ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ಅಯೋಧ್ಯಾಕಾಂಡ ತಚ್ಚು ತಾ ಸಹಸೋದ್ವಿಗ್ನಾ ಮರ್ಧಿತಾ ಪುನರುತ್ಥಿತಾ | ಸಹ ರಾಮಂ ಸುದುಃಖಾರ್ತಾ ದುಃಖಸಮ್ಮುತ ಖಾ ಗಿರಾ ||೭| ಯದಿ ರಾಮ ವನಂ ಸತ್ಯಂ ಯಾಸಿ ತಂ ನಯ ಮಾನಸಿ | ಈ ದಿ ಹಿನಾ ಕ್ಷಣಾರ್ಧಂ ವಾ ಜಿವಿತಂ ಧಾರಯ ಕಥನ' tv ಕೈಕೇಯ್ಕೆ ವರದಿ ರಾಜಾ ಸರ್ವಸ್ವಂ ವಾ ಪ್ರಯ.ಚ ತು | ತಯಾ ಕಿಮಸರಾದ್ದಂ ವೈ ಕೈಕಾ ಕೃ ನೃಸಸ್ಯ ವಾ |Fi ಪಿತಾ ಗುರುರ್ಯಥಾ ರಾಮ ತವಾಹನಧಿಕಾ ತಥಾ | ಪಿತ್ರಾಜ್ಞ ಪ್ರೊ' ವನ, ಗನ್ನು ವಾರಿಯ ತ್ವಾಮಹಂ ಸುತ ||೧೦|| ಲಕ್ಷ್ಮಣೋಪಿ ತತಃ ಶ್ರುತಾ ಕೈಕಯ್ಯಾ ವಚನಂ ರುಪಾ | ಉವಾಚ ರಾಘವಂ ವಿಕ್ಷ ರ್ದವ ಜಗತ್ಯ [೧೧] ನ ರೋಚತೇ ವಮಾಶ್ವೇತತ್ ಆರ್ಯ ಯಾವುವೋವನಮ್ | ತ್ಯಕ್ಕೆ ರಾಜ್ಯಶಿಯಂ ಗಚೈತ್ ೩ ವಾಕ್ಯವಶಂ ಗತಃ |೧೨| ಎಂಬುದಾಗಿ ಶ್ರೀರಾಮನು ಹೇಳಿದ ಮಾತನ್ನು ಕೇಳಿ, ಆ ಕೌಸಲ್ಯಯು ತಟ್ಟನೆ ಕಳವಳ ಪಟ್ಟು ಮೂರ್ಛ ಹೊಂದಿ ಬಿದ್ದವಳಾಗಿ, ಮತ್ತೆ ಎದ್ದು , ಮಹಾದುಃಖಸಮನ್ವಿತಳಾಗಿ, ರಾಮ ನನ್ನು ಕುರಿತು ದುಃಖಪರಿವೃತವಾದ ಈ ಮಾತನ್ನು ಹೇಳಿದಳು |೭|| ವತ್ಸ ! ರಾಮ! ನಾನು ಹೆಚ್ಚು ಮಾತನ್ನು ಹೇಳುವುದಿಲ್ಲ. ನೀನು ಸತ್ಯವಾಗಿಯೂ ಆರ ಣ್ಯಕ್ಕೆ ಹೋಗುವುದೇ ಸಿದ್ಧವಾಗಿದ್ದ ಪಕ್ಷದಲ್ಲಿ, ನನ್ನ ನ್ನೂ ಅಲ್ಲಿಗೆ ಕರೆದುಕೊ೦ಡು ಹೋಗು. ನಾನು ನಿನ್ನನ್ನು ಬಿಟ್ಟು ಒಂದು ಅರ್ಧ ಕ್ಷಣವಾದರೂ ಹೇಗೆ ಪ್ರಾಣವನ್ನು ಧರಿಸಿಕೊ೦ ರಿರಲಿ ? Tv | ಕೈಕೇಯಿಗೆ ವರವನ್ನು ಕೊಡುವುದಕ್ಕಾಗಿ ನಮ್ಮ ರಾಜನು ತನ್ನ ಸರಸ್ವವನ್ನೂ ಕೊಟ್ಟು ಕೊಳ್ಳಲಿ;-ನಿನ್ನನ್ನು ಅರಣ್ಯಕ್ಕೆ ಕಳುಹಿಸುವುದಕ್ಕೆ. ನೀನು ಕೈಕೇಯಿಗಾಗಲಿ ದೊರೆಗಾಗಲಿ – ಏನಪರಾಧವಡಿರುವೆ ? F1 ರಾಮ ! ನಿನಗೆ ತಂದೆ ಹೇಗೆ ಗುರುವಾದವನೋ, ನಾನೂ ಹಾಗೆಯೇ ಗುರುವಾದವಳ ಲ್ಲವೆ? ನ್ಯಾಯವಾಗಿ ಅವನಿಗಿಂತಲೂ ನಾನು ಹೆಚ್ಚಲ್ಲವೆ! ಅದು ಕಾರಣ, ಅವನ ಮಾತಿಗಿಂತಲೂ ನನ್ನ ವಖತನ್ನು ಮುಖ್ಯವಾಗಿ ನಡೆಯಿಸಬೇಕಾಗಿರುವುದು, ನಿನ್ನನ್ನು ನಿಮ್ಮ ತಂದೆಯು ಅರ ಣ್ಯಕ್ಕೆ ಹೋಗಬೇಕೆಂದು ಆಜ್ಞಾಪಿಸಿರುವನು; ಎಳ್ಳೆ ಮಗನೇ ? ಹೋಗಕೂಡದೆಂದು ನಾನು ನಿನ್ನನ್ನು ನಿಷೇಧಿಸುವೆನು. (ಎಂದು ಕೌಸಲ್ಯಯು ಹೇಳಿದಳು) ೧o! ಹೀಗೆ ಕಸಿಯಿಂದ ಹೇಳಲ್ಪಟ್ಟ ಬಳಿಕ, ಲಕ್ಷಣನೂ ಕೂಡ, ಕೈಕೇಯಿಯ ಮಾತನ್ನು ಕೇಳಿದವನಾಗಿ ತನ್ನ ಕೋಪದಿಂದ ಮೂರು ಲೋಕವನ್ನೂ ಸುಡುವನಂತೆ ತೋರುತ, ರಾಮ ನನ್ನು ನೋಡಿ ಹೀಗೆ ಹೇಳಿದನು ||೧೧|| - ಅಂಬ! ನಮ್ಮ ರಾಮನು ಸ್ತ್ರೀಯ ಮತಿಗೆ ಕಟ್ಟು ಬಿದ್ದು ಅರಣ್ಯಕ್ಕೆ ಹೋಗುವುದು ನನಗೂ ಇಷ ವಾಗಿಲ್ಲ I೧೨