ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩೩ ಸರ್ಗ ೬. | ಕಿಂಧಾಕಾಂಡವು ನಿಗೆ ಪ್ರಿಯವನ್ನುಂಟುಮಾಡಬೇಕೆಂಬ ಆತುರದಿಂದ, ಅಲ್ಲಿ ತಾನುಬಚ್ಚಿಟ್ಟಿದ್ದ ಉತ್ತರೀಯವನ್ನೂ , ಉತ್ತಮವಾದ ಆಭರಣಗಳನ್ನೂ ತಂದು (ರಾಮಾ' ಇ ದೊ'ನೋಡು”ಎಂದು ತೋರಿಸಿದನು ಆಗ ರಾಮನು ಆ ಉತ್ತರೀಯವನ್ನೂ ಆಭರಣಗಳನ್ನೂ ಕೈಗೆತ್ತಿಕೊಂಡೊಡನೆ ಮಂಜುಮುಚ್ಚಿದ ಚಂದ್ರನಂತೆ ಅವನಕಣ್ಣಿನಲ್ಲಿ ನೀರುತುಂಬಿತು ಸೀತೆಯಲ್ಲಿ ತನಗಿರುವ ಅಪಾರವಾದ ಸ್ನೇಹ ದಿಂದ ದುಃಖವನ್ನು ತಡೆಯಲಾರದೆ ಧೈರ್ಯಗುಂಟ ಕಣ್ಣೀರುಬಿಡುತ್ತ,«ಹಾ! ಪ್ರಿಯೇ!” ಎಂದು ಉಚ್ಚ ಸ್ವರದಿಂದ ಪ್ರಲಾಪಿಸಿ, ಹಾಗೆಯೇ ಮೂರ್ಛಿತ ನಾಗಿ ನೆಲದಮೇಲೆ ಬಿದ್ದನು ಮತ್ತು ಆ ಆಭರಣಗಳನ್ನು ಬಾರಿಬಾರಿಗೂ ಎ ದೆಗೊತ್ತಿಕೊಂಡು, ಹುತ್ತದಲ್ಲಿ ಅಡಗಿ ಕೋಪದಿಂದ ಬುಸುಗುಟ್ಟುತ್ತಿರುವ ಹಾವಿನಂತೆ ಉದ್ದವಾಗಿ ನಿಟ್ಟುಸಿರನ್ನು ಬಿಡುತಿದ್ದನು ಅವನ ಕಣ್ಣುಗಳಲ್ಲಿಎಡೆ ಬಿಡದೆ ನೀರು ತುಳುಕುತಿತ್ತು ಆಗ ಪಕ್ಕದಲ್ಲಿದ್ದ ಲಕ್ಷಣನನ್ನು ನೋಡಿ ದೈ ನ್ಯದಿಂದ ಪ್ರಲಾಪಿಸತೊಡಗಿದನು « ವತ್ಸಲಕ್ಷಣಾ' ನನ್ನ ಪ್ರಿಯೆಯಾದ ಸೀತೆಯು ರಾಕ್ಷಸನಿಂದ ಕುಯ್ಯಲ್ಪಡುವಾಗ,ಕೆಳಕ್ಕೆ ಬಿಸುಟ ಉತ್ತರೀಯ ವನ್ನೂ , ಉತ್ತಮಾಭರಣಗಳನ್ನೂ ನೋಡಿದೆಯಾ? ಆ ಸೀತೆಯು ಕದ್ದು ಯ್ಯ ಲ್ಪಡುವಾಗ ತನ್ನ ಆಭರಣವನ್ನು ಇದೋ ಇಲ್ಲಿನ ಶಾದ್ವಲಪ್ರದೇಶದಲ್ಲಿಯೇ ಬಿಸುಟಿರುವಳೆಂಬುದರಲ್ಲಿ ಸಂದೇಹವಿಲ್ಲ ಇದು ಅವಳ ಆಭರಣಗಳೆಂಬುದ ಕೈ ತಕ್ಕಗುರುತುಗಳೆಲ್ಲವೂ ಹಾಗೆಯೇ ಕಾಣುತ್ತಿರುವುವು ನೋಡು” ಎಂದ ನು ಇದನ್ನು ಕೇಳಿ ಲಕ್ಷಣನು ರಾಮನನ್ನು ಕುರಿತು, (ಅಣ್ಣಾ' ಇರಬಹು ದು' ಆದರೆ ಅವಳ ಕೈಬಳೆಗಳನ್ನಾಗಲಿ, ಕಿವಿಯೋಲೆಗಳನ್ನಾಗಲಿ ಇದುವ ರೆಗೆ ನಾನು ಕಣ್ಣಿಟ್ಟು ನೋಡಿದವನಲ್ಲ ಅವುಗಳ ಗುರುತುಗಳನ್ನೂ ನಾನು ಕಾಣೆನು ನಾನು ಆಕೆಗೆ ಪ್ರತಿದಿನವೂ ಪಾದಾಭಿವಂದನವನ್ನು ಮಾಡುತಿದ್ದ ವನಾದುದರಿಂದ,ಅವಳ ಕಾಲಂದುಗೆಗಳ ಗುರುತನ್ನು ಮಾತ್ರ ನಾನುಚೆನ್ನಾ ಗಿ ಬಲ್ಲೆನೇಹೊರತು ಬೇರೊಂದನ್ನೂ ಕಾಣೆನು” ಎಂದನು ಆಗ ರಾಮನು ದುಃಖದಿಂದ ಸುಗ್ರೀವನನ್ನು ನೋಡಿ, “ಎಲೈಮಿತ್ರನೆ' ಕೂರನಾದ ಆ ರಾ ಕ್ಷಸನು ನನಗೆ ಪ್ರಾಣಕ್ಕಿಂತಲೂ ಪ್ರಿಯತಮಳಾದ ಸೀತೆಯನ್ನು ಯಾವ ಕ ಡೆಗುಯ್ಯುತಿದ್ದನು? ಅವಳನ್ನು ನೀನು ಕಂಡುದೆಲ್ಲಿ?ಹೇಳು!ನನಗೆ ಇಂತಹ ಮ