ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ ಮುನಯಃ ಸಲಿಲಾಹಾರಾಃ ವಾಯುಭಕಾಸ್ತಥಾ ಪರೇ || ಆಕಾಶವಿಲಯಾಳ್ಮೆವ ತಥಾ ಸ್ಥಲಕಾಯಿನಃ ||8|| ಸದೋಪವಾಸಿನೊ ದಾನ್ಯಾಃ ತಥಾರ್ದಪಟವಾಸಸಃ | ಸಹಬಾಳ್ಮೆ ತಪೋನಿತ್ಯಾ ತಥಾ ಪಞ್ಚ ತಗೋತಾಃ ||೫|| ಸರ್ವ ಬ್ರಾಹ್ಮಾ ಶಿಯಾ ಜುಮ್ಮಾ ದೃಢಯೋಗಾಃ ಸಮಾಹಿತಾಃ | ಕರಭಬಾ ಕಮೇ ರಾಮಂ ಅಭಿಜಗ್ಗು ತಾಪಸಃ ||೬|| ದೃಪ್ಲಾ ಮುನಿಸಮೂಹಂ ತೇ ಜಾನಕೀರಾಮಲಕ್ಷಣಾಃ | ಪಣ್ಮುಃ ಸಹಸಾ ಭೂಮೌ ಮಾಯಾಮಾನುಸರೂಪಿಣ8 ||೭|| ಆಶೀರ್ಭಿರಭಿನನ್ನಾಧ ಮುನಯಸತ್ಯದರ್ಶಿನಃ ಊಚುಃ ಪ್ರಲಯಃ ಸರ್ವೆ ರಾಮಂ ಸರ್ವಹೃದಿ ಸ್ಥಿತಮ್ ||೯|| ಭೂಮೇರ್ಘಾರಾವತಾರಾಯ ಜಾತೋ ಬ್ರಹ್ಮಣಾರ್ಧಿತಃ | ಜಾನೀಮಸ್ಕಾಂ ಹರಿಂ ಲಕ್ಷ್ಮಿಂ ಜಾನಕೀಂ ಲಕ್ಷ್ಮಣಂ ತಥಾ ||೯|| - -- ಇನ್ನೂ, ಕೆಲವುಮಂದಿ ಮುನಿಗಳು ಜಲಾಹಾರರಾಗಿಯೂ, ಕೆಲವರು ವಾಯುಭಕ್ಷಕ ರಾಗಿಯೂ, ಕೆಲವರು ಆಕಾಶದಲ್ಲಿ ವೃಕ್ಷಾದಿಗಳೊಳಗೆ ವಾಸಮಾಡತಕ್ಕವರಾಗಿಯೂ, ಕೆಲವರು ಸ್ಥಂಡಲದಲ್ಲಿ ಶಯನಮಾಡತಕ್ಕವರಾಗಿಯ ಇದ್ದರು ||೪|| - ಮತ್ತು, ಕೆಲವರು ಸರ್ವದಾ ಉಪವಾಸಶೀಲರಾಗಿ ಇಂದ್ರಿಯಗಳನ್ನು ಜಯಿಸಿ ಆದ್ರ್ರ ವಸ್ತ್ರವನ್ನುಟ್ಟಿರುವರಾಗಿಯೂ, ಕೆಲವರು ಕೇವಲ ಜಪನಿರತರಾಗಿಯೂ, ಕೆಲವರು ಕೇವಲ ತಪೋನಿಷ್ಠರಾಗಿಯ, ಕೆಲವರು ಪಂಚಾಗ್ನಿ ಮಧ್ಯದಲ್ಲಿ ತಪಸ್ಸು ಮಾಡತಕ್ಕವರಾಗಿಯ ಇದ್ದರು ||೫|| ಹೀಗೆ ಮಹಾ ಬ್ರಹ್ಮತೇಜಸ್ಸಮನ್ವಿತರಾಗಿಯ, ಯೋಗನಿಷ್ಠೆಯಿಂದ ಸಮಾಧಿ ಸಂಪನ್ನ ರಾಗಿಯೂ ಇರುವ ಆ ಸಮಸ್ತ ಮಹರ್ಷಿಗಳೂ ಕೂಡ, ಶರಭಂಗಮುನಿಯ ಆಶ್ರಮದಲ್ಲಿದ್ದ ಶ್ರೀರಾಮನ ಸಮೀಪಕ್ಕೆ ಬಂದವರಾದರು # ೬ || ಹೀಗೆ ತಮ್ಮ ಹತ್ತಿರಕ್ಕೆ ಬಂದ ಖುಷಿ ಸಮೂಹವನ್ನು ಕಂಡು, ಮಾಯೆಯಿಂದ ಮನುಷ್ಯ ರೂಪವನ್ನು ಧರಿಸಿರುವ ಆ ಸೀತಾ ರಾಮ ಲಕ್ಷ್ಮಣರು, ಆ ಕ್ಷಣವೇ ನೆಲಕ್ಕೆ ಬೊಗ್ಗಿ ನಮಸ್ಕಾರ ಮಾಡಿದರು ||2|| ಅನಂತರ, ತತ್ವಜ್ಞಾನಸಂಪನ್ನರಾದ ಆ ಸಮಸ್ತ ಮುನಿಗಳೂ, ಸರ್ವಲೋಕಹೃದಯ ನಿವಾಸನಾದ ಶ್ರೀರಾಮನನ್ನು ಆಶೀರ್ವಾದದಿಂದ ಅನುಗ್ರಹಿಸಿ, ಬಳಿಕ ತಾವು ಅಂಜಲಿಬಂಧ ಮಾಡಿಕೊಂಡು ಹೀಗೆ ಪ್ರಾರ್ಥಿಸಿದರು ||೮|| ಭೋಳಿ ಸ್ವಾಮಿ...! ನೀನು ಬ್ರಹ್ಮನಿಂದ ಪ್ರಾರ್ಥಿಸಲ್ಪಟ್ಟ ವನಾಗಿ ಭೂಮಿಯ ಭಾರವನ್ನು ಇಳುಹುವುದಕ್ಕೋಸ್ಕರ ಅವತರಿಸಿರುವೆ ನೀನು ಎಷ್ಟು ಎಂಬುದಾಗಿಯೂ, ಸೀತೆಯು ಮಹಾ