ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೯೫

ಟಾಗುವುದಕ್ಕೆ ಮೂಲಕಾರಣವನ್ನು ತಿಳಿದು ಮುಖ್ಯವಾಗಿ ಅದನ್ನು ಬೇರುಸಹಿತ ಕಿತ್ತು ಹಾಕಿ ಧರ್ಮವನ್ನು ಪುನಃ ಉದ್ಘಾರಮಾಡುವುದಕ್ಕೆ ಪ್ರಯತ್ನಪಟ್ಟು ಅದರಲ್ಲಿ ಕೃತಕೃತ್ಯರಾದ ಬಳಿಕ ದೇಹವನ್ನು ತ್ಯಜಿಸಿದಂತೆ ತೋರುತ್ತದೆ. ಪಾಶ್ಚಿಮಾತ್ಯನಾಗರಿಕತೆಯೆಂಬ ಪ್ರವಾಹಕ್ಕೆ ಸಿಕ್ಕಿ, ಇಂದ್ರಿಯಾತೀತವಾದ ಆಧ್ಯಾತ್ಮಿಕ ವಿಚಾರಗಳಲ್ಲಿ ನಂಬುಗೆಯಿಲ್ಲದೆ, ಸಂದೇಹದಲ್ಲಿಯೂ ನಾಸ್ತಿಕವಾದದಲ್ಲಿಯೂ ದೇಶವೇ ತೇಲಿಹೋಗುತ್ತಿರುವಾಗ ಶ್ರೀ ಶ್ರೀರಾಮಕೃಷ್ಣ ಪರಮಹಂಸರು ಅವತಾರ ಮಾಡಿದ್ದನ್ನು ನೋಡಿದರೆ ವಿಜ್ಞಾನಶಾಸ್ತ್ರದ ಪ್ರಾಬಲ್ಯ ಮುಂತಾದ ಕಾರಣಗಳಿಂದುಂಟಾದ ಸಂಶಯವೇ ನನ್ನ ಕಾಲದ ಧರ್ಮಗ್ಲಾನಿಗೆ ಮುಖ್ಯ ಕಾರಣವೆಂದೂ ಅದರ ಮೂಲೋತ್ಪಾಟನೆಯ ಮೂಲಕ ಧರ್ಮವನ್ನು ಜೀರ್ಣೋದ್ದಾರ ಮಾಡುವುದೇ ಅವರು ಅವತಾರ ಮಾಡಿದ್ದರ ಮುಖ್ಯ ಉದ್ದೇಶವೆಂದೂ ಹೇಳಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಅವರು ನಾನಾ ಮಾರ್ಗಗಳಿ೦ದ ದೇವರು ಪರಲೋಕ ಮುಂತಾದುವುಗಳಲ್ಲಿ ಸಂದೇಹವನ್ನು ದೂರಮಾಡಿ ನಂಬುಗೆಯನ್ನು ಹುಟ್ಟಿಸಿ ಭಕ್ತರನ್ನು ದಾರಿಹತ್ತಿಸುತಿದ್ದರು. ಸಂಶಯ ದೂರವಾಗದೇ ಶ್ರದ್ಧೆಹುಟ್ಟದೇ ಯಾವುದೂ ಆಗದು. ಯೋಗಶಾಸ್ತ್ರಕಾರರೂ ಸಂಶಯವು ದೊಡ್ಡ ಅಡಚಣೆಯೆಂದು ಹೇಳಿದ್ದಾರೆ. “ಸಂಶಯಾತ್ಮಾ ವಿನಶ್ಯತಿ” ಎಂಬುದು ಎಲ್ಲರೂ ಕೇಳಿದ ವಿಷಯವೇ ಆಗಿವೆ. ಅದರಂತೆ "ಶ್ರದ್ಧಾವಾನ್ ಲಭತೆಜ್ಞಾನಂ” ಎಂಬುದನ್ನು ಓದಿದ್ದೇವೆ. ಈ ಶ್ರದ್ಧೆಯಿದ್ದು ದೇವರನ್ನು ಕಾಣಬೇಕೆಂದು ನಿಜವಾದ ವ್ಯಾಕುಲತೆ ಇದ್ದರೆ ಮತ್ತಾವ ಸಲಕರಣಗಳೂ ಬೇಕಾಗಿಲ್ಲ. ಅದನ್ನು ಪರಮಹಂಸರು ತಮ್ಮ ಉದಾಹರಣೆಯಿಂದಲೇ ತೋರ್ಪಡಿಸಿದ್ದಾರೆ. ಅವರು ಯಾವ ವೇದಾಂತ ಜ್ಞಾನವೂ ಯೋಗಾಭ್ಯಾಸವೂ ಇಲ್ಲದೆಯೇ, ತಮ್ಮ ಶ್ರದ್ಧಾ ಭಕ್ತಿಗಳಿಂದಲೇ ಮೊದಲು ದೇವರನ್ನು ಒಲಿಸಿಕೊಳ್ಳಲಿಲ್ಲವೇ?

ಹೀಗೆಂದು ಹೇಳಿದ ಕೂಡಲೆ ಅನೇಕರು “ನಮಗೆ ದೇವರನ್ನು