ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡ ಚತುರ್ಭುಜಂ ಕಜ್ಜಚಕ್ರಗದಾಪಜಧಾರಿಣಮ್ | ಕಿರೀಟಹಾರಕೇಯೂರರತ್ನಕುಲಮಣ್ಣತಮ್ ||೧೧|| ದೇವತಾಗುರುಮನ್ನಾಣಾಂ ಭಾವಯೇದೈಕೃವಾತ್ಮನಾ ||೧೨|| ಏವಂ ಧ್ಯಾತ್ವಾರ್ಚಯಿತ್ವಾಥ ಮನಸ್ಯವ ರಘೋತ್ತಮಮ್ | ತದನುಜ್ಞಾಂ ತತೋ ಅಬ್ಬಾ ಬಾಹ್ಯಪೂಜಾಂ ಸಮಾಚರೇತ್ ||೧೩|| ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಮ್ | ಕುರ್ಯಾಧ್ವಾರವಂ ತತ್ರ ದೇವತಾಹ್ವಾನಕಾರಣಮ್ || ೧೪ || ಯೋ ದೇವಃ ಪೂಜಕಶ್ಚಾಥ ಪೂಜಾದ್ರವ್ಯಾಣಿ ತತ್ಪಲಮ್ | ಪಾಣಬುದ್ಧಾದಿಕಂ ಸರ್ವಂ ತಸ್ಕೃ ರಾಮಾತ್ಮನೇ ನಮಃ || ೧೫ ಅನೇನ ಮನುನಾ ನತಾ ದ್ವಾರದೇರ್ವಾ ಪಪೂಜಯೇತ್ | ಓಂ ನಮೋ ರಾಮಭದ್ರಾಯ ಗಂ ಗಣೇಶಾಯ ತೇ ನಮಃ || ೧೬ || ಸಂ ಸವಿತ್ರೇ ಹೌಂ ಶಿವಾಯ ಐಂ ಶ್ರೀಂ ಹಿ೦ ಪರಶಕ್ತಯೇ || ದಿಂ ದೀಪನಾಥಾಯ ನಮಃ ಓಂ ಕ್ಷೇತ್ರಪಾಲಾಯ ನಮಃ ||೧೬|| ಮತ್ತು, ಆ ಶ್ರೀರಾಮನನ್ನು, ಶಂಖ ಚಕ್ರ ಗದಾ ಕಮಲಗಳನ್ನು ಧರಿಸಿರ ತಕ್ಕವನನ್ನಾಗಿಯ, ಕಿರೀಟ ಹಾರ ಕೇಯರ ರತ್ನ ಕುಂಡಲಗಳಿಂದ ಅಲಂಕೃತನನ್ನಾಗಿಯ ಧ್ಯಾನಿಸಬೇಕು ||೧೧|| ಹೀಗೆ ಧ್ಯಾನಿಸುತ, ದೇವತೆ ಗುರು ಮಂತ್ರಗಳಿಗೂ ತನಗೂ ಐಕ್ಯವನ್ನು ಭಾವನೆ ಮಾಡ ಬೇಕು ಹೀಗೆ ಧ್ಯಾನಮಾಡಿ, ಅನಂತರ ಮನಸ್ಸಿನಲ್ಲಿಯೇ ಶ್ರೀರಾಮನನ್ನು ಅರ್ಚಿಸಿ, ಆ ಮೇಲೆ ಪೂಜಾರ್ಥವಾಗಿ ಅವನಿಂದ ಅನುಜ್ಞೆಯನ್ನು ಬೇಡಿ, ಬಾಹ್ಯಪೂಜೆಯನ್ನು ಪ್ರಾರಂಭಿಸಬೇಕು || ಈ ಜಾಹೃಪೂಜಾ ಕ್ರಮ ಹೇಗೆಂದರೆ,-ದೇವತೆಗಳ ಆಗಮನಾರ್ಧವಾಗಿಯ, ರಾಕ್ಷಸರ ನಿರ್ಗಮನಾರ್ಧವಾಗಿಯ, ದೇವತಾಸಾನ್ನಿಧ್ಯ ಹೇತುವಾದ ಘಂಟಾಧ್ವನಿಯನ್ನು ಪ್ರಜಾಪ್ರ ರಂಭದಲ್ಲಿ ಮಾಡಬೇಕು ||೧೪|| ಒಳಿಕ ಈ ಮಂತ್ರದಿಂದ ಶ್ರೀರಾಮನನ್ನು ನಮಸ್ಕರಿಬೇಕು, ಯಾವ ಶ್ರೀರಾಮನು ದೇವರಾಗಿಯ ಪೂಜಕನಾಗಿಯ ಪೂಜಾದ್ರವ್ಯಗಳಾಗಿಯ ಪೂಜಾಫಲವಾಗಿಯ ಪ್ರಾಣ ಬುದ್ದಿ ಮೊದಲಾದ ಸಮಸ್ತ ವಸ್ತುವಾಗಿಯೂ ಇರುವನೋ, ಅಂತಹ ಶ್ರೀರಾಮಚಂದ್ರಸ್ವಾಮಿಗೆ ನಮಸ್ಕಾರವು ||೧೨|| ಈ ಮಂತ್ರದಿಂದ ಶ್ರೀರಾಮನನ್ನು ನಮಸ್ಕರಿಸಿ “ ಓಂ ರಾಮಭದ್ರಾಯನಮಃ, ಗಂ ಗಣೇ ಶಾಯನಮಃ, ಓಂ ಸವಿನಮಃ, ಹೌ ಶಿವಾಯನಮಃ, ಐಂ ಶ್ರೀಂ ಪರಶಕ್ತಯೇನಮಃ, ದಿಂ ದೀಪನಾಥಾಯನಮಃ ಕ್ಷಂ ಕ್ಷೇತ್ರಪಾಲಕಾಯನಮಃ ' ಎಂಬ ಮಂತ್ರಗಳಿಂದ ದ್ವಾರ ಪಾಲಕರನ್ನು ಪೂಜಿಸಬೇಕು ||೧೬-೧೭||