ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೦] ಕಿಕ್ಕಿಂಧಾಕಾಂಡವು. ೧೩೮ ರಿಕೆಯಿಂದ ಅವನನ್ನು ಕುರಿತು, ಅಣ್ಣಾ' ನೀನು ಕ್ಷೇಮದಿಂದ ಬಂದುದೇ ನನ್ನ ಪರಮಭಾಗ್ಯವು, ಇದರಮೇಲೆ ಶತ್ರುವನ್ನೂ ನಿಗ್ರಹಿಸದೆ' ನೀನು ಅನಾಥರನ್ನು ರಕ್ಷಿಸುವ ಸ್ವಭಾವವುಳ್ಳವನು ಅನಾಥನಾದ ನನಗೂ ನೀ ನಲ್ಲದೆ ಬೇರೆ ನಾಧರಿಲ್ಲ ಅನೇಕ, ಶಲಾಕೆಗಳಿಂದ ಕೂಡಿಪೂರ್ಣಚಂದ್ರ ನಂತೆ ಹೊಳೆಯುತ್ತಿರುವ ರಾಜಚಿಹ್ನ ವಾದ ಈ ಶ್ವೇತಚ್ಛತ್ರವನ್ನೂ, ಈ ಚಾಮರವನ್ನೂ, ನಾನೇ ನನ್ನ ಕೈಯಿಂದ ನಿನಗೆ ಹಿಡಿಯುವೆನು ಇದನ್ನು ಪ್ರತಿಗ್ರಹಿಸಿ ನಿನ್ನ ರಾಜ್ಯವನ್ನು ಪಾಲಿಸು ನಿನ್ನಾಜ್ಞೆಯಂತೆ ನಾನು ಒಂ ದು ಸಂವತ್ಸರದವರೆಗೂ ಬಿಲದ್ವಾರದಲ್ಲಿ ಕಾದಿದ್ದೆನು ನೀನು ಹಿಂತಿರುಗಿ ಬರಲಿಲ್ಲ. ಇದರಮೇಲೆ ಆ ಬಿಲದಿಂದ ರಕ್ತಪ್ರವಾಹವೂ ಹೊರಟುಬಂದಿ ತು ಅದನ್ನು ನೋಡಿ ನನಗೆ ಶಂಕೆಯುಂಟಾಯಿತು ನನ್ನ ಮನಸ್ಸು ನಡುಗಿತು, ನನ್ನ ಇಂದ್ರಿಯಗಳು ಕಳವಳಿಸಿದುವು ಅದರಿಂದ ನಾನು ನಿ ನಗೆ ವೈರಿಗಳಾದ ರಾಕ್ಷಸರೂ ಅಲ್ಲಿಯ ಸಾಯಲೆಂದು ನಿಶ್ಚಯಿಸಿ, ದೊಡ್ಡ ದೊಡ್ಡ ಕಲ್ಲುಗಳಿಂದ ಆ ಬಿಲದ್ವಾರವನ್ನು ಮುಚ್ಚಿ , ಇತ್ತಲಾಗಿ ಕಿಷಿಂಥೆಗೆ ಬಂದುಬಿಟ್ಟೆನು ಆಗ, ಪುರಜನರೂ ಮಂತ್ರಿಗಳೂ, ರಾಜ್ಯವು ಅನಾಥವಾಗಿ ಕೆಟ್ಟು ಹೋಗುವುದೆಂಬ ವಿಷಾದದಿಂದ, ತಾವಾಗಿಯೇ ನನಗೆ ಪಟ್ಟಾಭಿಷೇ ಕವನ್ನು ಮಾಡಿಬಿಟ್ಟರು ಅದಕ್ಕಾಗಿ ನಾನು ಆಸೆಪಟ್ಟು ಕೇಳಿದವನಲ್ಲ ನಿಜ ಸ್ಥಿತಿಯನ್ನು ವಿಜ್ಞಾಪಿಸಿರುವೆನು ಒಂದುವೇಳೆ ಇದರಲ್ಲಿ ನನ್ನ ತಪ್ಪಿದ್ದ ರೂ ನೀನು ಮನ್ನಿಸಿ ಕಾಪಾಡಬೇಕು ಈ ರಾಜ್ಯಕ್ಕೆ ನೀನೇ ರಾಜನು ನನ ಗೂ ನೀನೇ ಪೂಜ್ಯನು, ನಾನು ಮೊದಲಿನಂತೆಯೇ ಯುವರಾಜನಾಗಿದ್ದು ನಿನ್ನ ಸೇವೆಯಲ್ಲಿರುವೆನು ಆದರೆ ಇದುವರೆಗೆ ನೀನೂ ಇಲ್ಲದುದರಿಂದ ನಿನಗೆ ಪ್ರತಿನಿಧಿಯಾಗಿ ನಾನು ಅನಾಥವಾಗಿದ್ದ ಈ ರಾಜ್ಯವನ್ನು ಪಾಲಿ ಸುತಿದ್ದೆನೆಂದು ಭಾವಿಸಿ, ನನ್ನನ್ನು ಮನ್ನಿಸು ನಿನ್ನ ರಾಜ್ಯವೇ ಇದುವರೆಗೆ ನನ್ನಲ್ಲಿ ನ್ಯಾಸರೂಪವಾಗಿತ್ತೆಂದೆಣಿಸು' ನಾನು ಇದುವರೆಗೂ, ಮಂತ್ರಿ ಪೌರಜಾನಪದಾದಿಗಳಿಂದ ಕೂಡಿದ ಈ ರಾಜ್ಯವನ್ನ ನಿಷ್ಕಂಟಕವಾಗಿ ಕಾಪಾಡಿಟ್ಟಿದ್ದೆನು ಈಗ ನಿನ್ನ ರಾಜ್ಯವನ್ನು ನಿನಗೆ ಹಿಂತಿರುಗಿ ಒಪ್ಪಿಸಿರು ವೆನು. ಎಲೈ ಶತ್ರುನಿಗ್ರಾಹಕನೆ' ನೀನು ಯಾವಾಗಲೂ ಸೌಮ್ಯಸ್ತ