ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

೩೯

ಶಾಸ್ತ್ರಜ್ಞರು, ಆದ್ದರಿಂದ ಈ ಪೂಜಕ ಸ್ಥಾನಕ್ಕೆ ಯಾರುಸಿಕ್ಕಿದರನ ರನ್ನು ನಿಯಮಿಸಲಾಗುವುದಿಲ್ಲ ಎಂಬುದನ್ನು ತಮಗೆ ತಿಳಿಸುವುದು ಅನಾವಶ್ಯಕ."

ರಾಮಕುಮಾರನು ತಾಂತ್ರಿಕ ಸಾಧಕ: ಶಕ್ತಿ ಮಂತ್ರದ ಉಪ

ದೇಶವನ್ನು ಪಡೆದಿದ್ದನು. ಅಲ್ಲದೆ ಅವನಿಗೆ ದೇವಿಯಲ್ಲಿ ಅಗಾಧ ನಾದ ಭಕ್ತಿ ಇತ್ತು. ಆದ್ದರಿಂದ ದೇವಿಯ ಪ್ರತಿಷ್ಠಾಪನೆಯಂಥ ಪುಣ್ಯ ಕೆಲಸವು ನಿಂತುಹೋಗುವುದೆಂಬ ಶಂಕೆಯಿಂದ ಬೇರೆ ಯಾವ ನಾದರೂ ಒಬ್ಬ ಯೋಗ್ಯನಾದ ಅರ್ಚಕನು ಸಿಕ್ಕುವವರೆಗೆ ಕಾಳಿಕಾ ಪೂಜೆಯ ಕೆಲಸವನ್ನು ತಾನೇ ವಹಿಸಿದನು. ಹಿಂದೆ ಗೊತ್ತಾಗಿದ ದಿವಸದಲ್ಲಿಯೇ ಜಗದಂಬೆಯ ಪ್ರತಿಷ್ಟೆಯು ನಡೆದುಹೋಯಿತು. ದೂರದೂರ ದೇಶಗಳಿಂದ ಸಾವಿರಾರು ಜನ ಬ್ರಾಹ್ಮಣರು ಬ೦ದಿದ್ದರು. ರಾಣಿಯು ಪ್ರತಿಯೊಬ್ಬ ಬ್ರಾಹ್ಮಣನಿಗೂ ಒಂದೊಂದು ಪಟ್ಟಿಯ ಮಡಿ, ಒಂದು ಉತ್ತರೀಯ, ಒಂದುವರಹ ಈ ಮೇರೆ ದಾನ ಮಾಡಿದಳು. ಆದಿನ ನಡೆದ ದಾನಧರ್ಮಕ್ಕೆ ನೆಲೆಯಿರಲಿಲ್ಲ. ಮೊದ ಲನೆಯದಿನದ ಖರ್ಚೆ ಒಂಬತ್ತು ಲಕ್ಷರೂಪಾಯಿಗೆ ಮೀರಿತ್ತು.