನ್ನ ಪತ್ನಿ ಯನ್ನೂ ಅಪಹರಿಸಿರು ವನ, ಅವನ ಭಯಕ್ಕಾಗಿಯೇ ನಾನು ಈ ದುರ್ಗಮವಾದ ವನವನ್ನಾಶ್ರ ಯಿಸಿರುವನು ಈಗ ನನ್ನಿ ನೈ ಓಕ್ಕಾಗಿ ನಂಬಿರುವೆನು ಆ ವಾಲಿಯು ನನ್ನನ್ನು ವಂಚಿಸಿದುದಲ್ಲದೆ,ನನ್ನಲ್ಲಿ ಮಹಾವೃರವನ್ನಿಟ್ಟಿರುವುದರಿಂದ, ನಾನು ಅವನ ಭ ಯದಿಂದ ಡಿಗ್ಯಮವನ್ನು ಹೊಂದಿ ಏನೂತೋರದ ಈ ಕಾಡಿನಲ್ಲಿ ಅವಿತು ಕೊಂಡಿರುವೆನು ಎಲೈ ಮಹಾತ್ಮನೆ'ಆ ವಾಲಿಯ ಭಯದಿಂದ ಪೀಡಿತನಾದ ನನಗೆ ಅಭಯವನ್ನು ಕೊಟ್ಟು ಕಾಪಾಡಬೇಕು” ಎಂದನು ಇದನ್ನು ಕೇಳಿ ಧ ರವತ್ಸಲನಾದ ರಾಮನು ಸುಗ್ರೀವನನ್ನು ನೋಡಿ ಇದೆಷ್ಟುಮಾತ್ರದ ಕೆ ಲಸವು” ಎಂದುಹೇಳಿ, ಮಗುಳ್ಳ ಗೆಯನ್ನು ತೋರಿಸುತ್ತಎಲೈ ಕಪಿರಾಜನೆ! ಸ್ನೇಹವನ್ನು ಬಳೆಸಿದುದಕ್ಕೆ ಉಪಕಾರಮಾಡುವುದೇ ಫಲವೆಂಬುದನ್ನು ನಾ ನು ಬಲ್ಲೆನು ನಿನ್ನ ಹೆಂಡತಿಯನ್ನು ಕದ್ದ ಆ ವಾಲಿಯನ್ನು ತಪ್ಪದೆ ಕೊಲ್ಲುವೆ ನು ನನ್ನ ತೀಕ್ಷಬಾಣಗಳು ಎಲ್ಲಿಯೂ ವಿಫಲವಾಗತಕ್ಕುವಲ್ಲ ಸೂರನಿಗೆ ಸಮಾನವಾದುವು ಗರಿಗಳಿಂದ ಕೂಡಿ ಮಹಾವೇಗವುಳ್ಳವುಗಳಾಗಿ, ಇಂದ್ರ ನ ವಜ್ರಾಯುಧದಂತೆ ಆತಿತೀಕ್ಷಗಳಾಗಿ,ಬಲವಾದ ಗಿಣ್ಣುಗಳುಳ್ಳ ಈ ನನ್ನ ಬಾಣಗಳನ್ನು ಕೋಪಗೊಂಡ ವಿಷಸರ್ಪಗಳೆಂದೇ ತಿಳಿ ಸರ್ವಸಮಾನ ಗಳಾದ ಈ ಬಾಣಗಳು ದುರೂತ್ತನಾದ ಆ ವಾಲಿಯಮೇಲೆ ಬಿದ್ದು,ಇದೊ'