ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ ಶ್ರೀಮದ್ರಾಮಾಯಣವು [ಸರ್ಗ ೧೦ ಭಾವವುಳ್ಳವನಲ್ಲವೆ? ನನ್ನಲ್ಲಿ ಕೋಪವನ್ನು ಬಿಡು ' ನನಗೆ ನೀನೇ ಪ್ರಭುವು ಕೈಮುಗಿದು ತಲೆಯನ್ನು ತಗ್ಗಿಸಿ ಬೇಡುವೆನು ನಮ್ಮ ರಾಜ್ಯವು ಆನಾಯಕ ವಾಗಿ ಕೆಟ್ಟುಹೋಗಬಾರದೆಂಬ ಕೋರಿಕೆಯಿಂದ, ಮಂತ್ರಿಗಳೂ ಪರವಾ ಸಿಗಳೂ ನನ್ನನ್ನು ಬಹಳವಾಗಿ ಬಲಾತ್ಕರಿಸಿ ರಾಜನನ್ನಾಗಿ ಮಾಡಿಬಿಟ್ಟರು ನಾನು ಇದನ್ನು ಕೋರಿದವನೂ ಅಲ್ಲ ಅಥವಾ ನಾನು ಇದಕ್ಕೆ ಮನಃಪೂ ರ್ವಕವಾಗಿ ಅಂಗೀಕರಿಸಿದವನೂ ಅಲ್ಲ!” ಎಂದೆನು ನಾನು ಹೀಗೆ ಎಷ್ಟೋ ಮೃದುವಾಕ್ಯಗಳಿಂದ ಸ್ನೇಹಪೂರ್ವಕವಾಗಿ ಹೇಳಿದರೂ ವಾಲಿಯು ನನ್ನ ನ್ನು ಗದರಿಸಿ, ಛಗಳಯುತ್ತ, ಬಾಯಿಗೆ ಬಂದ ಮಾತುಗಳನ್ನೆಲ್ಲಾ ಆಡತೊ ಡಗಿದನು ಆಮೇಲೆ ಅವನು ಪ್ರಜೆಗಳನ್ನೂ , ತನಗಿಷ್ಟರಾದ ಮಂತ್ರಿಗಳ ನ್ಯೂ ಕರೆಸಿ, ಸಭೆಗೂಡಿಸಿ ಅವರೆಲ್ಲರಮುಂದೆ ನನ್ನ ನ್ನು ಕುರಿತು ಅತಿಸಿಂದಿತ ವಾದ ಮಾತುಗಳನ್ನಾಡತೊಡಗಿ, (ಎಲೈ ಪ್ರಜೆಗಳಿರಾ ! ಹಿಂದೊಮ್ಮ ದುರ್ಖುದ್ಧಿಯುಳ್ಳ ಮಾಯಾವಿಯೆಂಬ ಕ್ರೂರರಾಕ್ಷಸನೊಬ್ಬನು, ಅರ್ದ ರಾತ್ರಿಯ ಸಮಯದಲ್ಲಿ ನಮ್ಮ ಬಿಲದ್ವಾರಕ್ಕೆ ಬಂದು ಗರ್ಜಿಸಿ, ನನ್ನನ್ನು ಯು ದ್ಯಕ್ಕೆ ಕರೆದ ಸಂಗತಿಯನ್ನು ನೀವೆಲ್ಲರೂ ಬಲ್ಲಿರಷ್ಟೆ? ಅದನ್ನು ಕೇಳಿದ ಕ್ಷಣ ವೇ ನಾನು ನನ್ನ ಗುಹೆಯನ್ನು ಬಿಟ್ಟು ಹೊರಟುಬಂದೆನು ಕೂರನಾದ ಈ ನನ್ನ ತಮ್ಮನೂ ನನ್ನ ಹಿಂದೆ ಬಂದನು ಆ ರಾಕ್ಷಸನು ಮಹಾಬಲಾಡ್ಯ ನಾದರೂ ಹೀಗೆ ನಾವಿಬ್ಬರೂ ಬರುತ್ತಿರುವುದನ್ನು ನೋಡಿ ಹೆದರಿ ಓಡಲಾರಂಭಿಸಿದನು ಹಾಗೆಯೇ ನಾವಿಬ್ಬರೂ ಬೆನ್ನಟ್ಟಿ ಬರುತ್ತಿ ರುವುದನ್ನು ನೋಡಿ, ಒಂದುಬಿಲದಲ್ಲಿ ಪ್ರವೇಶಿಸಿಬಿಟ್ಟನು ಬಲಾ ಢನಾದ ಆ ಘೋರರಾಕ್ಷಸನು ಬಿಲಕ್ಕ ಹೊಕ್ಕುದನ್ನು ಕಂಡು, ನಾನು ಕೋರಸ್ವಭಾವವುಳ್ಳ ಈ ನನ್ನ ತಮ್ಮನನ್ನು ಕುರಿತು, ವತ್ಸನೆ ಈ ರಾಕ್ಷ ಸನನ್ನು ಕೊಂದಹೊರತು ಪಟ್ಟಣಕ್ಕೆ ಹಿಂತಿರುಗಿಹೋಗಬಾರದು ಆದು ದರಿಂದ ನಾನು ಅವನನ್ನು ಕೊಂದು ಬರುವವರೆಗೂ ನೀನು ಈ ಬಿಲಾ ರದಲ್ಲಿ ಎಚ್ಚರಿಕೆಯಿಂದ ಕಾದಿರು!” ಎಂದೆನು ಇವನು ಬಾಗಿಲಲ್ಲಿ ಕಾದಿ ರುವನೆಂಬ ನಂಬಿಕೆಯಿಂದಲೇ ನಾನು ದುರ್ಗಮವಾದ ಆ ಬಿಲದಲ್ಲಿ ನಿರ್ಭ ಯವಾಗಿ ಪ್ರವೇಶಿಸಿದೆನು ಆ ಬಿಲದಲ್ಲಿ ಅವಿತುಕೊಂಡ ಆ ರಾಕ್ಷಸನನ್ನು