ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತುವಿಜ್ಞಾಪನೆ.

_________

ಶ್ರೀ ಶ್ರೀರಾಮಕೃಷ್ಣ ಪರಮಹಂಸರವರು, “ ಬ್ರಹ್ಮಸಾಕ್ಷಾತ್ಕಾರವಾಗದೆ ವೇದಾಂತ ವಿಚಾರವನ್ನು ಗ್ರಂಥಗಳಲ್ಲಿ ಓದಿಕೊಂಡು ಪರಮಾತ್ಮನ ಸ್ವರೂಪವನ್ನು ಕುರಿತು ವಿಚಾರಮಾಡುವುದು, ಭೂಪಠದಲ್ಲಿ ಕಾಶೀಪಟ್ಟಣವನ್ನು ನೋಡಿ ಅದನ್ನು ವರ್ಣನೆ ಮಾಡುವಹಾಗೆ” ಎಂದು ಹೇಳುತ್ತಿದ್ದರು. ನಾವು ಅವರ ಜೀವನ ಚರಿತ್ರೆಯನ್ನು ಬರೆಯುವುದಕ್ಕೆ ಹೊರಟಿರುವುದೂ ಸ್ವಲ್ಪ ಮಟ್ಟಿಗೆ ಹಾಗೆಯೇ ಆಗಿದೆ. ನಮಗೆ ಆ ಮಹಾನುಭಾವರ ಸಾನ್ನಿಧ್ಯದಲ್ಲಿಯೇ ಇದ್ದುಕೊಂಡು ಅವರ ಸಂಗತಿಗಳನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳುವ ಪುಣ್ಯವು ಲಭಿಸಲಿಲ್ಲ. ಅವರು ಹೇಳಿರುವ ವಿಚಾರಗಳನ್ನು ಪೂರ್ಣವಾಗಿ ಗ್ರಹಿಸುವ ಶಕ್ತಿಯಂತೂ ಇಲ್ಲವೇ ಇಲ್ಲ. ಆದರೂ ಬೆಂಗಳೂರಿನ ಶ್ರೀರಾಮ ಕೃಷ್ಣ ಮಠದಲ್ಲಿರುವ ಶ್ರೀನಿರ್ಮಲಾನಂದ ಸ್ವಾಮಿಗಳ ಆಜ್ಞೆಯಂತೆ ಈ ಕೆಲಸವನ್ನು ಕೈಗೊಂಡು ಪರಮಹಂಸರ ಶಿಷ್ಯಮಂಡಲಿಗೆ ಸೇರಿದ ಶಾರದಾನಂದ ಸ್ವಾಮಿಗಳಿ೦ದ ಬ೦ಗಾಳೀ ಭಾಷೆಯಲ್ಲಿ ರಚಿತವಾದ "ಶ್ರೀರಾಮಕೃಷ್ಣ ಲೀಲಾಪ್ರಸಂಗ” ಎಂಬ ಗ್ರಂಥದ ಆಧಾರದ ಮೇಲೆ ಈ ಸಣ್ಣ ಪುಸ್ತಕವನ್ನು ಬರೆದಿದ್ದೇವೆ. “ಶ್ರೀರಾಮಕೃಷ್ಣ ಲೀಲಾಪ್ರಸಂಗವು” ಬಹು ದೊಡ್ಡ ಗ್ರಂಥ; ಇದುವರಿಗೆ ಪ್ರಕಟವಾಗಿರುವ ಆ ಗ್ರಂಥವು ಸುಮಾರು ೧,೫೦೦ ಪುಟಗಳವರೆಗೆ ಬಂದಿದೆ. ಆದರೂ ಅದು ಅಷ್ಟಕ್ಕೇ ಮುಗಿಯುವಂತಿಲ್ಲ. ಇದೇ ಬೆಂಗಳೂರು ಮಠದಲ್ಲಿಯೇ ಇದ್ದು ಈಗ ಮದರಾಸಿಗೆ ದಯಮಾಡಿರುವ ವಿದೇಹಾ ನಂದ ಸ್ವಾಮಿಗಳು ಅದಷ್ಟನ್ನೂ ನಮಗೆ ಓದಿತಿಳಿಸಿದರು. ಆದ್ದರಿಂದ ಈ ಗ್ರಂಥರಚನೆಗೆ ಅವರಿಂದಾದ ಸಹಾಯವು ಇಷ್ಟೆಂದು