ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ಶಶ್ವಸಂಗ್ರಹ ರಾಮಾಯಣ ಅಥ ಶ್ರೀಮದಯೋಧ್ಯಾಕಾ ಅಮಃ ಸರ್ಗಃ, es ಶ್ರೀಶಿವಉವಾಚ ತತೋ ರಾಜಗೃಹಾತ್ ತೂರ್ಣ ವಿನಿಮ್ಯ ಮಹಾದ್ಯುತಿಃ | ರಾಘವೋ ಮಾತರಂ ದ್ರಷ್ಟು ಮಾತುರನ್ನಃಪುರಂ ಯಯ || ಕೌಸಲ್ಯಾಪಿ ಹರೇಃ ಪೂಜಾಂ ಕುರುತೇ ರಾಮಕಾರಣಾತ್ | ಹೋಮಂ ಚ ಕಾರಯಾಮಾಸ ಬ್ರಾಹ್ಮಣೇಭ್ಯ ಧನಂ ದದ್ |೨| ಸರಿ ಚಿರಸ್ಯಾತ್ಮಜಂ ದೃಪ್ಪಾಮಾತ್ಮನನ್ನವಾಗತಮ್ || ಅಭಿಚಕ್ರಮ ಸಂತೃಪ್ಲಾ ಕಿಶೋರಂ ಬಡಬಾ ಯಥಾ |೩|| ಸ ಮಾತರಮಭಿಕ್ನಾಂ ಉಪಸಹ್ಯ ರಾಭುವಃ | ಪರಿಷಕಕ ಬಾಹುಳ್ಯಾಂ ಇದಂ ವಚನಮಬ್ರವೀತ್ ||8|| ಭರತಾಯ ಮಹಾರಾಜ ಯವರಾಜ್ಯಂ ಪ್ರಯಚ್ಛತಿ || ಮಾಂ ಪುನರ್ದಕಾರ ವಿವಾಸಯತಿ ತಾಪಸವ' |M ಚತುರ್ದಕಸವಸ್ತತ್ರ ಹ್ಯುಮಿತಾ ಮುನಿಭಿಃ ಸಹ | ಆಗಮಿಪೈ ತತಃ ಶೀಘಂ ವಾ ವಿಷ್ಣು ಕರ್ತುಮರ್ಹಸಿ |೬||

ವಿ ವಿ ಅಯೋಧ್ಯಾಕಾಂಡದಲ್ಲಿ ಎಂಟನೆಯ ಸರ್ಗವು. ಶ್ರೀ ಪರಮೇಶ್ವರನು ವುನಃ ಹೇಳಲುಪಕವಿಸಿದನು :- ಎಲ್‌ ಪಾರ್ವತಿ! ಆ ಬಳಿಕ, ಮಹಾಪ್ರಕಾಶನಾದ ಶ್ರೀರಾಮನು, ದಶರಧನ ಮನೆ ಯಿಂದ ತಟ್ಟನೆ ಹೊರಟವನಾಗಿ, ತನ್ನ ತಾಯಿಯಾದ ಕೌಸಲೆಯನ್ನು ನೋಡುವುದಕ್ಕೋಸ್ಕರ, ತಾಯಿಯ ಅಂತಃಪುರಕ್ಕೆ ಹೋದನು ೧|| ಮನ ಅಭ್ಯುದಯಕ್ಕಾಗಿ ಶ್ರೀ ಪರಮಾತ್ಮನ ಪೂಜೆ ಯನ್ನು ಮಾಡುತಿದ್ದಳು ; ವಿಶೇಷವಾಗಿ ಹೋಮವನ್ನೂ ಮಾಡಿಸುತಿದ್ದಳು ; ಬ್ರಾಹ್ಮಣರಿಗೆ ಧನ ವನ್ನೂ ಕೊಡುತ್ತಿದ್ದಳು 198 ಅವಳು, ಮಾತೃಪ್ರಿತಿಕರನಾದ ಮಗನು ಬಹುಕಾಲಕ್ಕೆ ಬಂದುದನ್ನು ಕಂಡು, ತನ್ನ ಮರಿ ಯನ್ನು ಕಂಡ ಹೆಣ್ಣು ಗುದುರೆಯ೦ತೆ, ಮಹಾಹರ್ಷಯುಕ್ತಳಾಗಿ ಹತ್ತಿರಕ್ಕೆ ಹೋದಳು ||೩|| ಹೀಗೆ ತನ್ನ ಹತ್ತಿರಕ್ಕೆ ಬರುತ್ತಿರುವ ತಾಯಿಗೆ ನಮಸ್ಕಾರಮಾಡಿ, ಶ್ರೀರಾಮನು ಅವಳಿಂದ ಆಲಿಂಗಿಸಲ್ಪಟ್ಟವನಾಗಿ, ಅವಳನ್ನು ಕುರಿತು ಈ ಮಾತನ್ನು ಹೇಳಿದನು ॥೪॥ ಅಂಬ! ಈಗ ನಮ್ಮ ಮಹಾರಾಜನು ಭರತನಿಗೆ ಯವರಾಜ್ಯವನ್ನು ಕೊಡುವನು ; ನನ್ನನ್ನು ದಂಡಕಾರಣ್ಯದಲ್ಲಿ ತಾಪಸನನ್ನಾಗಿ ಕಳುಹಿಸುವನು ||೫|| ನಾನು ಅಲ್ಲಿ ಮುನಿಗಳೊಡನೆ ಹದಿನಾಲ್ಕು ವರ್ಷ ವಾಸವಾಡಿ, ಬಳಿಕ ಬೇಗನೆ ಇಲ್ಲಿಗೆ ಬಂದುಬಿಡುವನು. ನೀನು ಇದಕ್ಕೆ ಸರ್ವಥಾ ವಿಷವಾಡಕೂಡದೆಂದು ಪ್ರಾರ್ಥಿಸುವನುLI