ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ, [ಸರ್ಗ ತತಸ್ತು ತುಃ ಪಶ್ಯ ತದುತ್ತಮಸ್ಸಿಯೋ ಮಹೀಪತೇರುತ್ತಮಪಾಯಸಂ

  • [ಪೃಥಕ್ | ಹುತಾಶನಾದಿತ್ಯಸಮಾನತೇಜಸೋಜೆರೇಣ ಗರ್ಭಾ೯ ಪ್ರತಿದಿರೇ ತದಾ || ತಾಸಾಂ ಗರ್ಭಷು ದೇವೇಕಃ ಪೀತವಾಸ ಜನಾರ್ದನಃ | ಕಜ್ಜಿ ಚಕ್ರಗದಾಪಃ ಆವಿರ್ಭೂತೊ ದಿನೇದಿನೇ |೬! ತತಸ್ತು ದ್ರಾದಲೇ ಮಾಸಿ ವಸನ್ನರ್ತ ಮನೋರಮೆ | ಚೈತ್ರಶುಕೃನವವ್ಯಾಂ ತು ನಕ್ಷತ್ರ ದಿತಿದೈವತೇ ||೭|| ಮಧ್ಯಾಹ್ನ ಕರ್ಕಟೇ ಲಗ್ನ ಉಚ್ಚ ಸ್ಥ ಗ್ರಹಪಳ್ಳಿಕೇ || ಮೇಷಂ ಪೂಷಣಿ ಸಮಾಪ್ತ ವಾತಾವಿನ್ನು ನಾ ಸಹ [v | ಪೋದ್ಯಾನೇ ಜಗನ್ನಾಥಂ ಸರ್ವಲೋಕನಮಸ್ಕೃತವು || ಕೌಸಲ್ಯಾ ಜನಯದ್ರಾಮಂ ಸರ್ವಲಕ್ಷಣಸಂಯುತಮ್ || ಇದ್ದೀವರದಳ ಶ್ಯಾಮಂ ಸರ್ವಾಭರಣಭೂಷಿತಮ್ | ವರದಾನಾಗತಂ ಪೂರ್ವಂ ಸಾಕ್ಷಾದಿಷ್ಣುಂ ಪರಾತ್ಪರಮ್ | ಸರ್ವೋಪನಿಷದಾಮರ್ಥಂ ಜಗತ್ಸರ್ಗಾದಿಕಾರಣಮ್ |೧೦|| ರ್ತ ಜಾತ್ರೆ ಜಗನ್ನಾಥ್ ದೇವದುನ್ನು ಭಯೋ ದಿವಿ ..., ವಿನೇದುಃ ಪುಪ್ಪವರ್ಪಾಣಿ ವವೃಷಃ ಸುರಸತ್ಯವತಾಃ ೧೧||

ಬಳಿಕ, ಆ ಉತ್ತಮಸ್ಯೆಯರು, ದೊರೆಯು ತಮಗೆ ಕೊಟ್ಟ ಆ ದಿವ್ಯ ಪಾಯಸವನ್ನು ಬೇರೆ ಬೇರೆ ಪಾಶನಮಾಡಿ, ಸ್ವಲ್ಪ ದಿವಸದೊಳಗಾಗಿ, ಅಗ್ನಿ ಸೂರರುಗಳಿಗೆ ಸಮಾನವಾದ ಗರ್ಭಗ ಳನ್ನು ಹೊಂದಿದರು |೫|| ಅವರುಗಳ ಗರ್ಭದೊಳಗೆ, ದೇವದೇವನಾದ ಪೀತಾಂಬರಧಾರಿಯಾದ ಶಂಖಚಕ್ರಗದಾ ಹಸ್ಯನಾದ ಶ್ರೀಮನ್ನಾರಾಯಣನು ಆವಿರ್ಭವಿಸಿ, ದಿನದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದನು||೬|| ಅನಂತರ, ಹನ್ನೆರಡನೆಯ ತಿಂಗಳಿನಲ್ಲಿ, ಮನೋಹರವಾದ ವಸಂತಋತುವಿನಲ್ಲಿ, ಚೈತ. ಶುಕ್ಲ ನವಮಿಯ ದಿವಸ, ಪುನರ್ವಸುನಕ್ಷತ್ರದ ಕೊನೆಯ ಪಾದದಲ್ಲಿ, ಮಧ್ಯಾಹ್ನ ಕಾಲದಲ್ಲಿ, ಕರ್ಕಾಟಕಲಗ್ನ ದಲ್ಲಿ, ಸೂರ ಗುರು ಶುಕ್ರ ಅಂಗಾರಕ ಶನಿಗಳೆಂಬ ಅಯ್ತು ಗ್ರಹಗಳು ಉಚ್ಚ ಸ್ಥಾನದಲ್ಲಿರಲಾಗಿ, ಸೂರನು ಮೇಷರಾಶಿಯಲ್ಲಿರಲಾಗಿ, ಗುರುವು ಚಂದ್ರನೊಡನೆ ಉದಯಿಸುತಿ ರಲಾಗಿ, ಕೌಸಲ್ಯಯು, ಸರ್ವಲೋಕನಮಸ್ಕೃತನಾದ ಸತ್ವ ಲಕ್ಷಣಯುಕ್ತ ನಾದ ಜಗನ್ನಾಯಕ ನಾದ ಶ್ರೀರಾಮನನ್ನು ಪ್ರಸವಿಸಿದಳು. ಆ ಶ್ರೀರಾಮನು, ಇಂದೀವರದಳಶ್ಯಾಮಲನಾಗಿಯೂ, ಸರ್ವಾಭರಣಭೂಷಿತನಾಗಿಯೂ ಇದ್ದನು. ಪೂರ್ವದಲ್ಲಿ ವರಪ್ರದಾನಮಾಡುವುದಕ್ಕೆ ಬಂದಿದ್ದ ಪರಾತ್ಪರತರನಾದ ಸಾಕಷ್ಟು ವೇ ಅಲ್ಲಿ ಆರೀತಿಯಾಗಿ ಅವತರಿಸಿದ್ದನು, ಸಮಸ್ತವಾದ ಉಪ ನಿಷದ್ವಾಕ್ಯಗಳಿಗೂ ಇವನೇ ವಿಷಯಭೂತನು ; ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಇವನೇ ಕಾರ Nಭೂತನು. ಇ೦ತಹ ಶ್ರೀರಾಮನನ್ನು ಕೌಸಲ್ಯಯು ಆಗ ಪ್ರಸವಿಸಿದಳು 11೬-೧ol ಆ ಲೋಕನಾಯಕನಾದ ಭಗವಂತನು ಅಲ್ಲಿ ಅವತರಿಸಲಾಗಿ, ಅಂತರಿಕ್ಷದಲ್ಲಿ ದೇವದುಂದು ಭಗಳು ಮೊಳಗಿದುವು; ದೇವತೆಗಳು ಪುಷ್ಪವೃಷ್ಟಿಯನ್ನು ಸುರಿದರು ; ಗಂಧಶ್ವಶ್ರೇಷ್ಠರು ಗಾನ G