ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ಅಥ ಬಾಲಕಾಸ್ಟ್‌ ಪಮಃ ಸರ್ಗಃ,

  • ಸೂತಉವಾಚ.

ಯೋಯಂ ಸಾಕ್ಷಾತ್ ಪರಬ್ರಹ್ಮ ಸಚ್ಚಿದಾನನ್ದ ವಿಗ್ರಹಃ | ಏಕಃ ಪರೋಒವ್ಯಯಃ ಸಾಕ್ಷಿ ಕೊಟಸ್ರವ್ಯಕ್ಕೆ ಸಂಜ್ಞಕಃ | ನಿರನೊ ನಿರಾಭಾಸೋ ದುರ್ಜ್ಞೆ ಮಾನವರ್ಜಿತಃ | ನಿರ್ವಿಕಲ್ನೋಕ್ಷಯೋ ಮುಕೊ• ನಿರ್ಗುಣೋ ರೂಪವರ್ಜಿತಃ |೨| ಪಪಟ್ಟೋಪಶಮಃ ಶುದ್ಧಃ ಸರ್ವಯೋನಿರಜಃ ಶುಭಃ | ನಾನ್ತಃಪ್ರಜ್ಞ ನಪ್ರಜ್ಞ ನಾಪ್ರಜೋ ನ ಬಹಿಸ್ತಥಾ ||೩! ಅದೃ= ವ್ಯವಹಾರ ಮನಸೋಪಿ ನಗೋಚರಃ | ಆಕಾಶವತ್ ಸ್ಥಿತೇ ನಿತ್ಯಂ ಸರ್ವತ್ರೆವಂವಿಧೋ ವಿಭುಃ ||8| ಅಪಾಣಿಪಾದೋ ಜವನೋ ಗ್ರಹೀತಾ ಪಠ್ಯತ್ಯಚಕ್ಷುಃ ಸ ಕೃತ್ಯ ಕರ್ಣಃ | ಬಾಲಕಾಣ್ಣದಲ್ಲಿ ಅಚ್ಚನೆಯ ಸರ್ಗವು. ಪೂರೋಕ್ತರೀಯೋಗಿ ಧ್ಯಾನಮಾಡಿದ ಬಳಿಕ ಸೂತರು, ಮುನಿಗಳನ್ನು ಕುರಿತು ಹೇಳಲು ಪಕ್ರಮಿಸಿದರು :- ಅಯ್ಯಾ ಮುನಿಗಳಿರಾ ! ನೀವು ಕೇಳಿದ ಪ್ರಶ್ನೆಗೆ ಉತ್ತರ ಹೇಳುವುದಕ್ಕಿಂತ ಮೊದಲು, ಆತ್ಮಸ್ವರೂಪವನ್ನು ಸ್ವಲ್ಪವಾಗಿ ಹೇಳುವೆನು ; ಅದನ್ನು ಕೇಳುವವರಾಗಿರಿ. ಯಾವ ಸಾಕ್ಷಾತ್ ಪರಬ್ರಹ್ಮಪದಾರ್ಥವಿರುವುದೊ, ಅದು ಸತ್ಯಜ್ಞಾನಾನಂದಸ್ವರೂಪವಾದುದು ; ಅದ್ವಿತೀಯವಾ ದುದುದು ; ಪರಾತ್ಪರ (ಎಲ್ಲಕ್ಕಿಂತ ಆಚೆಯಿರುವುದು) ವಾದುದು ; ಅದಕ್ಕೆ ನಾಶವಿಲ್ಲ; ಅದು ಸತ್ವ ಸಾಕ್ಷಿಯಾದುದು; ಕೂಟಸ್ಥನೆಂದೂ ಅವ್ಯಕ್ತವೆಂದೂ ಅದಕ್ಕೆ ವ್ಯವಹಾರವು ೧! ಆ ಬ್ರಹ್ಮಪದಾರ್ಧವು--ನಿರ್ದೋಷವಾದುದು ; ಯಾವವಿಧವಾದ ಆಭಾಸ (ತೋರುವಿಕೆ) ವೂ ಅದರಲ್ಲಿಲ್ಲ; ಮಾಯಾಧೀನರಾದವರು ಅದನ್ನು ತಿಳಿಯಲಾರರು ; ಇದು ಇಷ್ಟ ಇದೆಯೆಂದು ಪರಿಚ್ಛೇದಮಾಡುವುದು ಸಾಧ್ಯವಲ್ಲ ; ಇದರಲ್ಲಿ ಯಾವ ವಿಕಲ್ಪವೂ ಇಲ್ಲ ; ಇದಕ್ಕೆ ಲಯವಿಲ್ಲ ; ಇದು ಮಯಾಪಾಶದಿಂದ ಮುಕ್ತವಾಗಿರುವುದು; ಇದರಲ್ಲಿ ಯಾವ ಗುಣವೂ ರೂಪವೂ ಇಲ್ಲ | ಸಮಸ್ತ ಪ್ರಪಂಚವೂ ಇದರಲ್ಲಿ ಲಯಹೊಂದುವುದು; ಇದು ಶುದ್ಧವಾದುದು;ಸಮಸ್ತವೂ ಇದರಿಂದಲೇ ಹುಟ್ಟುವುದು; ಇದು ಹುಟ್ಟಿ ತಕ್ಕ ಸ್ಥಳವಾವುದೂ ಇಲ್ಲ; ಇದು ಸರ್ವದಾ ಶುಭ ವಾದುದು; ಇದು ಅಂತಃಪ್ರಜ್ಞ (ಒಳಗೆ ಜ್ಞಾನವುಳ್ಳುದು) ವೂ ಅಲ್ಲ ; ಬಹಿಃಪ್ರಜ್ಞವೂ ಅಲ್ಲ ; ಜ್ಞಾನವುಳ್ಳು ದೂ ಅಲ್ಲ ; ಜ್ಞಾನಹೀನವೂ ಅಲ್ಲ |೩|

  • ಇದು ಯಾರ ಕಣ್ಣಿಗೂ ಗೋಚರವಾಗುವುದಿಲ್ಲ ; ಇದನ್ನು ಹೀಗಿದೆಯೆಂದು ವ್ಯವಹರಿಸು ವುದೇ ಆ ಸಾಧನ; ಕೊನೆಗೆ ಮನಸ್ಸಿಗೂ ಇದು ಗೋಚರವಾಗುವದಿಲ್ಲ; ಆಕಾಶದಂತ ನಿರ್ಲಿ ಪ್ರವಾಗಿ ಸರ್ವವ್ಯಾಪಿಯಾಗಿರುವುದು ೪॥

ಈ ಪರಬ್ರಹ್ಮವಸ್ತುವು, ಕೈಕಾಲುಗಳಿಲ್ಲದುದಾದರೂ ಅತಿವೇಗವಾಗಿ ಸಂಚರಿಸುತ್ತಲೂ