ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರಿತ್ರೆ ೯೩ 1 1 1 1 ಪಶು ಭಾವವನ್ನು ಹೋಗಲಾಡಿಸಿ ಉಚ್ಚಾದರ್ಶ ನನ್ನ, ತೋರಿಸು ವುದೇ ಅವರ ಉದ್ದೇಶವೆಂದು ಹೇಳಬಹುದು...-೧೨ವರು ಆಗಾಗ್ಗೆ “ ಈ ದೇಹವು ಮಾಡುವುದೆಲ್ಲ ನಿನಗೋಸ್ಕರ; ಎಲೋ ನಾನು ಹದಿ ನಾರಾಣೆಯ ಪಾಲನ್ನು ಮಾಡಿದರೆ ನೀವು ಒಂದಾಣೆಯ ವಾಲನ್ಯಾ ದರೂ ಮಾಡುತ್ತೀರಿ." ಎಂದು ಹೇಳುತ್ತಿದ್ದರು. * ಇಷ್ಟು ಹೊರತು ನಮ್ಮ ಕೀಳುಬುದ್ಧಿಯಿಂದ ಅವರ ಮಾಹಾತ್ರೆಯನ್ನು ಅಳೆದು ಎಂದಿಗೂ ಅವರಲ್ಲಿ ಇಲ್ಲದನ್ನು ಆರೋಪಿಸಬಾರದು, ಏಕೆಂದರೆ ಸ್ತ್ರೀಸಾಮಾನ್ಯ ದಲ್ಲಿಯೂ ಜಗನ್ಮಾತೆಯೆಂದು ಬುದ್ಧಿಯನ್ನಿಟ್ಟು ಕೊಂಡಿದ್ದ ಪರಮಹಂಸರಿಗೆ, ನಿರ್ವಿಕಲ್ಪ ಸಮಾಧಿಯನ್ನು ಪಡೆದು ದೇಹಬುದ್ಧಿಯನ್ನೂ ಇಂದ್ರಿಯಸುಖವನ್ನೂ ಪೂರ್ತಿಯಾಗಿ ಮರೆತು ಬಿಟ್ಟವರಿಗೆ: ಸ್ತ್ರೀಯಲ್ಲಿ ಅನ್ಯಥಾ ಬುದ್ಧಿ ಹೇಗೆ ಹುಟ್ಟಬೇಕು ?) ಕೆಲ ವರು “ ನಾವು ಆ ಕಾಲದಲ್ಲಿ ದಿದ್ದರೆ ಪರಮಹಂಸರ ಸೈರ್ಯವನ್ನು ಪರೀಕ್ಷೆಮಾಡಿ ಬಿಡುತ್ತಿದ್ದೆವು. ಅಸಿಧಾರಾವೃತವು ಯಾರಿಂದ ನಾದ ? " ಎಂದು ಹೇಳಬಹುದು. ಆಗಿನಕಾಲದಲ್ಲಿ ಪರಮಹಂ ಸರ ಶಿಷ್ಯ ಮಂಡಲಿಯಲ್ಲಿಯೇ ಇಂಥ ಸಂದೇಹ ಶೀಲರಾದ ಜನರಿಗೆ ಏನೂ ೩೬ ಭಾವವಿರಲಿಲ್ಲ. ನಮಗೆ ಒಂದು ಕಾಳಿನಷ್ಟು ಸಂದೇಹ ವಾದರೆ ಅವರಿಗೆ ಒಂದು ಬೆಟ್ಟದಷ್ಟು ಸಂದೇಹವಿರುತ್ತಿತ್ತು. ಅದ ಕ್ರೋಸ್ಕರ ಅವರ ಶಿಷ್ಯರಲ್ಲೊಬ್ಬರು ರಾತ್ರಿ ವರಮಹಂಸರು ತಮ್ಮ ಪತ್ನಿಯೊಡನೆ ಮಲಗಿರುವ ಮನೆಗೆ ಹೋಗಿ ಬಗ್ಗೆ ಕೂಡನೋಡಿದ ರ೦ತೆ, ಭಕ್ತರ ಹೃದಯದಲ್ಲಿ ನಡೆಯುವ ವ್ಯಾಪಾರಗಳನ್ನೆಲ್ಲಾ ಚೆನ್ನಾಗಿ ತಿಳಿದ ಗುರುಮಹಾರಾಜರು ಆಗ್ಯಾಗೆ “ ಯಾವುದನ್ನೂ ಚೆನ್ನಾಗಿ ಪರೀಕ್ಷೆ ಮಾಡ ಬೇಕಪ್ಪ ! ನಿಮ್ಮ ಗುರುಗಳನ್ನೂ ಚೆನ್ನಾಗಿ ಪರೀಕ್ಷೆ ಮಾಡಬೇಕು: ಹಾಗೆ ಮಾಡಿದರೆ ತಾನೆ ಆಮೇಲೆ ದೃಢ ವಾದ ನಂಬುಗೆ ಯುಂಟಾಗುವುದು.” ಎಂದು ಹೇಳುತ್ತಿದ್ದರು. ಇದು

  1. ಈ ವಿಷಯವನ್ನು ಶಾರದಾನಂದ ಸ್ವಾಮಿಗಳು ತಮ್ಮ ಗ್ರಂಥದಲ್ಲಿ ವಿಸ್ತಾರವಾಗಿ ವಿಚಾರಮಾಡಿದ್ದಾರೆ.