ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹಂಸರ

೫೬

ಆದರೆ ಪ್ರೇಮ-ದುಃಖ-ಕರುಣಾ-ಸಹಿಷ್ಣುತಾ- ಪೂರ್ಣವಾದ ಆಕೆಯ ಮುಖದಲ್ಲಿದ್ದಂಥ ತೇಜಸ್ವಿತೆಯನ್ನು ಮತ್ತಾವ ದೇವೀಮೂರ್ತಿ ಯಲ್ಲಿಯೂ ನಾನು ನೋಡಿರಲಿಲ್ಲ. ಆಕೆಯು ಪ್ರಸನ್ನ ದೃಷ್ಟಿಯಿಂದ ನನ್ನ ಕಡೆಗೆ ನೋಡುತ್ತಾ ನೋಡುತ್ತಾ ಮೆಲ್ಲಮೆಲ್ಲಗೆ ನನ್ನ ಕಡೆಗೆ ಬಂದಳು. ಸ೦ಭಿತನಾಗಿ “ ಈಕೆ ಯಾರು ?” ಎಂದು ಯೋಚಿಸು ತಿದ್ದೆ ಅಷ್ಟು ಹೊತ್ತಿಗೆ ಎಲ್ಲಿಂದಲೋ ಆಂಜನೇಯನು ಬಂದು ಆಕೆಯ ಕಾಲ ಹತ್ತಿರ ಕೂತುಕೊಂಡ. ಆಗ ನನ್ನ ಮನಸ್ಸಿಗೆ ಹಾಗೇ ಹೊಳೆಯಿತು :-ಸೀತಾ ! ಜನ್ಮದುಃಖಿನೀ ಸೀತಾ !! ಜನಕ ರಾಜನಂದಿನೀ ಸೀತಾ !! ರಾಮಮಯ ಜೀವಿತಾ ಸೀತಾ !!! ಆಗ ತಾಯಿ, ತಾಯಿ, ಎಂದು ಆಕೆಯ ಕಾಲಮೇಲೆ ಬೀಳುವದಕ್ಕೆ ಹೋಗುತ್ತಿದೆ. ಅಷ್ಟರಲ್ಲಿ ಆಕೆಯು ಚಕಿತಳಾದವಳ ಹಾಗೆ ಬಂದು (ತಮ್ಮ ಶರೀರವನ್ನು ತೋರಿಸಿ) ಇದರೊಳಗೆ ಪ್ರವೇಶಮಾಡಿದಳು. ಆನಂದದಿಂದಲೂ ವಿಸ್ಮಯದಿಂದಲೂ ಬಾಹ್ಯ ಜ್ಞಾನ ಶೂನ್ಯನಾಗಿ: ನೆಲದ ಮೇಲೆ ಬಿದ್ದುಬಿಟ್ಟೆ”.

ಈ ನಾಲ್ಕು ವರ್ಷಗಳಲ್ಲಿಯೇ ಪರಮಹಂಸರು ಇನ್ನೂ ಅನೇಕ

ಸಾಧನಗಳನ್ನು ಮಾಡಿದರು. ಮನಸ್ಸಿನಿಂದ ಹಣದಮೇಲಿನ ಆಸಕ್ತಿ ಯನ್ನು ದೂರಮಾಡುವುದಕ್ಕಾಗಿ ಕೆಲವು ಬಂಗಾರದ ನಾಣ್ಯಗಳನ್ನೂ ಅದರ ಜೊತೆಯಲ್ಲಿ ಸ್ವಲ್ಪ ಮಣ್ಣನ್ನೂ ಹಿಡಿದುಕೊಂಡು ಸದಸದ್ವಿಚಾರ ಮಾಡಲಾರಂಭಿಸಿ, ಸಚ್ಚಿದಾನಂದಸ್ವರೂಪವಾದ ನಿತ್ಯವಸ್ತುವನ್ನು ಪಡೆಯುವುದಕ್ಕೆ ಅದರಿಂದ ಯಾವ ಸಹಾಯವೂ ಆಗುವುದಿಲ್ಲವೆಂದು ನಿರ್ಧರಮಾಡಿಕೊಂಡು, ಮನಸ್ಸಿನಲ್ಲಿ ಅದು ದೃಢವಾಗಿಲ್ಲುವಂತೆ * ಮಣ್ಣೆಚಿನ್ನ' “ ಚಿನ್ನವೇ ಮಣ್ಣ' ಎಂದು ಮೇಲಿಂದ ಮೇಲೆ ಹೇಳುತ್ತ ಅವೆರಡನ್ನೂ ಗಂಗೆಯೊಳಗೆ ಹಾಕಿ ಬಿಟ್ಟರು. ಆ ಬ್ರಹ್ಮ ಸ೦ಬ ಪರ್ಯಂತವಾಗಿರತಕ್ಕೆ ಸಕಲವಸ್ತು ವ್ಯಕ್ತಿಗಳೂ ಜಗನ್ಮಾ ತೆಯ ಅಂಶವೆಂಬುದನ್ನು ದೃಢಮಾಡಿಕೊಳ್ಳುವುದಕ್ಕಾಗಿ ದೇವಸ್ಥಾನ ದಲ್ಲಿ ಕಂಗಾಳಿಗಳು ಊಟಮಾಡಿ ಬಿಟ್ಟು ಹೋಗಿದ್ದ ಎಂಜಲೆಲೆ