ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರೆ

೬೯

ಅದೇ ಮಂಟಪದ ಒಂದು ಮೂಲೆಯಲ್ಲಿಯೇ ಪರಮಹಂಸರೂ ಅನ್ಯಮನಸ್ಕರಾಗಿ ಕುಳಿತಿದ್ದರು. ಅವರ ಮುಖವನ್ನು ನೋಡು ತಲೆ ತೋತಾಪುರಿಯ ಮನಸ್ಸಿಗೆ ಇಂಥ ಉತ್ತಮವಾದ ಅಧಿಕಾರಿ ಯು ಸಿಕ್ಕುವುದು ಅಪೂರ್ವವೆಂದು ಬೊಧೆಯಾಯಿತು. ತಂತ್ರ ಸಾಧನೆಯೇ ವಿಶೇಷ ಪ್ರಚಾರದಲ್ಲಿರುವ ಬಂಗಾಳಾದೇಶದಲ್ಲ ಇಂಥ ವೇದಾಂತ ಸಾಧನೆಯ ಅಧಿಕಾರಿಯು ಇರುವನೇ ಎಂದು ಆಶ್ಚರ್ಯದಿಂದ ಅವರನ್ನು ಕುರಿತು “ ನಿಮ್ಮನ್ನು ನೋಡಿದರೆ ಉತ್ತಮ ವಾದ ಅಧಿಕಾರಿಗಳೆಂದು ತೋರುತ್ತೀರಿ, ನೀವು ವೇದಾಂತ ಸಾಧನೆ ಮಾಡುತ್ತೀರಾ ?” ಎಂದು ಕೇಳಿದನು. ಆಜಾನುಬಾಹುವಾದ ಜಟಾಧಾರಿಯಾದ, ನಗ್ನಾವಸ್ಥೆಯಲ್ಲಿದ್ದ ಸನ್ಯಾಸಿಯ ಪ್ರಶ್ನೆಯನ್ನು ಕೇ ಪರಮಹಂಸರು “ ಏನು ಮಾಡಬೇಕೋ ಏನುಮಾಡಬಾರದೋ ನನಗೆ ಒಂದೂ ಗೊತ್ತಿಲ್ಲ. ನನ್ನ ತಾಯಿಗೆ ಎಲ್ಲಾ ಗೊತ್ತು. ಆಕೆಯು ಅಪ್ಪಣೆಕೊಟ್ಟರೆ ಆಗಬಹುದು. ' ಎಂದು ಹೇಳಿದರು. ಸನ್ಯಾಸಿಯು “ ಹಾಗಾದರೆ ಈಗಲೇ ಹೋಗಿ ನಿಮ್ಮ ತಾಯಿಯನ್ನು ಕೇಳಿ ಬನ್ನಿ, ಏಕೆಂದರೆ ನಾನು ಬಹುಕಾಲ ಇಲ್ಲಿರುವುದಿಲ್ಲ”. # ಎಂದು ಹೇಳಿದನು. ಪರಮಹಂಸರೂ ಕೂಡಲೆ ಕಾಳಿಕಾದೇವಸ್ಥಾ ನಕ್ಕೆ ಹೋಗಿ ಅಲ್ಲಿ ಭಾವಾವಿಷ್ಟರಾಗಿ “ ಹೋಗು, ಉಪದೇಶ ತೆಗೆದು ಕೊ ; ನಿನಗೆ ಉಪದೇಶಮಾಡುವದಕ್ಕಾಗಿಯೇ ಆ ಸನ್ಯಾಸಿಯು ಇಲ್ಲಿಗೆ ಬಂದಿರುವುದು”, ಎಂಬ ದೈವವಾಣಿಯನ್ನು ಕೇಳಿ ಬಂದ ಅದನ್ನು ತೋತಾಪುರಿಗೆ ತಿಳಿಸಿದರು.

ತೋತಾಪುರಿಗೆ ಸಂತೋಷವಾಯಿತು. ಉಪದೇಶವಾಗುವು

ದಕ್ಕೆ ಮುಂಚೆ ಶಿಖಾಯಚೊ ಪವೀತಗಳನ್ನು ಪರಿತ್ಯಾಗಮಾಡಿ ಶಾಸ್ತ್ರೀಯವಾಗಿ ಸನ್ಯಾಸಗ್ರಹಣ ಮಾಡಬೇಕೆಂದು ಹೇಳಲು ಪರವು ಹ೦ಸರು ಸ್ವಲ್ಪ ಹಿಂದುಮುಂದು ನೋಡಿ ಗುಟ್ಟಾಗಿ ಹಾಗೆಮಾಡುವು

* ಏಕೆ೦ದರೆ ಮರು ದಿನಕ್ಕೆ ಮೇಲ್ಪಟ್ಟು ಆ ತನು ಒಂದು ಸ್ಥಳ

ದಲ್ಲಿ ನಿಲ್ಲುತ್ತಿರಲಿಲ್ಲ.