ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮೯ ಬ ಬ ಅಧ್ಯಾ ೮.] ದಶಮಸ್ಕಂಧವು ಮುಖವನ್ನು ನೋಡಿ ನಗುತ್ತ ಸುಮ್ಮನೆ ನಿಂತುಬಿಡುವಳು. ಮತ್ತು ಓ ಪರೀ | Yಾಜಾ ? ಮತ್ತೊಮ್ಮೆ ನಂದಗೋಕುಲದಲ್ಲಿದ್ದ ಕಲವುಗೋಪಿಯ ರು, ಈ ಕೃಷ್ಣನ ಹಾವಳಿಯನ್ನು ತಡೆಯಲಾರದೆ, ಆ ಕಳ್ಳಕೃಷ್ಣನನ್ನು ಕೈಹಿಡಿಯಾಗಿ ಹಿಡಿದು ತಂದು ಯಶೋದೆಗೆ ತೋರಿಸಬೇಕೆಂದು ನಿಶ್ಚ ಯಿತು, ತಮ್ಮ ತಮ್ಮ ಮನೆಗಳಲ್ಲಿ ಆ ಕೃಷ್ಣನು ಬರುವ ಹೊತ್ತನ್ನೇ ನಿರೀಕ್ಷೆ ಸುತ್ತ, ಹಗಲುರಾತ್ರಿಯೂ ಎಚ್ಚೆ ರತಂದ ಕಾದಿರು, ಸತ್ವ ಸಾಕ್ಷಿಯಾದ ಕೃಷ್ಣನ. ಇದನ್ನು ತಿಳಿದುಕೊಂಡು, ಬೇರೆಬೇರೆ ಅನೇಕಕೃಷ್ಣನಾಗಿ, ಎಲ್ಲರ ಮನೆಗೂ ಏಕಕಾಲದಲ್ಲಿ ಪ್ರವೇತಿಸಿಬಿಟ್ಟನು. ಆ ಗೆ ಪಿಯರೆಲ್ಲರೂ ಕ ಕೃನು ಕೈಗೆ ಸಿಕ್ಕಿದನೆಂಬ ಸಂತೋಷದಿಂದ, ಒಬ್ಬೊಬ್ಬರೂ, ಅವರವರ ಕೈಗೆ ಸಿಕ್ಕಿದ ಕೃಷ್ಣನನ್ನು ಬಲಾತ್ಕಾರದಿಂದ ಎತ್ತಿಕೊಂಡು ಯಶೋ ದೆಗೆ ತೋರಿಸಬೇಕೆಂದು ಕರೆ ತಂದರು. ಅವರು ಯಶೋದೆಯ ಮುಂದೆ ಬಂದುಸಿಂತು, ಆ ಕೃಷ್ಣನಮೇಲೆ ದೂರುಹೇಳುವುದಕ್ಕೆ ಬಾಯೆತ್ತು ವಷ್ಟರೊಳಗಾಗಿ, ತಮ್ಮ ಕಕಲ್ಲಿದ್ದ ಕೃಷ್ಣನನ್ನು ಕಾಣದೆ, ನಿಜವಾದ ಕೃ ವ್ಯನೊಬ್ಬನುಮಾತ್ರ ತಾಯಿಯ ಬಳಿಯಲ್ಲಿ ನಿಂತಿರುವುದನ್ನು ಕಂಡು, ಮುಂದೆ ಬಾ ಯೆತ್ತುವುದಕ್ಕೆ ಅವಕಾಶವಿಲ್ಲದೆ, ಎಲ್ಲರೂ ಲಜ್ಜಿತರಾಗಿ ತಾವು ಬಂದ ದಾರಿಯನ್ನು ಹಿಡಿದು ಸುಮ್ಮನೆ ಹಿಂತಿರುಗಿದರು. ಓ ಪರೀಕ್ಷೆ ಬ್ರಾ ಜಾ ! ಹೀಗೆ ಕೃಷ್ಣನು ನಂದ ಗೋಕುಲದಲ್ಲಿ. ತನ್ನ ವಿಚಿತ್ರ ಲೀಲೆಗಳಿಂದ ಎಲ್ಲರನ್ನೂ 'ಮೋಹಗೊಳಿಸುತ್ತಿದ್ದನು. - +++ ಒಶ್ವರಪ ಪ್ರದರ್ಶನವೂ •w ಮತ್ತೊಮ್ಮೆ ಕೃಷ್ಣ ಬಲರಾಮರಿಬ್ಬರೂ ಇತರಗೊಪಾಲಬಾಲಕರೊ ಡವೆ ಏನೋ ಒಂದ ಆಟವಾಡುತ್ತಿರ.ವಾಗ,ಕೃಷ್ಣ ಮಣ್ಣು ತಿಂದುದನ್ನು ನೋಡಿ, ಬಲರಾಮನೂ, ಇತರ ಗೋಪಾಲಕರೂ ಯಶೋದೆಯ ಬಳಿಗೆ ಬಂದು “ ಅಮ್ಮ ಯಶೋದೆ ! ನಿನ್ನ ಮಗನು ಮಣ್ಣನ್ನು ತಿಂದಿರು ವನು” ಎಂದು ದೂರುಹೇಳಿದರು. ಇದನ್ನು ಕೇಳಿದೊಡನೆ, ಯಶೋ ದೆಯ ತಟ್ಟನೆ ಬಂದು, , ಭಯಚಂಚಲವಾದ ದೃಷ್ಟಿಯಿಂದ ತನ್ನನ್ನೇ ಇದಿರುನೋಡುತ್ತ ನಿಂತಿದ್ದ ಆ ಕೃಷ್ಣನ ಕೈಯನ್ನು ಹಿಡಿದು 11 ಎ