ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಅಯೋಧ್ಯಾಕಾಂಡ ಅಥ ಶ್ರೀಮದಯೋಧ್ಯಾಕಾಣೋ ಚತುರ್ಥಃ ಸರ್ಗಃ, ಶ್ರೀ ಸೂತ ಉವಾಚ ತತೋ ದೇವಾಃ ಸಗನ್ಧರ್ವಾ ಯಕ್ಷ ರಾಕ್ಷಸನನ್ನಗಾಃ || ದಿಕ್ಕಾಲಸಹಿತಾಃ ಸರ್ವೆ ಬ್ರಹ್ಮಾಂಮಿದಮಬ್ರುರ್ವ ||೧|| ಶಿವೋದಿತಂ ವಚೊ ದೇವ ಶ್ರುತಂ ತೇ ಮಧುರಾಕ್ಷರವ | ರಮಣೀಯಂ ನ ಜಾನೀನಃ ಉಪದೇಷ್ಟುಂ ತಮರ್ಹಸಿ |೨| ರಾಮಾಭಿಷೇಕ ವಿನಾಯ ಕಥಂ ಯತ್ನ ಭವೇದ್ವಿಧೇ | ಸರ್ವ೦ ಕರತಲಸ್ಟಂ ತೇ ತನ್ನೋ ವಸ್ತುವಿಹಾರ್ಹಸಿ ೩|| ಬ್ರಹ್ಮವಾಚ, ಸಂಕೇತನಗರೇ ಸರ್ವ ರಾಮಭಕ್ತಿ ಪರಾಯಣಾಃ | ರಾಮಾಭಿಷೇಕವಿಘಾಯ ನ ಯತನ್ನೆ ಮನೀಷಿಣಃ |೪|| ಅಯೋಧ್ಯಾಕಾಂಡದಲ್ಲಿ ನಾಲ್ಕನೆಯ ಸರ್ಗವು. ಮತ್ತೆ ಶ್ರೀಸೂತರು ಶೌನಕಾದಿಗಳನ್ನು ಕುರಿತು ಹೇಳುವರು:- ಎಲೈ ಶೌನಕಾದಿಗಳಿರಾ ! ಹೀಗೆ ಶ್ರೀ ಪರಮೇಶ್ವರನು ಹೇಳಿದ ಬಳಿಕ, ಸಮಸ್ತರಾದ ದೇವತೆಗಳೊ ಗಂಧಶ್ವರೂ ಯಕ್ಷ ರಾಕ್ಷಸ ಸನ್ನ ಗರೂ, ಅಷ್ಟ ದಿಕ್ಷಾಲಕರೊಡಗೂಡಿದವರಾಗಿ, ಬ್ರಹ್ಮದೇವನನ್ನು ಕುರಿತು ಹೀಗೆ ಹೇಳಿದರು ||೧|| ಹೇ ಬ್ರಹ್ಮದೇವ ! ಪರಮೇಶ್ವರನಿಂದ ಹೇಳಲ್ಪಟ್ಟ ಮಧುರವಾದ ಮಾತನ್ನು ನೀನೂ ಕೇಳಿದೆಯಷ್ಟೆ ! ಈಗ ಯಾವುದು ಯುಕ್ತವೆಂಬುದನ್ನು ನಾವರಿಯವು; ಅದನ್ನು ನೀನೇ ನಮಗೆ ಹೇಳಿಕೊಡಬೇಕಾಗಿರುವುದು 1೨೦ | ಶ್ರೀರಾಮನ ಅಭಿಷೇಕಕ್ಕೆ ವಿಷ್ಣು ವುಂಟಾಗಲು ಹೇಗೆ ಯತ್ನ ನಡೆಯಬೇಕು ? ನಿನಗೆ ಸಮಸ್ತವೂ ಕರತಲಾಮಲಕವಾಗಿರುವುದಲ್ಲವೆ! ಅದುಕಾರಣ, ಅದನ್ನು ನೀನೇ ನಮಗೆ ಹೇಳಿ ಬೇಕಾಗಿರುವುದು ||೩|| ಈ ಮಾತನ್ನು ಕೇಳಿದ ಬ್ರಹ್ಮದೇವನು ಉತ್ತರ ಹೇಳುವನು:- ಎಲೈ ದೇವತಗಳಿರಾ ! ಅಯೋಧ್ಯಾಹಟ್ಟಣದಲ್ಲಿರುವ ಜನರೆಲ್ಲರೂ ರಿಮನಲ್ಲಿ ಮಹಾಭಕ್ತಿ ಯುಕ್ತರಾಗಿರುವರು; ಮತ್ತು, ಅವರು ಕೇವಲ ವಿವೇಕಿಗಳಾಗಿಯೂ ಇರುವರು. ಹೀಗಿರು ವುದರಿಂದ, ಅವರು ಶ್ರೀರಾಮನ ಪಟ್ಟಾಭಿಷೇಕಕ್ಕೆ ವಿಘ್ನ ಮಾಡಲು ಪ್ರಯತ್ನ ಪಡುವುದಿಲ್ಲ ೪೦