ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ, (ಸರ್ಗ ನಮೋಸ್ತು ರಾಮಾಯ ಸಲಕ್ಷ್ಮಣಾಯ ದೇವೈ ಚ ತಸ್ಯ ಜನಕಾತ್ಮಜಾಯ್ || ನಮೋಸ್ತು ರುದ್ರಯವಾನಿಲೇಬೊ ನಮೋಸ್ತು ಚನ್ನಾ ರ್ಕಮರುದ್ಧ ಣೇಭ್ಯಃ |೬ || ಏವಂ ನ ಗುರ್ರೋ ದೇರ್ವಾ ಸಮ್ರಾ ರ್ಥಚ ಮುಹುರ್ಮುಹುಃ | ಸೂತಪುತ್ರೋ ಮಹಾಯೋಗಿ ಧ್ಯಾತುಂ ಸಮುಪಚಕ್ರಮೇ ೬! ಹೃತ್ಪಬ್ಬಜೇ ಸಮಾನಂ ಸ್ಟೇನ ಕಲ್ಪಿತವು ಮೇ | ಮುಕ್ಕಾಜಾಲವಿತಾನಾಥ್ ಸಿಂಹಾಸನಗತಂ ಪ್ರಭುಮ್ (vil ಇನ್ಮ ನೀಲದಳಶ್ಯಾಮಂ ಪೀತಕೌಶೀಯವಾಸಸವಮ್ | ದಿಗೀಶರತ್ನಮಕುಟವಿನ್ಯಸ್ತಪದಪಲ್ಲವಮ್ |Fi ಮಣಿಪಾದುಕಪಾದಾಬ್ಬಂ ಯೋಗಿಧೇಯಂ ಸನಾತನಮ್ | ನಾನಾವಿಧಮಣಿಚ ತುಲಾಕೊತಿವಿರಾಜಿತಮ್ ||೧೦|| ವೃತ್ತಪೀನಕಟನ್ಯ ಸರಕನಾರತ್ನಕೊಭಿತಮ್ | ಜಗದಾಧಾರನಳನಕೋಶನಾವಿರಾಜಿತಮ್ ||೧೧|| ಲಕ್ಷಣಸಹಿತನಾದ ಶ್ರೀರಾಮನಿಗೆ ನಮಸ್ಕಾರವು ; ಆ ಜನಕರಾಜಪುತ್ರಿಯಾದ ಸೀತಾ ದೇವಿಗೂ ನಮಸ್ಕಾರವು ; ರುದ್ರ ಇ೦ದ ಯುವ ವಾಯು - ಇವರುಗಳಿಗೂ ನಮಸ್ಕಾರವು ; ಚಂದ, ಸೂರ ಸಕಲದೇವತಾಸಮೂಹ-ಇವರುಗಳಿಗೂ ನಮಸ್ಕಾರವು ||೬|| ಈರೀತಿಯಾಗಿ ಮಹಾಯೋಗಿಯಾದ ಸೂತನುತ ನು, ಗುರುಗಳನ್ನೂ ದೇವತೆಗಳನ್ನೂ ನಮಸ್ಕರಿಸಿ, ಪುನಃ ಪುನಃ ಪ್ರಾರ್ಥನೆಮಾಡಿಕೊ೦ಡು, ಧ್ಯಾನಮಾಡಲುಪಕ್ರಮಿಸಿದನು ||೭|| - ಅಗ ಸೂತನು ತನ್ನ ಹೃದಯಕಮಲದಲ್ಲಿ ಧ್ಯಾನಮಾಡಿದ ಶ್ರೀರಾಮನು ಹೇಗಿದ್ದನೆಂದರೆ:- ಸೂತನಿಂದ ತನ್ನ ಹೃದಯದಲ್ಲಿಯೇ ಒಂದು ದಿವ್ಯಮಂಟಪವು ಕಲ್ಪಿಸಲ್ಪಟ್ಟಿತು; ಅದಕ್ಕೆ ಅನೇಕ ವಾದ ಮುಕಾಸರಗಳಿಂದ ಮೇಲ್ಕಟ್ಟು ಕಟ್ಟಿದ್ದರು. ಆ ಮಂಟಪದೊಳಗೆ ಶ್ರೀರಾಮನು ದಿವ್ಯ ಸಿಂಹಾಸನದ ಮೇಲೆ ಕುಳಿತಿದ್ದನು ||1| ಆಗ ಆ ರಾಮನು, ಇಂದ್ರನೀಲಮಣಿಯಂತೆ ಶ್ಯಾಮವರ್ಣನಾಗಿಯೂ, ಪೀತವರ್ಣವಾದ ದುಕೂಲವನ್ನು ಟ್ಯವನಾಗಿಯೂ ಇದ್ದನು. ಸಮಸ್ತ ದಿಕ್ಷಾಲಕರ ರತ್ನ ಕಿರೀಟಗಳ ಮೇಲೆ ತನ್ನ ಪಾದಪದ್ಮವನ್ನಿಟ್ಟು ಕೊಂಡು ಕುಳಿತಿದ್ದನು |Flu ಪಾದಕಮಲಗಳಿಗೆ ರತ್ನ ಮಯವಾದ ಪಾದುಕೆಗಳನ್ನು ಹಾಕಿಕೊಂಡಿದ್ದನು. ಆ ಸನಾತನ ಮರಿಯನ್ನು ಅನೇಕರಾದ ಯೋಗಿಗಳು ಧ್ಯಾನಮಾಡುತಿದ್ದರು. ಅನೇಕ ರತ್ನ ಖಚಿತವಾದ ಕಾಲುಸರಗಳಿಂದ ವಿರಾಜಿಸುತ್ತಿದ್ದನು |೧೦|| ಅವನ ಕಟಿಪ್ರದೇಶವು ಮರುಳಾಕಾರವಾಗಿಯೂ ಮಾಂಸಲವಾಗಿಯೂ ಇದ್ದಿತು. ಇಂತಹ ಕಟಿಪ್ರದೇಶದಲ್ಲಿ, ದಿವ್ಯವಾದ ರತ್ನಮಯಕಟಿಸೂತ್ರವು ಶೋಭಿಸುತ್ತಿದ್ದಿತು. ಜಗತ್ತಿ ಗೆಲ್ಲ ಆಧಾರವಾದ ನಾಭಿಕಮಲದಿಂದ ಪ್ರಕಾಶಿಸುತ್ತಿದ್ದನು |೧೧|| జన్యు సూ