ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೯೨ ಶ್ರೀಮದ್ರಾಮಾಯಣವು [ಸರ್ಗ ೧೦, ಪ್ರವೇಶವಿಲ್ಲದುದರಿಂದ, ಇಲ್ಲಿ ನಾನು ನಿರ್ಭಯವಾಗಿರುವೆನು ರಾಮಾ ? ನಮ್ಮಿಬ್ಬರ ಈ ವೈರವೃತ್ತಾಂತವು ಅತಿವಿಸ್ತಾರವಾದರೂ ಅದೆಲ್ಲವನ್ನೂ ನಿನಗೆ ಯಧಾಸ್ಥಿತವಾಗಿ ತಿಳಿಸಿರುವೆನು ನಾನು ನಿರಪರಾಧಿಯಾಗಿದ್ದರೂ ನನಗೆ ಬಂದ ಮಹಾವಿಪತ್ತನ್ನು ನೋಡಿದೆಯಾ? ರಾಮಾ'.ನೀನು ಮಹಾವೀರ ನು ಆಶ್ರಿತರಿಗೆ ಅಭಯವನ್ನು ಕೊಟ್ಟು ಕಾಪಾಡುವವನು ವಾಲಿಭಯದಿಂ ದ ಕೊರಗುತ್ತಿರುವ ನನ್ನಲ್ಲಿಯೂ ಅನುಗ್ರಹವನ್ನಿಟ್ಟು, ಆ ನನ್ನ ವೈರಿಯನ್ನು ನಿಗ್ರಹಿಸಬೇಕು ” ಎಂದನು ಆಗ ತೇಜಸ್ವಿಯಾದ ರಾಮನು ಮಂದಹಾಸ ದೊಡನೆ ಆ ಸುಗ್ರೀವನನ್ನು ಕುರಿತು, ಧಮ್ಮಯುಕ್ತವಾದ ಮಾತಿನಿಂದ (ಎ ಲೈ ಸುಗ್ರೀವನೆ' ಅಮೋಘಗಳಾಗಿಯೂ, ಸೂರಿಸಮಾನಗಳಾಗಿಯೂ ಇ ರುವ ಈ ನನ್ನ ತೀಕ್ಷಬಾಣಗಳು,ಆತಿವೇಗದಿಂದ ಹೋಗಿ ದುರಾಚಾರನಾದ ಆ ವಾಲಿಯ ಮೇಲೆ ಬಿಳುವುದರಲ್ಲಿ ಸಂದೇಹವಿಲ್ಲ ನಿನ್ನ ಪತ್ನಿ ಯನ್ನ ಪಹರಿ ದ ದುಷ್ಟಾತ್ಮನೂ, ಕುಲಗೇಡಿಯೂ ಆದ ಆ ವಾಲಿಯು ನನ್ನ ಕಣ್ಣಿಗೆ ಬಿಳುವುದೇ ಅಡ್ಡಿ' ಆಕ್ಷಣವೇ ಅವನನ್ನು ಕೊಂದು ಹಾಕುವೆನು ನನಗೆ ಗೋ ಚರಿಸುವವರೆಗೆ ಮಾತ್ರವೇ ಅವನು ಬದುಕಿರಬಹುದು ನನಗೆ ಭಾಲ್ಯಾವಿ ಯೋಗದುಂಟಾಗಿರುವ ದುಃಖವನ್ನು ಊಹಿಸಿಕೊಂಡರೆ, ನಿನಗೂ ನಿನ್ನ ಪ ತೀವಿಯೋಗದಿಂದ ಎಷ್ಟು ಮಟ್ಟಿಗೆ ದುಃಖವಿರಬಹುದೆಂಬುದು ಸ್ಪಷ್ಟವಾ ಗಿ ತಿಳಿಯುವುದು ಎಲೈ ವಿಶ್ರನೆ? ಚಿಂತಿಸಬೇಡ ! ಆ ದುಃಖಸಮುದ್ರದಿಂ ದ ನಿನ್ನನ್ನು ದಾಟಿಸುವೆನು ನಿನ್ನ ಕೋರಿಕೆಯನ್ನು ಲೋಪವಿಲ್ಲದೆ ಪೂರ್ಣ ವಾಗಿ ಸಿಕ್ಕಿಹೊಂದಿಸುವೆನು ” ಎಂದನು ರಾಮನು ಹೇಳಿದ ಈ ಹಿತವಾ ಕ್ಯವನ್ನು ಕೇಳಿ ಸುಗ್ರೀವನು ಪರಮಸಂತುಷ್ಟನಾಗಿ, ರಾಮನನ್ನು ಆ ನೇಕವಿಧದಲ್ಲಿ ಕೊಂಡಾಡಿದನು ಇಲ್ಲಿಗೆ ಹತ್ತನೆಯಸರ್ಗವು