ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಅರಣ್ಯಕಾಂಡಃ ಅಥ ಶ್ರೀಮದರ ಕಾಣೋ ಸಸ್ಯ ಸರ್ಗಃ, --••west Kಣ | ಶ್ರೀಪಾರ್ವತ್ಯುವಾಚ ಭಗರ್ವ ಕರುಣಾನಿನ್ನೂ ಸುತೀಕ್ಷೆ ನೈವಮರ್ಜಿತಃ | ರಾಮಚನಃ ಕಿಮಕರೋತ' ವದ ಮೇ ದಯಯಾ ಪ್ರಭೋ ||೧|| ಶಿಶಿವಉವಾಚ ತತೋ ರಾಮಃ ಸುಕ್ಸ್ನ ಪೂಜಿತಃ ಪ್ರಪಿತಸ್ತಥಾ | ಅಗಸ್ಯನ್ಯಾಶನಪದಂ ಜಗಾಮ ಸಹ ನೀತಯಾ ||೨|| ಗಚ್ಚವ ಶನೈರಾಮೋ ಲಕ್ಷ್ಮಣಂ ವಾಕ್ಯಮಬ್ರವೀತ್ ॥೩॥ ನಿರ್ಜಿತೋಯಂ ಹಿ ದುರ್ಮಾರ್ಗಕ ಕಣ್ಣಕಾವರಾನ್ಸಿತಃ | ಸರ್ವೇ ವೃಕ್ಷಾ ನಿಪ್ಪಲಾಶ್ಚ ಲತಾಃ ಪುಪ್ಪವಿವರ್ಜಿತಾಃ | ಶನೈರ್ವಿಕಮ್ಯ ಗಚ್ಛಾಮಃ ತರುಚ್ಛಾಯಾಸು ಲಕ್ಷ್ಮಣ |||| ಅರಣ್ಯಕಾಂಡದಲ್ಲಿ ಅರನೆಯ ಸರ್ಗವು. ಶ್ರೀ ಪಾಶ್ವತಿಯು ಪರಮೇಶ್ವರನನ್ನು ಕುರಿತು ಪ್ರಾರ್ಥಿಸುವಳು – ಭಗವಂತನೆ ! ಕೃಪಾಸಾಗರನೆ ! ಸತ್ವಲೋಕಮಹೇಶ್ವರನೆ ! ನೀನು ಪೂತ್ವದಲ್ಲಿ ಹೇಳಿ ದಂತೆ ಸುತೀಕ್ಷ್ಯನಿಂದ ಪೂಜಿಸಲ್ಪಟ್ಟ ಒಳಿಕ ಶ್ರೀರಾಮಚಂದ್ರನು ಏನು ಮಾಡಿದನು ? ಇದನ್ನು ನನಗೆ ಅನುಗ್ರಹಿಸಿ ಹೇಳುವನಾಗು ||೧|| ಶ್ರೀ ಪರಮೇಶ್ವರನು ಉತ್ತರ ಹೇಳುವನು - ಎಲೌ ಪಾಶ್ವತಿ ! ಬಳಿಕ ರಾಮಚಂದ್ರನು ಸುತೀಕ್ಷ್ಯನಿಂದ ಪೂಜಿತನಾಗಿ, ಅವನಿಂದ ಕಳುಹಲ್ಪಟ್ಟು, ಶ್ರೀ ಸೀತಾದೇವಿಯೊಡನೆ ಅಗಸ್ತ್ರಮುನಿಯ ಆಶ್ರಮ ಪ್ರದೇಶವನ್ನು ಕುರಿತು ಹೊರಟವನಾದನು ||೨|| ಮಾರ್ಗದಲ್ಲಿ ಹೋಗುತಿರುವನಾಗಿಯೇ, ಲಕ್ಷ್ಮಣನನ್ನು ಕುರಿತು ಮೆಲ್ಲಗೆ ವತ್ಸ! ಲಕ್ಷ್ಮಣ ! ಬಹು ಕಂಟಕಾವೃತವಾಗಿದ್ದ ಈ ಕೆಟ್ಟ ವಾರಿಯು ಕಳೆದುಹೋಯ್ತು ಈ ದಾರಿ ಯಲ್ಲಿದ್ದ ಸಮಸ್ತವೃಕ್ಷಲತೆಗಳೂ, ನಿಷ್ಪಲಗಳಾಗಿಸಿ ಪುಷ್ಪವರ್ಜಿತವಾಗಿಯೂ ಇರುವುವು ಇನ್ನು ಈ ಮರಗಳ ನೆಳಲಲ್ಲಿ ವಿಶ್ರಮಿಸಿಕೊಂಡು ಮೆಲ್ಲನೆ ಹೋಗುವ' ಎಂದು ಹೇಳಿದನು |