ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ 1.ಹ ರಾಮಾಯಣಂ | Alth ಶ್ರೀ ತತ್ವ ಸಂಗ್ರಹ ರಾಮಾಯಣಂ ತದ್ದರ್ಶನಂ ೪5 ಸ್ನಾನಂ ಚ ದೇವಾನಾಮಪಿ ದುರ್ಲಭಮ್ | ಅಲ್ಪಪ್ರವತಾಂ ದೇವಿ ನ ಕಥಂ ದುರ್ಲಭಂ ಕಲೌ ||೧೦|| ಏಕದಾ ಲಕ್ಷ್ಮಣ್ ರಾಮಂ ಏಕಾಕ್ಕೇ ಸುಖನಾಸ್ಥಿತಮ್ | ವಿನಯಾವನತೋ ಭೂತ ಪಪ್ರಚ ಪರಮೇಶ್ವರಮ್ ||೧೧|| ಭಗರ್ವ ತುಮಿಚ್ಛಾಮಿ ಮೋಕ್ಷಸ್ಯೆಕಾನಿಕೀಂ ಗತಿಮ್ | ತತಃ ಕಮಲಪತ್ರಾಕ್ಷ ಸಂಕ್ಷೇಪದಕುಮರ್ಹಸಿ ||೧೦| ಜ್ಞಾನ ವಿಜ್ಞಾನಸಹಿತಂ ಭಕ್ತಿ ವೈರಾಗ್ಯವೃಂಹಿತಮ್ | ಆಚಕ್ಷ ಮೇ ರಫುಶ್ರೇಷ್ಠ ವಕ್ಕಾ ನಾಸ್ತಿ ಭೂತಲೇ || ೧೩! ಶ್ರೀರಾಮಉವಾಚ ಕೃಣು ವಕ್ಷ್ಯಾಮಿ ತೇ ವತ್ಥ ಗುಹ್ಯಾದ್ದು ಹೃತಮಂ ಪರಿಮ್ | ಯತ್ನಿ ಜ್ಞಾಯ ನರೋ ಜಹಾನ್' ಸದ್ಯ ವೈಕಲ್ಸಿಕಂ ಭ್ರಮಮ್ | --- ಆ ಭದ್ರಾದ್ರಿಯಲ್ಲಿರುವ ಶ್ರೀಪರಮಾತ್ಮನ ದರ್ಶನವೂ, ಗೌತಮಾನದಿಯಲ್ಲಿ ಸ್ನಾನವೂ ಕೂಡ, ದೇವತೆಗಳಿಗೂ ದುರ್ಲಭವಾಗಿರುವುವು, ಹೀಗಿರುವಾಗ, ಎಲೌ ಪಾಶ್ವತಿ! ಕಲಿಯುಗದಲ್ಲಿ ಅಲ್ಪಪುಣ್ಯರಾಗಿರುವ ಜನರಿಗೆ ಅದು ಹೇಗೆತಾನ ದುರ್ಲಭವಾಗದಿರುವುದು ? ||೧೦|| ಹೀಗೆ ಅವರು ಗೌತಮಿಾತೀರದಲ್ಲಿ ವಾಸಮಾಡಿಕೊಂಡಿರುವಾಗ, ಒಂದು ಸಮಯದಲ್ಲಿ ಏಕಾಂತವಾಗಿ ಸುಖಾಸೀನನಾಗಿರುವ ಪರಮೇಶ್ವರನಾದ ಶ್ರೀರಾಮಚಂದ್ರನನ್ನು ಕುರಿತು, ಲಕ್ಷ್ಮ ಣನು ವಿನಯದಿಂದ ನಮ್ರನಾಗಿ ಹೀಗೆ ಪ್ರಾರ್ಥಿಸಿದನು ||೧೧|| ಪೂಜ್ಯನೆ' ಮೋಕ್ಷಕ್ಕೆ ಮುಖ್ಯವಾದ ಉಪಾಯವನ್ನು ನಿನ್ನ ಮುಖದಿಂದ ಕೇಳಬೇಕೆಂದು ಇಚ್ಚಿಸುವೆನು ಒಲೈ ಪುಂಡರೀಕಾಕ್ಷನೆ ! ನೀನು ಅನುಗ್ರಹವಿಟ್ಟು ಇದನ್ನು ನನಗೆ ಹೇಳಬೇ ಕೆಂದು ಕೇಳಿಕೊಳ್ಳುವೆನು ||೧೨|| ಎಲೈ ರಘುಶ್ರೇಷ್ಟನೆ! ವಿಜ್ಞಾನ ಸಹಿತವಾಗಿಯೂ ಭಕ್ತಿ ವೈರಾಗ್ಯಗಳೊಡನೆ ಯುಕ್ತವಾ ಗಿಯ ಇರುವ ಜ್ಞಾನದ ಸ್ವರೂಪವನ್ನು ನೀನು ನನಗೆ ಉಪದೇಶಿಸುವನಾಗು ಈ ಭೂಮಂ ಡಲದೊಳಗಾಗಿ ನಿನ್ನನ್ನು ಬಿಟ್ಟರೆ ಮತ್ತಾರೂ ಇದನ್ನು ಉಪದೇಶಿಸತಕ್ಕವರಿಲ್ಲ ||೧೩|| ಇದನ್ನು ಕೇಳಿ ಶ್ರೀರಾಮನು ಉಪದೇಶಿಸುವನು - ವತ್ವ! ರಹಸ್ಯಗಳಲ್ಲೆಲ್ಲ ಅತಿರಹಸ್ಯವಾಗಿರುವ ಈ ವಿಷಯವನ್ನು ನಾನು ನಿನಗೆ ಉಪ ದೇಶಿಸುವೆನು, ಕೇಳು ಇದನ್ನು ತಿಳಿದುಕೊಂಡರೆ, ಪುರುಷನು ಆ ಕ್ಷಣವೇ ತನ್ನ ಮನೋವಿಕ ಲ್ಪದಿಂದ ಉಂಟಾಗಿರುವ ಭ್ರಮೆಯನ್ನೆಲ್ಲ ಬಿಟ್ಟು ಬಿಡುವನು ||೧೪||