ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ?

ಓಂನಮೋ ಭಗವತೇ ರಾಮಕೃಷ್ಣಾಯ.

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.


ಅವತರಣಿಕೆ.

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |

ಅಭ್ಯು ತಾನ ಮಧರ್ಮಸ್ಯ ತದಾತ್ಮಾನ೦ಸೃ ಜಾಮ ಹ೦!

ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ !

ಧರ್ಮವೇ ಭಾರತೀಯರ ಸರ್ವಸ್ವ, ಹಿಂದೂಸಮಾಜ ನಿಲಯಕ್ಕೆ ಧರ್ಮವೇ ತಳಹದಿ. ಈ ಸುದೃಢವಾದ ತಳಹದಿಯ ಮೇಲೆ ಆತ್ಯ ಮಹನೀಯರು ಸಾವಿರಾರು ವರ್ಷಗಳಿಂದ ಸುಂದರವಾದ ಕಟ್ಟಡವನ್ನು ಕಟ್ಟಿಕೊಂಡು ಬಂದಿದ್ದಾರೆ, ನಮ್ಮ ಜನಾಂಗವನ್ನು ಒಂದು ದೊಡ್ಡ 'ಧರ್ಮಸಂಸಾರ' ಎಂದು ಹೇಳಬಹುದು, ನಮ್ಮಲ್ಲಿ ನಿಂತರೆ ಧರ್ಮ, ಕುಳಿತರೆ ಧರ್ಮ : ಬೆಳಗೆದ್ದರೆ ರಾತ್ರಿ ಮಲಗುವ ವರೆಗೂ ನಾವು ಮಾಡಬೇಕಾದ ಪ್ರತಿಯೊಂದು ಕರ್ಮವೂ ಧರ್ಮ ಮಯ, ಒಂದೊಂದು ವಿಧಿಯೂ ಒಂದೊಂದು ನಿಯಮವೂ,